
ಉಳ್ಳಾಲ, ಜ. ೦೫: ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘದ ಮುಂದಿನ ಐದು ವರ್ಷದ ಅವಧಿಗೆ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರು ಗುತ್ತು ನೇತೃತ್ವದ ತಂಡ ಬಹುಮತಗಳಿಂದ ಎಲ್ಲಾ ೧೨ ಸ್ಥಾನಗಳಲ್ಲಿ ಜಯ ಗಳಿಸಿದೆ.
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದಲ್ಲಿ ಕೃಷ್ಣಪ್ಪ ಬೆಳ್ಮ ಮತ್ತು ಬಾಬು ನಾಯ್ಕ ಬೋಳಿಯಾರು, ಹಿಂದುಳಿದ ವರ್ಗ ಎ., ಹಿಂದುಳಿದ ವರ್ಗ ಬಿ.ಯಲ್ಲಿ ಅರುಣ್ ಯು. ಉಳ್ಳಾಲ್ ಮತ್ತು ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರು ಗುತ್ತು, ಮಹಿಳಾ ಮೀಸಲು ಸುನಿತಾ ಲೋಬೋ ಪಾವೂರು, ಸುರೇಖಾ ಚಂದ್ರಹಾಸ್ ತಲಪಾಡಿ , ಸಾಮಾನ್ಯ ಕ್ಷೇತ್ರದಲ್ಲಿ ಅಬ್ಬುಸಾಲಿ ಕೆ.ಬಿ. ಕಿನ್ಯ, ಕೃಷ್ಣಪ್ಪ ಸಾಲಿಯಾನ್ ಕುತ್ತಾರ್, ಗಂಗಾಧರ ಯು. ಪೆರ್ಮನ್ನೂರು, ರಾಘವ ಉಚ್ಚಿಲ್, ರಾಘವ ಆರ್. ಉಚ್ಚಿಲ್ ಸಾಲಗಾರ ರಹಿತ ಕ್ಷೇತ್ರದಲ್ಲಿ ಉದಯ ಕುಮಾರ್ ಶೆಟ್ಟಿ ಕೊಂಡಾಣ ಗುತ್ತು ಆಯ್ಕೆಯಾಗಿದ್ದಾರೆ. ಕೋಟೆಕಾರು ಸ್ಟೆಲ್ಲಾ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದು, ಚುನಾವಣಾ ಅಧಿಕಾರಿಯಾದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಮಂಗಳೂರು ಇಲ್ಲಿನ ಅಧೀಕ್ಷಕ ಬಿ. ನಾಗೇಂದ್ರ ಫಲಿತಾಂಶವನ್ನು ಘೋಷಿಸಿದರು