
ಉಳ್ಳಾಲ : ರೀಚಲ್ ಚಾರಿಟೆಬಲ್ ಟ್ರಸ್ಟ್ ಇದರ ಆಶ್ರಯದಲ್ಲಿ ಉಚಿತವಾಗಿ ಮೂರು ದಿನಗಳ ಬೇಸಗೆ ರಜಾ ಶಿಬಿರ ಮೇ 23ರಿಂದ ಮೇ 25ರವರೆಗೆ ತೊಕ್ಕೊಟ್ಟು ಒಳಪೇಟೆಯಲ್ಲಿರುವ ಸಂತ ಸೆಬಾಸ್ಟಿಯನ್ ಬಳಿಯ ರೀಚಲ್ ಸಂಸ್ಥೆಯಲ್ಲಿ ನಡೆಯಲಿದೆ.
ಬೆಳಗ್ಗೆ 9.30ರಿಂದ ಮಧ್ಯಾಹ್ನ 12.30ರವರಗೆ ನಡೆಯಲಿರುವ ಈ ಶಿಬಿರದಲ್ಲಿ ಮಕ್ಕಳಲ್ಲಿ ಶಿಸ್ತು, ಸಾಮಾನ್ಯ ಜ್ಞಾನ, ಜ್ಞಾಪಕ ಶಕ್ತಿ ಹೆಚ್ಚಿಸುವ ಚಟುವಟಿಕೆ ಸೇರಿದಂತೆ ವಿವಿಧ ಕೌಶಲ ವಿಕಸನ, ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದಂತೆ ಪರಿಣಿತರು ಮಾಹಿತಿ ಮತ್ತು ಚಟುವಟಿಕೆಯೊಂದಿಗೆ ನಡೆಸಿಕೊಡಲಿದ್ದಾರೆ ಎಂದು ಟ್ರಸ್ಟ್‌ನ ಅಧ್ಯಕ್ಷ ಸಿರಿಲ್ ಡಿ’ಸೋಜಾ ಭಟ್ನಗರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

