
ಉಳ್ಳಾಲ: ದಕ್ಷ ಯುವ ಬಳಗ ಗ್ರಾಮಚಾವಡಿ ಇದರ 16ನೇ ವಾರ್ಷಿಕೋತ್ಸವವು ಕೊಣಾಜೆ ಕೋಟಿಪದವು ಶ್ರೀರಾಮ ಭಜನಾ ಮಂದಿರದಲ್ಲಿ ಜರಗಿತು. 2024-25 ನೇ ಸಾಲಿನ ಗ್ರಾಮ ಗೌರವ ಪುರಸ್ಕಾರವನ್ನು ಕೊಣಾಜೆ ಗ್ರಾ.ಪಂ ಮಾಜಿ ಸದಸ್ಯ, ಸಾಮಾಜಿಕ ಹಾಗೂ ಧಾರ್ಮಿಕ ಮುಂದಾಳು ನರ್ಸು ಗೌಡ ಅಣ್ಣೆರೆಪಾಲು ಇವರಿಗೆ ಪ್ರಧಾನ ಮಾಡಲಾಯಿತು.
ಕಾರ್ಯಕ್ರಮವನ್ನು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ತೊಕ್ಕೊಟ್ಟು ಇದರ ಪ್ರಧಾನಾಚಾರ್ಯರು ವಿದ್ಯಾ ಕಾಮತ್ ಜಿ ಉದ್ಘಾಟಿಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜೇಶ್ ವಿ ನಾಯ್ಕ್ ನಾರ್ಯಗುತ್ತು ಮುಡಿಪು ಇವರು ವಹಿಸಿದ್ದರು.
ದ.ಕ ಜಿಲ್ಲಾ ಸಂಸದ ಬೃಜೇಶ್ ಚೌಟ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಉದ್ಯಮಿ ಪ್ರಾಣಾಸ್ತ್ರ ಟ್ರಸ್ಟ್ ಸ್ಥಾಪಕ ಲಾಂಚುಲಾಲ್ ಗೌರವ ಅತಿಥಿಗಳಾಗಿದ್ದರು.
ಮುಖ್ಯ ಅತಿಥಿಗಳಾಗಿ ರವಿ ರೈ ಪಜೀರು, ಮುಡಿಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸತೀಶ್ ಗಟ್ಟಿ ,ಮೋಹನದಾಸ್ ಕುಂಟಲಚ್ಚಿಲು, ಕೊಣಾಜೆ ಗ್ರಾ.ಪಂ ಸದಸ್ಯ ಶೇಖರ ಕೊಪ್ಪಳ , ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷರಾದ ಸುಂದರ ಕೋಟ್ಯಾನ್ ತಾಕಟ್ಟೆ, ಮೈಥಿಲಿ ಮಾತೃ ಮಂಡಳಿ ಅಧ್ಯಕ್ಷರಾದ ಭಾರತೀ ಎಸ್. ರೈ, ದಕ್ಷ ಯುವ ಬಳಗದ ಅಧ್ಯಕ್ಷರಾದ ಕೃಷ್ಣಪ್ರಸಾದ್ ಉಪಸ್ಥಿತರಿದ್ದರು.
ಈ ವೇಳೆ ಸತ್ಯನಾರಾಯಣ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು.