UN NETWORKS
ಉಳ್ಳಾಲ: ವರ್ಷಗಳಿಂದ ಸಮಸ್ಯೆಯ ಕೂಪದಲ್ಲಿ ನಡೆಯುತ್ತಿದ್ದ ವೀರರಾಣಿ ಅಬ್ಬಕ್ಕ ಉತ್ಸವ ಈ ಬಾರಿ ಕಡಲತೀರದಲ್ಲಿ ಅದ್ಧೂರಿಯಾಗಿ ಜಿಲ್ಲಾಡಳಿತ ನೇತೃತ್ವದಲ್ಲಿ ನಡೆಯಲಿದೆ. ಜನ ತಮ್ಮೆಲ್ಲರ ಉತ್ಸವ ಎಂದು ಮನಗಂಡು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು.
ಸ್ವಚ್ಛತಾ ಕಾರ್ಯದಲ್ಲಿ ಟಿಪ್ಪು ಸುಲ್ತಾನ್ ಕಾಲೇಜು, ಬಿ.ಎಂ ಶಾಲೆ, ಮೆರೇಡಿಯನ್ ಕಾಲೇಜು, ಪಾಂಡ್ಯರಾಜ್ ಬಳ್ಳಾಲ್ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಉಳ್ಳಾಲ ನಗರಸಭೆ ಪೌರಾಯುಕ್ತೆ ವಾಣಿ.ವಿ.ಆಳ್ವ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸಿಇಓ ಸೆಲ್ವ ಮಣಿ.ಆರ್, ಪಣಂಬೂರು ಬೀಚ್ ಅಭಿವೃದ್ಧಿಯ ಯತೀಶ್ ಬೈಕಂಪಾಡಿ, ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಭರತ್ ಕುಮಾರ್ ಉಳ್ಳಾಲ್, ಮಾರುತಿ ಯುವಕ ಮಂಡಲದ ಮನೋಜ್ ಸಾಲಿಯಾನ್, ಸಿಸಿಎನ್ ರಾಜೇಶ್ ಉಳ್ಳಾಲ್, ಮಧುರಾಜ್, ದಾಮೋದರ್ ಸಾಲಿಯಾನ್, ಮೀನಾಕ್ಷಿ ಬಂಗೇರ, ರೇಣುಕಾ ಕಿಶೋರ್ ಕಾಂಚನ್, ವಾಸುದೇವರಾವ್, ಉಳ್ಳಾಲ ನಗರಸಭೆ ಸದಸ್ಯರುಗಳಾದ ಮಮತಾ ರಾಘವ, ಮಹಮ್ಮದ್ ಮುಕ್ಕಚ್ಚೇರಿ, ರವಿಚಂದ್ರ ಗಟ್ಟಿ, ಜಬ್ಬಾರ್, ವೀಣಾ ಡಿಸೋಜ, ಬಶೀರ್, ನಗರಸಭೆ ಆರೋಗ್ಯ ಅಧಿಕಾರಿಗಳಾದ ಜಯಶಂಕರ್, ರಾಜೇಶ್, ಸಾಜೀತ್, ಸಹಾಯಕ ಅಭಿಯಂತರ ಉಮೇಶ್ ಕಾಮತ್, ಕಿರಿಯ ಅಭಿಯಂತರ ರೇಣುಕಾ, ತುಳಸೀದಾಸ್ ಮುಂತಾದವರು ಉಪಸ್ಥಿತರಿದ್ದರು.