ಉಳ್ಳಾಲ: ಪೂಜ್ಯನೀಯ ಕುದ್ಮುಲ್ ರಂಗರಾವ್ ತತ್ವ ಆದರ್ಶದಡಿ ಸ್ಥಾಪಿತವಾದ ಉಳ್ಳಾಲ ಗಾಂಧಿನಗರದ ಶ್ರೀ ಸ್ವಾಮಿ ಈಶ್ವರಾನಂದ ಭಜನಾ ಮಂಡಳಿ
ಇವರ 50 ನೇ ವರ್ಷದ ಸುವರ್ಣ ಸಂಭ್ರಮ ಕಾರ್ಯಕ್ರಮ ಡಿ.15 ರಿಂದ 22 ರ ವರೆಗೆ ಸಾಮಾಜಿಕ, ಧಾರ್ಮಿಕ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಎಂಟು ದಿನಗಳ ಕಾಲ ವಿಜೃಂಭಣೆಯಿAದ ಜರುಗಲಿದ್ದು, ರಾಜ್ಯ ಗೃಹಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಗಣ್ಯರು ಸುವರ್ಣ ಧರ್ಮಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಶ್ರೀ ಸ್ವಾಮಿ ಈಶ್ವರಾನಂದ ಭಜನಾ ಮಂಡಳಿ, ಶ್ರೀ ಸತ್ಯನಾರಾಯಣ ಮಂದಿರದ
ಸುವರ್ಣ ಸಂಭ್ರಮ ಸಮಿತಿ ಅಧ್ಯಕ್ಷ ಸುರೇಶ್ ಭಟ್ನಗರ ಹೇಳಿದರು.



ಶುಕ್ರವಾರ ತೊಕ್ಕೊಟ್ಟು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿ ಯಲ್ಲಿ ಮಾಹಿತಿ ನೀಡಿ ಮಾತನಾಡಿದ ಅವರು ಅದ್ಧೂರಿಯಾಗಿ ಜರಗುವ ಕಾರ್ಯಕ್ರಮದಲ್ಲಿ ಊರ ಪರವೂರ ಭಕ್ತಾಧಿಗಳು ಭಾಗವಹಿಸುವಂತೆ ಕೋರಿದರು.
ಒಟ್ಟು 8 ದಿನಗಳ ಕಾರ್ಯಕ್ರಮದ ವಿವರ ನೀಡಿದ ಗೌರವ ಸಲಹೆಗಾರರಾದ ರೋಹಿತ್ ಉಳ್ಳಾಲ್ ಮಾತನಾಡಿ, ಡಿಸೆಂಬರ್ 15 ಆದಿತ್ಯವಾರ ಬೆಳಿಗ್ಗೆ 10:00 ಗಂಟೆಗೆ ಶ್ರೀ ಬಬ್ಬು ಸ್ವಾಮಿ ದೈವಸ್ಥಾನ ಗಾಂಧಿನಗರ, ಉಳ್ಳಾಲ ಇವರ ಸಹಕಾರದೊಂದಿಗೆ ಇಂಡಿಯಾನ ಹಾರ್ಟ್ ಇನ್ಸಿಟ್ಯೂಟ್ ಆಸ್ಪತ್ರೆ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ದಕ್ಷಿಣ ಕನ್ನಡ ಜಿಲ್ಲಾ ಶಾಖೆ, ಮಂಗಳೂರು ಇದರ ಸಹಭಾಗಿತ್ವದಲ್ಲಿ “ರಕ್ತದಾನ ಮತ್ತು ವೈದ್ಯಕೀಯ ಶಿಬಿರ’ದ ಮೂಲಕ ಸುವರ್ಣ ಸಂಭ್ರಮದ ಕಾರ್ಯಕ್ರಮಕ್ಕೆ ಕರ್ನಾಟಕ ಹೆಲ್ತ್ ಅಲೈಡ್ ಸೈನ್ಸ್ ಕರ್ನಾಟಕ ಸರಕಾರದ ಚೇರ್ ಮ್ಯಾನ್ ಡಾ| ಯು. ಬಿ. ಇಫ್ತಿಕಾರ್ ಫರೀದ್ರವರು ಚಾಲನೆ ನೀಡಲಿದ್ದಾರೆ. ಸುವರ್ಣ ಸಂಭ್ರಮದ ಸುವರ್ಣ ಸಂಧ್ಯಾ ಭಜನೆಯು ಡಿ. 16 ರಿಂದ ಡಿ.18 ರವರೆಗೆ ಸಂಜೆ 6 ಗಂಟೆಯಿAದ 8 ಗಂಟೆಯವರೆಗೆ ಜರುಗಲಿದೆ. ಡಿ.19 ಬೆಳಗ್ಗೆ 10 ಗಂಟೆಯಿAದ ಕುದ್ಮುಲ್ ರಂಗರಾವ್ ವೇದಿಕೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರ ವಿಭಾಗದ ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಭಕ್ತಿಗೀತೆ ಮತ್ತು ಚಿತ್ರಕಲಾ ಸ್ಪರ್ಧೆ ನಡೆಯಲಿದೆ. ಭಕ್ತಿಗೀತೆ ಮತ್ತು ಚಿತ್ರಕಲಾ ಸ್ಪರ್ಧೆಯು 1ನೇ ತರಗತಿಯಿಂದ 3ನೇ ತರಗತಿ, 4ನೇ ತರಗತಿಯಿಂದ 6ನೇ ತರಗತಿ. 7ನೇ ತರಗತಿಯಿಂದ 10ನೇ ತರಗತಿಯವರೆಗೆ ನಡೆಯಲಿದ್ದು, ಕುದ್ಮುಲ್ ರಂಗರಾಯರ ಪೆನ್ಸಿಲ್ ಸ್ಕೆಚ್ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ . ಅದೇ ದಿನ ಸಂಜೆ 4:30 ರಿಂದ 5:30 ರವರೆಗೆ “ಕುಣಿತ ಭಜನಾ ಸಂಭ್ರಮ”, ಸಂಜೆ 6 ಗಂಟೆಯಿAದ ಸುವರ್ಣ ಧರ್ಮಸಭೆ, ಸಾಂಸ್ಕೃತಿಕ ನೃತ್ಯ ವೈವಿಧ್ಯ, ರಾತ್ರಿ 10 ಗಂಟೆಗೆ ತುಳು ಪೌರಾಣಿಕ ಶ್ರೀ ಲಲಿತೆ ಕಲಾವಿದರು (ರಿ) ಅಭಿನಯದ ಅದ್ದೂರಿ ನಾಟಕ “ಗರುಡ ಪಂಚಮಿ” ಪ್ರದರ್ಶನ ನಡೆಯಲಿದೆ.
ಡಿ.20 ರಂದು ಬೆಳಗ್ಗೆ 6 ಗಂಟೆಯಿAದ ಗಣಹೋಮ ಕಲಶಾಭಿಷೇಕ, 10 ಗಂಟೆಯಿAದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 1 ಗಂಟೆಯಿAದ ಅನ್ನಸಂತರ್ಪಣೆ, ಸಂಜೆ 4:30 ರಿಂದ 5:30 ರವರೆಗೆ “ಕುಣಿತ ಭಜನಾ ಸಂಭ್ರಮ” ಸಂಜೆ 6 ಗಂಟೆಯಿAದ ಮಂಡಳಿಯ ಹೊರಾಂಗಣಕ್ಕೆ ಶೀಟು ಅಳವಡಿಸಿದ “ನೂತನ ಮೇಲ್ಛಾ ವಣಿ ಉದ್ಘಾಟನೆಯನ್ನು ಸಭಾಧ್ಯಕ್ಷರಾದ ಯು.ಟಿ ಖಾದರ್ ನೆರವೇರಿಸಲಿದ್ದಾರೆ. 7 ಗಂಟೆಗೆ ಧರ್ಮಸಭೆ, ಸುವರ್ಣ ಗೌರವ, ಸನ್ಮಾನ, ಸ್ಮರಣೆ, ಅಭಿನಂದನೆ, ಪುರಸ್ಕಾರದೊಂದಿಗೆ ನಡೆಯಲಿದ್ದು, ಗೃಹಮಂತ್ರಿ ಡಾ. ಜಿ. ಪರಮೇಶ್ವರ್, ಸಂಸದರಾದ ಬ್ರಿಜೇಶ್ ಚೌಟ, ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್, ನಾಡೋಜ ಜಿ.ಶಂಕರ್ ಮೊದಲಾದ ಗಣ್ಯರು ಬಾಗವಹಿಸಲಿದ್ದಾರೆ. ಪೂಜ್ಯನೀಯ ಕುದ್ಮುಲ್ ರಂಗರಾವ್ರವರ ಮೊಮ್ಮಗಳ ಮಗಳಾದ ಪ್ರೀತಂ ಆರ್. ಪೈ, ಕೊಡಿಯಾಲ್ ಬೈಲ್ ಇವರಿಂದ ಜ್ಯೋತಿ ಪ್ರಜ್ವಲನೆ ನಡೆಯಲಿದ್ದು ವಿವಿಧ ರಾಜಕೀಯ, ಧಾರ್ಮಿಕ, ಸಾಮಾಜಿಕ, ಮುಂದಾಳುಗಳ ಉಪಸ್ಥಿತಿಯಲ್ಲಿ ನಡೆಯಲಿದೆ. ಧರ್ಮಸಭೆಯ ನಂತರ “ಪ್ರಕಾಶ್ ಮೆಲೋಡಿಸ್” ಮಂಗಳೂರು ತಂಡದಿAದ ‘ಭಕ್ತಿಗಾನ’ ವೈಭವ ರಸಮಂಜರಿ ಕಾರ್ಯಕ್ರಮ ನಡೆಯಲಿದ್ದು, ದಿನಾಂಕ 21 ಶನಿವಾರ ಬೆಳಗ್ಗೆ 6 ಗಂಟೆಗೆ ಸೂರ್ಯೋದಯಕ್ಕೆ ಏಕಾಹ ಭಜನಾ ಮಂಗಳೋತ್ಸವ ಆರಂಭ ದಿನಾಂಕ 22 ಆದಿತ್ಯವಾರ ಸಮಾಪಣೆಗೊಳ್ಳಲಿದೆ. ಅದೇ ದಿನ ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ ಎಂದರು
ಪ್ರಧಾನ ಅರ್ಚಕ ಹರಿಶ್ಚಂದ್ರ ಉಳ್ಳಾಲ್, ಆಡಳಿತ ಸಮಿತಿ ಕೋಶಾಧಿಕಾರಿ ದೇವದಾಸ್ ಉಳ್ಳಾಲ್, ಗೌರವ ಸಲಹೆಗಾರರಾದ ರವಿ ಎಸ್ ಉಳ್ಳಾಲ್ ಪ್ರಧಾನ ಕಾರ್ಯದರ್ಶಿ ಜಗದೀಶ್ ಉಳ್ಳಾಲ್, ಉಪಸ್ಥಿತರಿದ್ದರು.