ಉಳ್ಳಾಲ್ ನ್ಯೂಸ್ ಡೆಸ್ಕ್
ಬೆಳ್ಮ : ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಬೆಂಬಲದಿಂದ ಸ್ಪರ್ಧಿಸಿದ್ದ ತಂದೆ ಮಗಳು ಇಬ್ಬರೂ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಬೆಳ್ಮ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಉಸ್ಮಾನ್ ಅಕ್ಸಾ ಎರಡನೇ ಬಾರಿ ಆಯ್ಕೆಯಾದರೆ , ಪ್ರಥಮ ಬಾರಿ ಸ್ಫರ್ಧಿಸಿದ ಅವರ ಮಗಳು ಸುಹೈಲಾ ಉಸ್ಮಾನ್ ಕೂಡಾ ಆಯ್ಕೆಯಾಗುವ ಮೂಲಕ ಒಂದೇ ಪಂ.ಗೆ ತಂದೆ-ಮಗಳು ಇಬ್ಬರು ಸದಸ್ಯರಾಗಿದ್ದಾರೆ. ಉಸ್ಮಾನ್ ಅಕ್ಸಾ ಮಂಗಳೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷನಾಗಿದ್ದರೆ, ಸುಹೈಲಾ ಬಿ.ಎಸ್ಸಿ ಪದವೀಧರೆಯಾಗಿದ್ದಾಳೆ.


