
ಉಳ್ಳಾಲ: ಸೋಮೇಶ್ವರದ ಶ್ರೀ ಸೋಮನಾಥ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ ಎ.1 ರಿಂದ ಎ.15 ರವರೆಗೆ ವಿಜೃಂಭಣೆಯಿಂದ ಜರಗಲಿದೆ . ಸೋಮನಾಥನ ಜಾಗ ದೇವಸ್ಥಾನಕ್ಕೇ ಸೇರಿದ್ದಾಗಿದೆ . ರೈಲ್ವೇ ಪರಂಬೋಕು ಎಂಬ ದಾಖಲೆಯಲ್ಲಿ ಹಾಕಿರೋದರ ವಿರುದ್ಧ 2018 ರಿಂದ ಸಮಿತಿ ಸದಸ್ಯರು ಹೋರಾಟ ನಡೆಸುತ್ತಾ ಬಂದಿದ್ದಾರೆ. ಗೋಶಾಲೆ, ಯಾತ್ರಿ ನಿವಾಸ, ಪಾರ್ಕಿಂಗ್ ಸೇರಿದಂತೆ ಅಭಿವೃದ್ಧಿ ಕೆಲಸಗಳು ದೇವಸ್ಥಾನದ ಹೆಸರಿನಲ್ಲಿಯೇ ಆಗಲಿದೆ ಹೊರತು ಯಾವುದೇ ಸಂಘಟನೆಗಳ ಹೆಸರಿನಲ್ಲಿ ಮಾಡಲು ಬಿಡುವುದಿಲ್ಲ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ರವೀಂದ್ರನಾಥ ರೈ ಹೇಳಿದ್ದಾರೆ.
ತೊಕ್ಕೊಟ್ಟು ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಎ.11 ರಂದು ಧ್ವಜಾರೋಹಣದ ಮೂಲಕ ಜಾತ್ರೋತ್ಸವಕ್ಕೆ ಚಾಲನೆ ದೊರೆಯಲಿದೆ. ಎ.14 ರಂದು ರಾತ್ರಿ 7.30 ಕ್ಕೆ ಬ್ರಹ್ಮರಥೋತ್ಸವ ಸೋಮೇಶ್ವರ ಬೆಡಿ ಉತ್ಸವವೂ ಜರಗಲಿದ್ದು, ಎ.16 ರಂದು ಕಲ್ಲುರ್ಟಿ , ಕಲ್ಕುಡ ದೈವಗಳ ಕೋಲ ನಡೆಯಲಿದೆ. ಪ್ರತಿದಿನವೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದ ಅವರು ಇತ್ತೀಚೆಗೆ ಸಂಘಟನೆಯೊಂದು ಸಂಸದ ಭೇಟಿ ಮಾಡಿ ರೈಲ್ವೇ ಪರಂಬೋಕು ಜಾಗದ ಕುರಿತು ಮಾತನಾಡಿದ್ದಾರೆ. ಆದರೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ 2018 ರಿಂದ ಅದರ ಹಿಂದೆ ಬಿದ್ದಿದ್ದು, ಜಲ್ಲಿಕಲ್ಲು ತೆಗೆಯುವ ಕಲ್ಪನೆ ಪ್ರದೇಶವನ್ನು ರೈಲ್ವೇ ಇಲಾಖೆ ಎಂದು ಹೇಳಿರುವುದರಲ್ಲಿ ಅರ್ಥವಿಲ್ಲ. ಸೋಮೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದ ಜಾಗವನ್ನು 1964ರಲ್ಲಿ ಅಂದಿನ ಗ್ರಾಮಕರಣಿಕರು ತಿದ್ದುಪಡಿ ನಡೆಸಿ ಪರಂಬೋಕು ಎಂದು ದಾಖಲಿಸಿರುವುದು ದಾಖಲೆಗಳಲ್ಲಿದೆ. ಈ ಕುರಿತು ಎ.ಸಿ ನ್ಯಾಯಾಲಯದಲ್ಲಿ ದಾವೆ ಹೂಡಿದರೂ ರೈಲ್ವೇ ಇಲಾಖೆಯವರು ಬರಲು ಕೇಳುತ್ತಿಲ್ಲ. ಅವರಲ್ಲಿ ಮೂಲ ದಾಖಲೆಗಳ ಕೊರತೆಯಿಂದ ಬರುತ್ತಿಲ್ಲ ಅನ್ನುವುದು ತಿಳಿದುಬರುತ್ತದೆ. ಅದಕ್ಕಾಗಿ ಈಗಲೂ ದೇವಸ್ಥಾನದ ಉಪಯೋಗದಲ್ಲಿ ಜಾಗವಿದ್ದರೂ, ಮುಂದೆಯೂ ಸೋಮೇಶ್ವರ ದೇವಸ್ಥಾನದ ಹೆಸರಿಗೆ ಬರಲಿದೆ. ನಂತರದ ದಿನಗಳಲ್ಲಿ ದೇವಸ್ಥಾನದ ಗೋಶಾಲೆ, ಯಾತ್ರಿ ನಿವಾಸ , ಪಾರ್ಕಿಂಗ್ ವ್ಯವಸ್ಥೆ ಸರಕಾರದ ಅನುದಾನವನ್ನು ಪಡೆದು ನಿರ್ಮಿಸಲಿಚ್ಛಿಸಿದ್ದೇವೆ ಎಂದರು.
ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ಪದ್ಮನಾಭ ಶೆಟ್ಟಿ ವರ್ಕಾಡಿ ಜಾಗದ ಕುರಿತು ಮಾಹಿತಿ ನೀಡಿದರು.
ವ್ಯವಸ್ಥಾಪನಾ ಸಮಿತಿ ಸದಸ್ಯರಾದ ದೀಪಕ್ ಪಿಲಾರ್, ಭಾಸ್ಕರ್ ಗಟ್ಟಿ ಸೋಮೇಶ್ವರ, ಕಿಶೊರ್ ಎಂ.ಉಚ್ಚಿಲ್, ಸದಾನಂದ ಬಂಗೇರ, ದೇವಸ್ಥಾನದ ಪ್ರಬಂಧಕ ಜೀರ್ಣೋದ್ಧಾರ ಸಮಿತಿ ಪ್ರ.ಕಾ, ಮಾಜಿ ಸದಸ್ಯ ರಾಘವ್ ಉಚ್ಚಿಲ್.
