
ಕೊಲ್ಯ : ಇಲ್ಲಿನ ಕುಜುಮಗದ್ದೆ ಸಮೀಪ ಮಹಿಳೆಯೊಬ್ಬರು ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.
ಕುಜುಮಗದ್ದೆ ನಿವಾಸಿ ವಾರಿಜಾ (೪೫) ಸಾವನ್ನಪ್ಪಿದವರು. ಓರ್ವ ಪುತ್ರನ ಜತೆಗೆ ನೆಲೆಸಿದ್ದ ಅವರು ಮನೆ ಸಮೀಪದ ಬಾವಿಗೆ ಕಾಲುಜಾರಿ ಬಿದ್ದಿರುವ ಶಂಕೆಯಿದೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.