
ಉಳ್ಳಾಲ: ತರಗತಿಯಲ್ಲಿ ಕುಳಿತು ಅಧ್ಯಾಪಕರು ಹೇಳುವ ಪಾಠ ಕೇಳಿದರೆ ಸಾಲದು, ಪ್ರಶ್ನಿಸುವ ಗುಣವೂ ಅಗತ್ಯ. ಸಕಾರಾತ್ಮಕ ಯೋಚನೆಗಳು, ಶಿಕ್ಷಣದ ಜೊತೆ ಆಟೋಟ ಸ್ಪರ್ಧೆಗಳಲ್ಲಿ ತೊಡಗಿಸಿಕೊಂಡಾಗ ಬುದ್ಧಿಮತ್ತೆ ಹೆಚ್ಚಾಗುತ್ತದೆ ಎಂದು ಮಂಗಳೂರು ಮ್ಯಾಪ್ಸ್ ಕಾಲೇಜಿನ ಅಧ್ಯಕ್ಷ ದಿನೇಶ್ ಕುಮಾರ್ ಆಳ್ವ ಅಭಿಪ್ರಾಯಪಟ್ಟರು.
ಪಾವೂರು ಹರೇಕಳ ತ್ರಿಶಕ್ತಿ ವಿದ್ಯಾವರ್ಧಕ ಸಂಘದ ಅಧೀನದಲ್ಲಿ ಶ್ರೀ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
ಮಂಗಳೂರು ತಾ.ಪಂ.ಮಾಜಿ ಸದಸ್ಯ ಮುಹಮ್ಮದ್ ಮುಸ್ತಫಾ ಹರೇಕಳ ಮಾತನಾಡಿ, ಹರೇಕಳ ಅನುದಾನಿತ ಶಾಲೆ ಆರಂಭಗೊಂಡು ನೂರು ವರ್ಷ ದಾಟಿದ್ದರೂ ಪ್ರಸ್ತುತ ದಿನಗಳಲ್ಲಿ ಕನ್ನಡ ಶಾಲೆ ಉಳಿಸಲು ಅನಿವಾರ್ಯ ಎನಿಸಿದ್ದ ಆಂಗ್ಲಮಾಧ್ಯಮ ಆರಂಭ ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ ತ್ರಿಶಕ್ತಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೆ.ಎನ್.ಆಳ್ವ ಮಾತನಾಡಿ, ಆಂಗ್ಲಭಾಷೆ ಕಲಿಕೆಯಿಂದ ಅಂತಾರಾಷ್ಟ್ರೀಯ ಮಟ್ಟದ ಜ್ಞಾನ ಲಭಿಸಿದರೂ ಈ ಭಾಷೆ ಕಲಿಕೆಗೆ ಮಾತ್ರ ಸೀಮಿತವಾಗಿರಲಿ, ಆದರೆ ಸಂಸ್ಕೃತಿ, ಸಂಸ್ಕಾರ ಕನ್ನಡದ್ದೇ ಇರಲಿ ಎಂದರು.
ಕೈಗಾರಿಕೋದ್ಯಮಿ ಅಜಿತ್ ಚೌಟ ದೇವಸ್ಯ ಮತ್ತು ಉದ್ಯಮಿ ಸುರೇಂದ್ರ ಕಂಬಳಿ ಕ್ರೀಡಾ ಕೊಠಡಿ ಉದ್ಘಾಟಿಸಿದರು. ಮಂಗಳೂರು ವಿವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಅನಸೂಯ ರೈ, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಸುರೇಂದ್ರ ಕಂಬಳಿ, ಹರೇಕಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗುಲಾಬಿ, ಆಂಗ್ಲಮಾಧ್ಯಮ ಶಾಲಾ ಸಂಚಾಲಕ ದುರ್ಗಾಪ್ರಸಾದ್ ರೈ ಕಲ್ಲಾಯಿ, ಆಡಳಿತ ಸಮಿತಿಯ ಕಾರ್ಯದರ್ಶಿ ರಾಜ್ ಕುಮಾರ್ ರೈ, ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಸೋಮಶೇಖರ ಚೌಟ, ದೈಹಿಕ ಶಿಕ್ಷಣ ಪರಿವಿಕ್ಷಣಾಧಿಕಾರಿಗಳಾದ ಲಿಲ್ಲಿ ಪಾಯಸ್, ಆಡಳಿತ ಮಂಡಳಿಯ ಸದಸ್ಯರಾದ ಜಗಜೀವನ್ ಶೆಟ್ಟಿ ಕಡೆಂಜ, ಬಾಲರಾಜ್ ಶೆಟ್ಟಿ, ರಾಮಮೋಹನ್ ನಾಯ್ಕ್, ಕಡೆಂಜ ಉದಯಕುಮಾರ್ ಚೌಟ, ನಿವೃತ್ತ ಮುಖ್ಯ ಶಿಕ್ಷಕರಾದ ರವೀಂದ್ರ ರೈ ಕಳ್ಳಿಮಾರ್, ನಾಥನಿಯಲ್ ಎಡ್ವಾರ್ಡ್ ಐಮನ್, ಸಮಾಜ ಸೇವಕರಾದ ಕಡೆಂಜ ಅಶೋಕ್ ಕುಮಾರ್ ಚೌಟ, ಸಾಮಾಜಿಕ ಮುಂದಾಳು ಪ್ರಸಾದ್ ರೈ ಕಳ್ಳಿಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷರಾದ ಜಗದೀಶ್ ಶೆಟ್ಟಿ ,ಅಡ್ಯಾರುಗುತ್ತು ಜಯಶೀಲ ಅಡ್ಯ0ತಾಯ , ಕೊಟ್ರಗುತ್ತು ಕೃಷ್ಣಪ್ರಸಾದ್ ಆಳ್ವ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ರಾಧಾಕೃಷ್ಣ ರೈ, ಪ್ರೌಢಶಾಲಾ ಮುಖ್ಯಶಿಕ್ಷಕಿ ಮೋಹಿನಿ, ಅಂಗ್ಲಮಾಧ್ಯಮ ಶಾಲಾ ಮುಖ್ಯಶಿಕ್ಷಕಿ ಅನಿತಾ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಆಂಗ್ಲ ಮಾಧ್ಯಮ ಶಾಲೆಗೆ ವಿವಿಧ ರೀತಿಯಲ್ಲಿ ಸಹಕರಿಸಿದ ಮ್ಯಾಪ್ಸ್ ಕಾಲೇಜು ದಿನೇಶ್ ಕುಮಾರ್ ಆಳ್ವ , ಅನಸೂಯ ರೈ, ಅಜಿತ್ ಚೌಟ ದೇವಸ್ಯ, ಸುರೇಂದ್ರ ಕಂಬಳಿ, ಗೋಪಾಲ್ ತಾರಿಪ್ಪಾಡಿ, ಕೆ ಎನ್ ಆಳ್ವ ಪಾವೂರುಗುತ್ತು ರಾಜಕುಮಾರ್ ಶೆಟ್ಟಿ ಮಂಜವುದಡಿ, ಶ್ರೀಮತಿ ಸುಮಲತಾ ಸುರೇಂದ್ರ ಕಂಬಳಿ , ಶ್ರೀಮತಿ ಲಕ್ಷ್ಮಿ ಶ್ರೀನಿವಾಸ್ ಮೂರ್ತಿ, ಶ್ರೀಮತಿ ಸುಗುಣ, ರವಿ ರೈ ಫಜೀರು, ಅಡ್ಯಾರುಗುತ್ತು ಜಯಶೀಲ ಅಡ್ಯ0ತಾಯ, ಮುಂತಾದವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಶಿಕ್ಷಕಿ ಸ್ಮಿತಾ ಸ್ವಾಗತಿಸಿದರು. ಕೋಶಾಧಿಕಾರಿ ಜಯರಾಮ ಆಳ್ವ ಪೋಡಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಅನಿತಾ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ತ್ಯಾಗಂ ಹರೇಕಳ ಕಾರ್ಯಕ್ರಮ ನಿರೂಪಿಸಿದರು.
