
ಕೊಲ್ಯ : 2024 -25 ನೇ ಸಾಲಿನ ಶೈಕ್ಷಣಿಕ ವರ್ಷದ ರಾಷ್ಟ್ರಮಟ್ಟ ಮತ್ತು ರಾಜ್ಯ ಮಟ್ಟದ ಫುಟ್ಬಾಲ್ ಪಂದ್ಯಾಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಅನೇಕ ಪ್ರಶಸ್ತಿಗಳನ್ನು ಪಡೆದ ಕೊಲ್ಯ – ಸೋಮೇಶ್ವರದ ಸೈಂಟ್ ಜೋಸೆಫ್ಸ್ ಜೋಯ್ ಲ್ಯಾಂಡ್ ಆಂಗ್ಲಮಾಧ್ಯಮ ಶಾಲೆ ವಿದ್ಯಾರ್ಥಿಗಳನ್ನು ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಮಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಧಾನ್ವಿ ಯು. ಸುವರ್ಣ, ಕೀರ್ತನಾ, ಮಿಥಾಲಿ ಯು., ಫಾತಿಮ ಅಮೀರಾ, , ಫಾತಿಮಾ ಅಫ್ರಾ, ಖುಷಿ, ಭೂಮಿಕಾ ಯೆಸ್, ಸಮೀಕ್ಷಾ ಎಂ.ಕೆ, ಫಾತಿಮಾ ರಿಧಾ, ಮೇಘನಾ, ಹಲೀಮತ್ ಅಫ್ನಾ ಇವರುಗಳನ್ನು ಸನ್ಮಾನಿಸಲಾಯಿತು. ಇವರಲ್ಲಿ 6 ಮಂದಿ ರಾಷ್ಟ್ರಮಟ್ಟದಲ್ಲಿ ಹಾಗೂ 5 ರಾಜ್ಯಮಟ್ಟದಲ್ಲಿ ಪ್ರಶಸ್ತಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ದಕ್ಷಿಣ ಕನ್ನಡ ಜಿಲ್ಲೆ ಅಧ್ಯಕ್ಷೆ ಲಿಲ್ಲಿ ಪಾಯ್ಸ್, ಪದಾಧಿಕಾರಿಗಳಾದ ಶೇಖರ ಕಡ್ತಾಲ, ಮೋಹನ್ ಶಿರ್ಲಾಲ್, ತಂಡದ ತರಬೇತುದಾರ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಸಂದೀಪ್ ರಾಜ್ ಮಾಡೂರು ಉಪಸ್ಥಿತರಿದ್ದರು.