UN NETWORKS
ಉಳ್ಳಾಲ: ಕಾಂಗ್ರೆಸ್ ಮಂಗಳೂರು ಕ್ಷೇತ್ರ ಅಭ್ಯರ್ಥಿ ಸಚಿವ ಯು.ಟಿ.ಖಾದರ್ ಅವರು ಅಪಾರ ಕಾರ್ಯಕರ್ತರ ಭಾಗವಹಿಸುವಿಕೆಯ ಜತೆಗೆ ಮಂಗಳೂರಿಗೆ ವಾಹನ ಜಾಥಾ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದರು.

ತೊಕ್ಕೊಟ್ಟು ಗಟ್ಟಿ ಸಮಾಜದಿಂದ ಆರಂಭವಾದ ರ್ಯಾಲಿ ತೊಕ್ಕೊಟ್ಟುವರೆಗೆ ಕಾಲ್ನಡಿಗೆಯಲ್ಲೇ ಸಾಗಿ, ಅಲ್ಲಿಂದ ವಾಹನ ಜಾಥಾ ಮೂಲಕ ಮಂಗಳೂರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಗಟ್ಟಿ ಸಮಾಜ ಭವನದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರು ಭಾಗವಹಿಸಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ತಲಪಾಡಿ ಗ್ರಾಮ ಪಂಚಾಯಿತಿನ ಬಿಜೆಪಿಯಿಂದ ಆಯ್ಕೆಯಾಗಿದ್ದ, ಮಾಜಿ ಅಧ್ಯಕ್ಷ ಜಯರಾಜ್ ಸಾಲ್ಯಾನ್ ಕಾಂಗ್ರೆಸ್ ಸೇರ್ಪಡೆಗೊಂಡರು.


