UN NETWORKS
ಬೋಳಿಯಾರ್ : ಸ್ವಾಗತ್ ಗ್ರೂಪ್ ಆಪ್ ಕಂಪೆನಿಯ ನೂತನ ಸಂಸ್ಥೆ ಸ್ವಾಗತ್ ಆಡಿಟೋರಿಯಂ ಬೋಳಿಯಾರ್ ನಲ್ಲಿ ಶುಭಾರಂಭಗೊಂಡಿತು.

















ಮುಡಿಪು ಎಜ್ಯು ಪಾರ್ಕ್ ನ ವಿದ್ಯಾಸಂಸ್ಥೆ ಸ್ಥಾಪಕಾಧ್ಯಕ್ಷ ಸಯ್ಯದ್ ಮುಹಮ್ಮದ್ ಅಶ್ರಫ್ ಸಖಾಫತ್ ತಂಙಳ್ ಆದೂರು ಉದ್ಘಾಟಿಸಿದರು. ಸಯ್ಯದ್ ಪಾಣಕ್ಕಾಡ್ ಹಾರಿಸ್ ಅಲೀ ಶಿಹಾಬ್ ತಂಙಳ್ ದುಅ ನೆರವೇರಿಸಿ ಶುಭಹಾರೈಸಿದರು. ಸ್ವಾಗತ್ ಗ್ರೂಪ್ ಆಫ್ ಕಂಪೆನಿಯ ಅಡಳಿತ ನಿರ್ದೇಶಕ ಹಾಜಿ ಅಬೂಬಕ್ಕರ್ ಹಾಜಿ ಸ್ವಾಗತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿದರು. ಬಿಜೆಪಿ ಮಂಗಳೂರು ವಿಧಾನ ಸಭಾ ಕ್ಷೇತ್ರ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು, ರಘುರಾಮ ತಂತ್ರಿಗಳು, ಮಂಗಳೂರು ತಾ.ಪಂ ಸದಸ್ಯ ಜಬ್ಬಾರ್ ಬೋಳಿಯಾರು, ಬೋಳಿಯಾರು ಗ್ರಾ.ಪಂ ಸದಸ್ಯ ಅಬ್ದುಲ್ ಶುಕೂರು, ಪಾರ್ಟಿಕ್ ಸ್ಟಾನಿ ವಾಝ್, ಬೋಳಿಯಾರು ಜುಮಾ ಮಸೀದಿಯ ಅಧ್ಯಕ್ಷ ಹನೀಫ್, ಗೌಸಿಯಾ ಜುಮಾ ಮಸೀದಿ ಕುಕ್ಕೋಟ್ಟು ಅಧ್ಯಕ್ಷ ಅಬ್ದುಲ್ ಲತೀಫ್, ಬದ್ರಿಯ ಜುಮಾ ಮಸೀದಿ ರಂತಡ್ಕ ಅಧ್ಯಕ್ಷ ಅಬ್ದುಲ್ ಖಾದರ್, ಶರೀಫ್ ಅರ್ಶದಿ, ಎಸ್ಕೆಎಸ್ಸೆಸ್ಸೆಫ್ ಮುಖಂಡ ಅಬ್ದುಲ್ ರಹ್ಮಾನ್ ತಬೂಕ್ ದಾರಿಮಿ, ಕುಂಡೂರು ಜುಮಾ ಮಸೀದಿ ಖತೀಬ್ ರಶೀದ್ ಯಮಾನಿ, ಜಮೀಯ್ಯತುಲ್ ಮುಹಲಿಮೀನ್ ದೇರಳಕಟ್ಟೆ ವಲಯಾಧ್ಯಕ್ಷ ಅಬ್ದುಲ್ ಲತೀಫ್ ದಾರಿಮಿ, ಗೋಲ್ಡ್ ಹೌಸ್ ನ ಮಾಲಕ ಅಬ್ದುಲ್ ಮಜೀದ್, ದೇರಳಕಟ್ಟೆ ಪಬ್ಲಿಕ್ ಸ್ಕೂನ್ ಟ್ರಸ್ಟ್ ನ ಅಧ್ಯಕ್ಷ ಅಬೂಬಕ್ಕರ್ ಹಾಜಿ ನಾಟೆಕಲ್, ಅನ್ಸಾರುಲ್ ಮುಸ್ಲಿಮೀನ್ ಅಸೋಶಿಯೆಷನ್ ನ ಕಾರ್ಯದರ್ಶಿ ರಶೀದ್ ಡಿ.ಎಂ,ಸ್ವಾಗತ್ ಗ್ರೂಪ್ ಆಫ್ ಕಂಪೆನಿಯ ಅಸ್ವಾದ್ ಸ್ವಾಗತ್ ಉಪಸ್ಥಿತರಿದರು.
ಸ್ವಾಗತ್ ಗ್ರೂಪ್ ಆಫ್ ಕಂಪೆನಿಯ ಅಝ್ಮಲ್ ಸ್ವಾಗತಿಸಿದರು. ವಿ.ಜೆ ಆಶೀಕ್ ವಂದಿಸಿದರು. ನೌಫಲ್ ಕೆ.ಬಿ.ಎಸ್ ಕಾರ್ಯಕ್ರಮ ನಿರೂಪಿದರು.
ವಿಶಾಲವಾದ ಸಭಾಂಗಣ, ಸುಸಜ್ಜಿತ ಪಾರ್ಕಿಂಗ್, ಅತ್ಯಾಧುನಿಕ ಸೌಲಭ್ಯವನ್ನೊಳಗೊಂಡ ನೂತನ ಸ್ವಾಗತ್ ಆಡಿಟೋರಿಯಂ ನಲ್ಲಿ ಮದುವೆ, ಮೆಹಂದಿ, ಮತ್ತಿತರ ಶುಭ ಸಮಾರಂಭಗಳಿಗೆ ಈಗಾಗಲೇ ಬುಕಿಂಗ್ ಪ್ರಾರಂಭಗೊಂಡಿದೆ.


