ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: `ಸಂಜೆ ಬಳಿಕ ಸಮುದ್ರದ ಅಲೆಗಳ ಅಬ್ಬರ ಜೋರಾಗಿರುವುದರಿಂದ ಸಮುದ್ರ ವೀಕ್ಷಣೆಗೆ ನಿಷೇಧ, ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ. ಸರ್ವ ರೀತಿಯ ಸಹಕಾರ ಇದೆ’ ಇದು ಉಳ್ಳಾಲ ಸಯ್ಯದ್ ಮದನಿ ದರ್ಗಾ ಉರೂಸ್ ಪ್ರಯುಕ್ತ ಭಾನುವಾರ ದರ್ಗಾ ಸಭಾಂಗಣದಲ್ಲಿ ನಡೆದ ಸರ್ವ ಧಮೀಯರು, ರಾಜಕೀಯ ಮುಖಂಡರ ಸಭೆಯಲ್ಲಿ ಕೇಳಿ ಬಂದ ಮಾತುಗಳು. ಆರೋಗ್ಯ ಸಚಿವ ಯು.ಟಿ.ಖಾದರ್ ಮಾತನಾಡಿ, ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಉರೂಸ್ ಎಂದರೆ ಉಳ್ಳಾಲದ ಜನತೆಗೆ ಹೆಮ್ಮೆಯ ವಿಚಾರವಾಗಿದ್ದು ಈ ಕಾರ್ಯಕ್ರಮಕ್ಕೆ ಬರುವವರು ಎಲ್ಲರೂ ಒಳ್ಳೆಯವರು ಎಂದು ಹೇಳಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಹಾಗೂ ಜನರು ಹೆಚ್ಚಿನ ತಾಳ್ಮೆ ತೆಗೆದುಕೊಳ್ಳುವುದು ಅನಿವಾರ್ಯ. ರೈಲಿನಿಂದ ಬರುವವರ ಸುರಕ್ಷತೆ, ವಾಹನ ನಿಲುಗಡೆ ವ್ಯವಸ್ಥೆ, ರಿಕ್ಷಾ ಚಾಲಕರೂ ಎಲ್ಲರ ವಿಶ್ವಾಸ ಗಳಿಸುವ ಕೆಲಸ ಆಗಬೇಕು. ಅಗತ್ಯವಿರುವಲ್ಲಿ ಮಾಹಿತಿ ಕೇಂದ್ರ ಸ್ಥಾಪನೆ ಆಗಬೇಕು ಎಂದು ಹೇಳಿದರು. ಉಳ್ಳಾಲದಲ್ಲಿ ಹಲವು ಇತಿಹಾಸ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಿದ್ದು…
Author: UllalaVani
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೋಟೆಕಾರು: ಗ್ರಾಮೀಣ ಭಾಗದ ರಸ್ತೆಗಳಿಗೆ ಮತ್ತು ಕುಡಿಯುವ ನೀರಿನ ಯೋಜನೆಗೆ ಜಿಲ್ಲಾ ಪಂಚಾಯಿತಿ ಹೆಚ್ಚಿನ ಒತ್ತು ನೀಡುತ್ತಿದ್ದು, ಸ್ಥಳೀಯರ ಸಹಕಾರದೊಂದಿಗೆ ಹಂತಹಂತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ. ಅವರು ಮಾಡೂರು ಅರಸುನಗರ ಎರಡನೇ ಅಡ್ಡರಸ್ತೆಗೆ ಜಿಲ್ಲಾ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಯ ರೂ.3 ಲಕ್ಷ ಅನುದಾನದೊಂದಿಗೆ ಆರಂಭವಾಗಲಿರುವ ಕಾಂಕ್ರೀಟಿಕರಣ ಕಾಮಗಾರಿಗೆ ಭಾನುವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಈ ಸಂದರ್ಭ ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರಾಧ್ಯಕ್ಷ ಚಂದ್ರಶೇಖರ್ ಉಚ್ಚಿಲ್ , ಕೋಟೆಕಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶೇಖರ್ ಕನೀರುತೋಟ, ಉಪಾಧ್ಯಕ್ಷೆ ಶಶಿಕಲಾ ಮೋಹನ್ ಭಂಡಾರಿ, ಪಂಚಾಯಿತಿ ಸದಸ್ಯರಾದ ರೋಹಿತ್ ಅಮೀನ್, ಅಮರನಾಥ್ ಮಾಡೂರು, ಸುಮಿತ್ರಾ, ಜಯಂತಿ ಹಾಗೂ ಮೋಹನ್ ಭಂಡಾರಿ, ಅಶೋಕ್ ಮಾಡೂರು, ನವೀನ್ ಗಟ್ಟಿ, ಅರ್ಜುನ್ ಮಾಡೂರು ಮೊದಲಾದವರು ಉಪಸ್ಥಿತರಿದ್ದರು.
ಉಳ್ಳಾಲ: ದೇಶದಲ್ಲಿರುವ ಶೋಷಕ ವ್ಯವಸ್ಥೆ ಸಂಪೂರ್ಣ ನಾಶಗೊಳಿಸಿ, ಸಮಾನತೆಯ ಸಮಾಜ ನಿರ್ಮಿಸುವುದೇ ನೈಜ ಸ್ವಾತಂತ್ರ್ಯ ಎಂದು ಡಿವೈಎಫ್‍ಐ ರಾಜ್ಯಾಧ್ಯಾಕ್ಷ ಮುನೀರ್ ಕಾಟಿಪಳ್ಳ ಹೇಳಿದ್ದಾರೆ. ಅವರು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್‍ಐ) ಉಳ್ಳಾಲ ವಲಯ ಸಮಿತಿ ಆಶ್ರಯದಲ್ಲಿ ಅಮರ ಕ್ರಾಂತಿಕಾರಿ ಭಗತ್‍ಸಿಂಗ್ ಮತ್ತು ಸಂಗಾತಿಗಳ 85ನೇ ಹುತಾತ್ಮ ದಿನಾಚರಣೆ ಪ್ರಯುಕ್ತ ತೊಕ್ಕೊಟ್ಟು ಒಳಪೇಟೆಯ ಅಂಬೇಡ್ಕರ್ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಯಜಮಾನರ ಬದಲಾವಣೆ ಸ್ವಾತಂತ್ರ್ಯದ ಉದ್ದೇಶ ಅಲ್ಲ. ಅಸಮಾನತೆಯನ್ನು ಸಂಪೂರ್ಣ ನಾಶ ಮಾಡಿ, ಮನುಷ್ಯರ ನಡುವೆ ಶೋಷಣೆ ಇಲ್ಲದ ಸಮಾನತೆ ವಾತಾವರಣ ನಿರ್ಮಾಣ ಮಾಡುವುದು ಸ್ವಾತಂತ್ರ್ಯವಾಗಿದೆ. ಧರ್ಮ, ಜಾತಿ ಆಧಾರದಡಿ ಭಗತ್ ಸಿಂಗ್ ಹೋರಾಟ ನಡೆಸಿಲ್ಲ. ಕಾರ್ಮಿಕ ವರ್ಗದವರ ಮತ್ತು ಶೋಷಿತ ಮಂದಿಯ ಚಳುವಳಿಯನ್ನು ಮುಂದಿಟ್ಟು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವ್ಯಕ್ತಿ. ಆದರೆ ಸದ್ಯ ತೀವ್ರಗಾಮಿ ಶಕ್ತಿಗಳು ಭಗತ್ ಸಿಂಗ್ ಭಾವಚಿತ್ರವನ್ನು ಹಿಡಿದುಕೊಂಡು ಜಾತಿ ಆಧಾರದಲ್ಲಿ ಗುರುತಿಸದ ಭಗತ್ ಸಿಂಗ್ ಅವರ ನಿಲುವಿಗೆ ಅಪಮಾನ ಮಾಡುತ್ತಿದ್ದಾರೆ. ಅವರಿಗೆ ಚಿತ್ರ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ರಾಜ್ಯ ಸರಕಾರ ಜಿಲ್ಲೆ ಮತ್ತು ರಾಜ್ಯದಲ್ಲಿ ನಡೆಯುತ್ತಿರುವ ಪ್ರಕರಣಗಳ ನಿಗೂಢತೆಯನ್ನು ಬಯಲಿಗೆ ತರಲು ವಿಫಲವಾಗುತ್ತಿದೆ. ಇದರಿಂದ ನ್ಯಾಯ ಸಿಗಬೇಕಾದ ಜನರಿಗೆ ಅನ್ಯಾಯ ಆಗುತ್ತಿದೆ ಎಂದು ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಹೈದರ್ ಪರ್ತಿಪ್ಪಾಡಿ ಹೇಳಿದ್ದಾರೆ. ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ, ಸರಕಾರದ ನಿಷ್ಕ್ರಿಯತೆ ಮತ್ತು ಐಎಎಸ್ ಅಧಿಕಾಡಿ ಡಿ.ಕೆ ರವಿ ನಿಗೂಢ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸಲು ಆಗ್ರಹಿಸಿ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಜೆಡಿಎಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಮುಡಿಪು ಕಾಲೇಜು ವಿದ್ಯಾರ್ಥಿಗಳ ಪ್ರವಾಸಕ್ಕೆ ತಡೆ, ಸಹೋದರತೆಯೊಂದಿಗೆ ಬೀಚಿಗೆ ತೆರಳುವ ಮಕ್ಕಳಿಗೆ ಹಲ್ಲೆ, ಮಸೀದಿ, ಪ್ರಾರ್ಥನಾಲಯಗಳಿಗೆ ಕಲ್ಲು ಮತ್ತು ಮೂರೂವರೆ ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಹೀಗೆ ನಿರಂತರ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಸರಕಾರ ಮಾತ್ರ ನೈತಿಕ ಪೊಲೀಸರಿಗೆ, ತಪ್ಪಿತಸ್ಥರಿಗೆ ಕಠಿಣ ಕ್ರಮ ಕೈಗೊಳ್ಳಲು ವಿಫಲವಾಗುತ್ತಿವೆ. ಇದರಿಂದ ಸರಕಾರದ ಮೇಲಿನ ನಂಬಿಕೆಯನ್ನು ಜನರು ಕಳೆದುಕೊಂಡಿದ್ದಾರೆ. ಜಿಲ್ಲೆಯ ಮಂತ್ರಿಗಳು ತಮ್ಮ ಜವಾಬ್ದಾರಿಯನ್ನು ನಿಭಾಯಿಸದೇ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಅವರು ಉಳಿಸಿದ ಜೀವಗಳು ನೂರಕ್ಕೂ ಅಧಿಕ. ಸದಾ ಸಾಹಸದಲ್ಲೇ ಜೀವನ ಸಾಗಿಸುತ್ತಿರುವ ವ್ಯಕ್ತಿ ಇದೀಗ ಸಮುದ್ರ ತೀರದ ಗುಜರಾತಿನಿಂದ ಕನ್ಯಾಕುಮಾರಿಗೆ ಪಾದಯಾತ್ರೆ ಹೊರಟು 57 ದಿನಗಳಲ್ಲಿ ನಡೆಯುತ್ತಾ ಭಾನುವಾರ ತಮ್ಮ ಹುಟ್ಟೂರು ತೊಕ್ಕೊಟ್ಟುವಿಗೆ ಬಂದು ತಲುಪಿದ್ದಾರೆ. ಉಳ್ಳಾಲ ಮೊಗವೀರಪಟ್ನ ನಿವಾಸಿ ನವೀನ್.ಯಸ್.ಕರ್ಕೇರ (48) ವೃತ್ತಿಯಲ್ಲಿ ಮೀನುಗಾರರು. ಉಳ್ಳಾಲ ಮೊಗವೀರಪಟ್ನದಲ್ಲಿರುವ ಜೀವರಕ್ಷಕದಳದ ಸಕ್ರಿಯ ಕಾರ್ಯಕರ್ತ. ಸಮುದ್ರದಲ್ಲಿ ಈಜಲೆಂದು ಬಂದು ಅಲೆಗಳಲ್ಲಿ ಸಿಲುಕಿ ಅಪಾಯದ ಸ್ಥಿತಿಯಲ್ಲಿದ್ದ ಹಲವು ಮಂದಿಯ ಜೀವರಕ್ಷಿಸಿದವರು. 30 ವರ್ಷಗಳಿಂದ ಇಂತಹ ಸಾಹಸದಲ್ಲಿ ತೊಡಗಿಕೊಂಡಿರುವ ನವೀನ್ ಅವರು ಸಮುದ್ರದ ದಡದುದ್ದಕ್ಕೂ ನಡೆದುಕೊಂಡೇ ದೇವಸ್ಥಾನಗಳನ್ನು ಸಂದರ್ಶಿಸಬೇಕು ಎನ್ನುವ ಉದ್ದೇಶವನ್ನು ಹಲವು ವರ್ಷಗಳ ಹಿಂದೆ ಸಂಕಲ್ಪಿಸಿದ್ದರು. ಆ ಸಂಕಲ್ಪ ಪ್ರಸಕ್ತ 2015ರಲ್ಲಿ ಈಡೇರಿತು. ಜನವರಿ ತಿಂಗಳಿನಲ್ಲಿ ಸಚಿವ ಯು.ಟಿ.ಖಾದರ್ ಅವರ ಆಪ್ತಸಹಾಯಕ ಪ್ರವೀಣ್ ಅವರಲ್ಲಿ ಪಾದಯಾತ್ರೆ ಕೈಗೊಳ್ಳುವ ಬಗ್ಗೆ ಹೇಳಿ, ನೆರವನ್ನು ಕೇಳಿದ್ದರು. ನೆರವಾದ ಮುಸ್ಲಿಂ ಸಹೋದರರು: ಪ್ರವೀಣ್ ಅವರು ತಮ್ಮ ಆಪ್ತ…
ಉಳ್ಳಾಲ ಡೆಸ್ಕ್ ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಆಶ್ರಯದಲ್ಲಿ ಮಂಗಳೂರು ವಿ.ವಿ.ಯ ಮಂಗಳಾ ಸಭಾಂಗಣದಲ್ಲಿ ಕರ್ನಾಟಕ ಇತಿಹಾಸ ಕಾಂಗ್ರೆಸ್‍ನ 24ನೇ ಅಧಿವೇಶನದ ಉದ್ಘಾಟನೆ ಗುರುವಾರ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ದೆಹಲಿ ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಮುಖ್ಯಸ್ಥರಾದ ಹಾಗೂ ಮಾಜಿ ಪ್ರದಾನಿ ಮನಮೋಹನ್ ಸಿಂಗ್ ಅವರ ಪುತ್ರಿ ಪ್ರೊ.ಉಪಿಂದರ್ ಸಿಂಗ್ ಅವರು ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಇಂದು ಮಧ್ಯಯುಗದ ಅಗಾಧವಾದ ಬೌದ್ಧಿಕ ಉತ್ಸಾಹ ಮತ್ತು ಸೃಜನಶೀಲ ಉತ್ಪಾದನೆಗಳನ್ನು ವಾಸ್ತವವಾಗಿ ಚರ್ಚೆಯಿಂದ ದೂರ ಉಳಿಸಲಾಗುತ್ತಿದೆ. ಆದ್ದರಿಂದ ಬೌಧಿಕ ಇತಿಹಾಸವನ್ನು ಉತ್ಪ್ರೇಕ್ಷೆ ಮಾಡದೆ ಈ ನಿಟ್ಟಿನಲ್ಲಿ ಹೆಚ್ಚೆಚ್ಚು ಚಿಂತನೆ, ಅಧ್ಯಯನಗಳು ನಡೆಯಬೇಕು ಎಂದು ಅವರು ಹೇಳಿದರು. ಭಾರತದ ಇತಿಹಾಸವು ಅಭೂತಪೂರ್ವವಾದುದು. ಭಾರತದ ವಿವಿಧ ಭಾಗಗಳಲ್ಲಿರುವ ಶಿಲಾಶಾಸನವನ್ನು ಶೋಧಿಸಿ ಅಧ್ಯಯನ ಮಾಡಲು ನೈಪುಣ್ಯತೆ ಇರುವ ಯುವ ಇತಿಹಾಸತಜ್ಞರ ಅನಿವಾರ್ಯತೆ ಇದೆ . ತತ್ವಶಾಸ್ತ್ರದ ಮಾಹಿತಿಗಳು, ಧಾರ್ಮಿಕ ವಿಚಾರಗಳು, ರಾಜಕೀಯ ಚಿಂತನೆ, ವಿಜ್ಞಾನ ಮತ್ತು ವೈದ್ಯಕೀಯ ಇತಿಹಾಸ ಅಥವಾ ಯಾವುದೇ…
ಉಳ್ಳಾಲ: ರಾ.ಹೆ.66ರಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ಗುರುವಾರ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿ 3 ಗಂಟೆಗಳ ಕಾಲ ವಾಹನಗಳು ನೇತ್ರಾವತಿ ಸೇತುವೆಯಿಂದ ತೊಕ್ಕೊಟ್ಟುವಿನವರೆಗೆ ಸರತಿ ಸಾಲಿನಲ್ಲಿ ನಿಂತಿತ್ತು. ಉಳ್ಳಾಲ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಕೊಣಾಜೆ : ಕೋಟಿಪದವು ಶ್ರೀರಾಮ ಭಜನಾ ಮಂದಿರದ ಪುನರ್ಪ್ರತಿಷ್ಠೆ ಪ್ರಯುಕ್ತ ದೀಪ ಪೂಜನಾ ಕಾರ್ಯಕ್ರಮ ಗುರುವಾರ ನಡೆಯಿತು.
ತೊಕ್ಕೊಟ್ಟು: ತೊಕ್ಕೊಟ್ಟುವಿನಲ್ಲಿ 3.5 ವರ್ಷದ ಮಗವಿನ ಮೇಲೆ ಲೈಂಗಿಕ ಶೋಷಣೆ ನಡೆದಿರುವುದು ಅತ್ಯಂತ ಹೀನ ಕೃತ್ಯ. ಇದರಿಂದ ಬುದ್ಧಿವಂತರ ಜಿಲ್ಲೆಗೆ ಅಪಮಾನ ಮಾಡಿದಂತಾಗಿದೆ. ಜಿಲ್ಲೆಯ ಉಸ್ತುವಾರಿ ಸಚಿವರು ಕೃತ್ಯದ ಬಗ್ಗೆ ಮಾತನಾಡದೇ ಇರುವುದು ಅವರ ಕಾಯವೈಖರಿಯನ್ನು ತೋರಿಸುತ್ತದೆ ಎಂದು ಎಸ್ ಎಸ್ ಎಫ್ ರಾಜ್ಯ ಸದಸ್ಯ ಕೆ.ಎಂ.ಸಿದ್ದೀಖ್ ಮೋಂಟುಗೋಳಿ ಹೇಳಿದ್ದಾರೆ. ಅವರು ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಎಸ್ ಎಸ್ ಎಫ್ ಉಳ್ಳಾಲ ಡಿವಿಷನ್ ವತಿಯಿಂದ ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ದಬ್ಬಾಳಿಕೆಯ ವಿರುದ್ಧ, ಕೋಮು ದ್ವೇಷದ ವಿಷ ಬೀಜ ಬಿತ್ತುವುದನ್ನು ಖಂಡಿಸಿ, ಮುಗ್ಧ ಹೆಣ್ಣು ಮಕ್ಕಳ ಲೈಂಗಿಕ ದೌರ್ಜನ್ಯದ ವಿರುದ್ಧ, ಅಲ್ಪಸಂಖ್ಯಾತರ ಆರಾಧನಾಲಯಗಳ ಮೇಲೆ ನಡೆಯುವ ದಾಳಿಗಳ ವಿರುದ್ಧ ಬುಧವಾರ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಈ ಸಂದರ್ಭ ಎಸ್ ಎಸ್ ಎಫ್ ಜಿಲ್ಲಾ ಅಧ್ಯಕ್ಷ ಯಾಕೂಬ್ ಸಅದಿ ನಾವೂರು, ಎಸ್ ಎಸ್ ಎಫ್ ರಾಜ್ಯ ಸದಸ್ಯರಾದ ಇಸ್ಮಾಯಿಲ್ ಸಅದಿ ಕಿನ್ಯಾ, ಎಸ್ ಎಸ್ ಎಫ್ ಜಿಲ್ಲಾ ಮಾಜಿ ಅಧ್ಯಕ್ಷ ಇಸ್ಮಾಯಿಲ್ ಸಅದಿ ಉರುಮನೆ,…
ತಲಪಾಡಿ: ತಲಪಾಡಿ ದೇವಿಪುರದ ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ವಾರ್ಷಿಕ ಮಹೋತ್ಸವ ಅಂಗವಾಗಿ ಮಹಾರಥೋತ್ಸವ ನಡೆಯಿತು.