Author: UllalaVani

Kannada News From Coastal Karnataka

ಉಳ್ಳಾಲ : ಯುಗಧರ್ಮದಂತೆ ಬದಲಾವಣೆ ಸಹಜವಾಗಿದ್ದು ಧಾರ್ಮಿಕ ವ್ಯವಸ್ಥೆಯಲ್ಲಿಯೂ ಬದಲಾವಣೆ ಅನಿವಾರ್ಯ. ಹಿಂದಿನ ಕಾಲದ ವ್ಯವಸ್ಥೆಗಳನ್ನು ಪ್ರಸ್ತುತ ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡಿದಾಗ ಅದನ್ನು ವಿರೋಧಿಸುವುದಕ್ಕಿಂತ ಒಪ್ಪಿಕೊಳ್ಳಬೇಕಾಗುತ್ತದೆ. ಯಾಕೆಂದರೆ ವಿಶಾಲವಾಗಿರುವ ಹಿಂದೂ ಧರ್ಮವನ್ನು ಅರಿತುಕೊಳ್ಳುವುದೇ ಬಹಳಷ್ಟಿರುವಾಗ ಅಲ್ಪಸ್ವಲ್ಪ ತಿಳಿದುಕೊಂಡು ಅದರಲ್ಲಿನ ಆಚರಣೆ, ಪದ್ಧತಿಗಳು, ನಂಬಿಕೆಗಳನ್ನು ಅರ್ಥೈಸಿಕೊಳ್ಳದೆ ನಿಂದಿಸುವುದು ತಪ್ಪು ಎಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಮಂಗಳೂರು ಆವೃತ್ತಿಯ ಮುಖ್ಯ ಪ್ರಸರಣಾಧಿಕಾರಿ ನವನೀತ ಶೆಟ್ಟಿ ಕದ್ರಿ ಅಭಿಪ್ರಾಯಪಟ್ಟರು. ತಲಪಾಡಿ ದೇವಿಪುರದ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ನಡೆಯುತ್ತಿರುವ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರು ಹಾಗೂ ಪರಿವಾರ ದೇವರುಗಳ ಪುನರ್ ಪ್ರತಿಷ್ಠೆ ಹಾಗೂ ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತ ನಡೆಯುತ್ತಿರುವ ಆರನೆಯ ದಿನದ ಧಾರ್ಮಿಕ ಸಭೆಯಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು. ವಿಶ್ವಾಮಿತ್ರ ನಾಯಿ ಮಾಂಸ ತಿಂದನೆಂದು ಅವರನ್ನು ದೂಷಿಸುವುದಕ್ಕಿಂತ ವಿಶ್ವಾಮಿತ್ರರು ನಾಯಿ ಮಾಂಸವನ್ನು ಮಂತ್ರಶಕ್ತಿಯಿಂದ ಸ್ವಚ್ಛಗೊಳಿಸಿ ತಿಂದು, ಆ ಮೂಲಕ ಭೂಲೋಕದ ಬರಗಾಲವನ್ನು ದೇವತೆಗಳಿಗೆ ತಿಳಿಸುವ ಪ್ರಯತ್ನವನ್ನು ಮಾಡಿದ್ದರು ಎಂಬ ಮರ್ಮ ಅರಿಯದವರು ಹಿಂದೂಗಳನ್ನು ದೂರದೆ…

Read More

ಮಂಗಳೂರು:  ಚಿತ್ರಕಲಾ ಶಿಕ್ಷಣ, ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕ. ಸಮರ್ಥ ಕಲಾ ಶಿಕ್ಷಕನೊಬ್ಬ ಏನೂ ಅಲ್ಲದ ವಿದ್ಯಾರ್ಥಿಯನ್ನೂ ಮುಗಿಲೆತ್ತರಕ್ಕೆ ಬೆಳೆಸಬಲ್ಲವನಾಗಿದ್ದು ಮಕ್ಕಳ ಮಾನಸಿಕ ನೆಮ್ಮದಿಗೆ ಕಾರಣನಾಗಿರುತ್ತಾನೆ ಎಂದು ಡಯಟ್‍ನ ಪ್ರಾಂಶುಪಾಲರಾದ ಶ್ರೀ ಸಿಪ್ರಿಯನ್ ಮೊಂತೆರೋ ತಿಳಿಸಿದರು. ಅವರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಸಹಯೋಗದೊಂದಿಗೆ ಇತ್ತೀಚೆಗೆ ನಡೆದ ದಕ್ಷಿಣ ಕನ್ನಡ ಚಿತ್ರಕಲಾ ಶಿಕ್ಷಕರ ಸಂಘದ ತಿಂಗಳ ಕಾರ್ಯಾಗಾರವನ್ನು ನಗರದಲ್ಲಿ ಉದ್ಘಾಟಿಸಿ ಮಾತಾನಾಡಿದರು. ಮುಖ್ಯ ಅತಿಥಿಗಳಾಗಿ ಕಲಾವಿದ ಬಿ.ಗಣೇಶ ಸೋಮಯಾಜಿ ಚಿತ್ರಕಲಾ ಶಿಕ್ಷಕರು ಕಾಲಕ್ಕೆ ತಕ್ಕ ಬದಲಾಗುತ್ತಾ ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ವಿದ್ಯಾರ್ಥಿಗಳು ಇನ್ನೂ ಎತ್ತರಕ್ಕೆ ಬೆಳೆಯುವುದಕ್ಕೆ ಕಾರಣರಾಗಬೇಕು ಎಂದರು. ತಿಂಗಳ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಉಡುಪಿಯ ಚಿತ್ರಕಲಾ ಶಿಕ್ಷಕ ಶ್ರೀ ಭೋಜ ಹಾಂಡ ನಿರಂತರ ಮತ್ತು ವ್ಯಾಪಕಮೌಲ್ಯ ಮಾಪನದ ಬಗ್ಗೆ ಮಾರ್ಗದರ್ಶನ ನೀಡಿದರು. ಜಿಲ್ಲೆಯ ಸುಮಾರು 100 ಮಂದಿ ಚಿತ್ರಕಲಾ ಶಿಕ್ಷಕರು ಇದರ ಸದುಪಯೋಗ ಪಡೆದುಕೊಂಡರು. ಅಧ್ಯಕ್ಷರಾಗಿ ಮಾತನಾಡಿದ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀ ಮಹಾಬಲ ಕುಳ…

Read More

ದೇರಳಕಟ್ಟೆ, ಜ.೨೩: ಬದ್ರಿಯಾ ಕೇಂದ್ರ ಜುಮಾ ಮಸೀದಿ ಹಾಗೂ ಹಯಾತುಲ್ ಇಸ್ಲಾಂ ಮದರಸ ದೇರಳಕಟ್ಟೆ ಇದರ ಆಶ್ರಯದಲ್ಲಿ ಮೀಲಾದುನ್ನಬಿ ಹಾಗೂ ಮೀಲಾದ್ ಫೆಸ್ಟ್ ೨೦೧೫ ಕಾರ್ಯಕ್ರಮವು ಜಮಾಅತ್ ಅಧ್ಯಕ್ಷರಾದ ಇಸ್ಮಾಯಿಲ್ ಹಾಜಿಯವರ ಅಧ್ಯಕ್ಷತೆಯಲ್ಲಿ ಜರಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಸ್ಥಳೀಯ ಖತೀಬರಾದ ಬಹು| ಏ.ಒ ಶರೀಫ್ ದಾರಿಮಿಯವರು ಮಾತನಾಡಿ ಪೈಗಂಬರ ಸಂದೇಶವನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು, ನೆರೆಮನೆಯವನು ಹಸಿದಿರುವಾಗ ಹೊಟ್ಟೆ ತುಂಬಾ ಉಣ್ಣುವವನು ನನ್ನವನಲ್ಲ ಎಂಬ ಪ್ರವಾದಿ ನುಡಿಯನ್ನು ಅರ್ಥೈಸಿಕೊಂಡು ಸಮಾಜದಲ್ಲಿ ಆಡಂಬರ ಮದುವೆಗೆ ಕಡಿವಾಣ ಹಾಕಬೇಕಾದ ಅನಿವಾರ್ಯತೆ ಇದ್ದು ಆಡಂಬರ ಮದುವೆಯ ಆಮಂತ್ರಣವನ್ನು ಆಯಾ ಜಮಾಅತಿನ ಖತೀಬರಿಗೆ ನೀಡದಿರುವುದೇ ಲೇಸು ಎಂದು ಹೇಳಿದರು. ಆರಂಭದಲ್ಲಿ ಮಸೀದಿ ಗೌರವಾಧ್ಯಕ್ಷರಾದ ಅಬ್ದುಲ್ಲಾ ಹಾಜಿಯವರು ಧ್ವಜಾರೋಹಣಗೈದರು. ನಂತರ ಹಯಾತುಲ್ ಇಸ್ಲಾಂ ಮದರಸ ದೇರಳಕಟ್ಟೆ, ಅರಫಾ ಮದರಸ ಜಲಾಲ್‌ಬಾಗ್ ಹಾಗೂ ಮನಾರುಲ್ ಹುದಾ ಮದರಸ ದೇರಳಕಟ್ಟೆ, ಅರಫಾ ಮದರಸ ಜಲಾಲ್‌ಬಾಗ್ ಹಾಗೂ ಮನಾರುಲ್ ಹುದಾ ಮದರಸ ಗ್ರೀನ್ ಗ್ರೌಂಡ್ ಇಲ್ಲಿನ ಮದರಸ ವಿದ್ಯಾರ್ಥಿಗಳ ಸ್ಕೌಟ್ ಮತ್ತು ದಫ್ ನೊಂದಿಗೆ…

Read More

ಉಳ್ಳಾಲ: ಬಡವರ ಅಂಗಡಿಗಳನ್ನೇ ಗುರಿಯಾಗಿಸಿ ನಡೆಸುತ್ತಿರುವ ಕಿಡಿಗೇಡಿಗಳು ಕೃತ್ಯ ಖಂಡನೀಯ. ಉಳ್ಳಾಲ ನಗರಸಭೆ ಮತ್ತು ಟೈಲರ್‍ಸ್ ಅಸೋಸಿಯೇಷನ್ ಆಶ್ರಯದಲ್ಲಿ ಮತ್ತೆ ಅಂಗಡಿಯಲ್ಲಿ ವ್ಯಾಪಾರ ನಡೆಸುವಂತೆ ಎಲ್ಲಾ ರೀತಿಯಲ್ಲಿ ಸಹಕರಿಸಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಅವರು ತೊಕ್ಕೊಟ್ಟು ಕಿಡಿಗೇಡಿಗಳು ಬೆಂಕಿ ಹಾಕಿರುವ ಟಿ.ಸಿ.ರೋಡ್ ನಲ್ಲಿರುವ ವಾಸುದೇವ ಪೂಜಾರಿ ಎಂಬವರಿಗೆ ಸೇರಿದ ನಿತ್ಯಾನಂದ ಟೈರ್‍ಸ್ ಅಂಗಡಿಗೆ ಭೇಟಿ ನೀಡಿ ಹೇಳಿದರು. ತೊಕ್ಕೊಟ್ಟು ಒಳಪೇಟೆಯಲ್ಲಿರುವ ಎರಡು ಸಿಸಿಟಿವಿ ಕೆಮರಾ ಮೂಲಕ ಆರೋಪಿಗಳನ್ನು ಪತ್ತೆಹಚ್ಚುವ ಕಾರ್‍ಯ ಪೊಲೀಸರು ಶೀಘ್ರವೇ ನಡೆಸುತ್ತಾರೆ. ಶೇ.೫ ರಷ್ಟಿರುವ ಕಿಡಿಗೇಡಿಗಳು ಇಂತಹ ಕೃತ್ಯದಲ್ಲಿ ಭಾಗಿಯಾಗುತ್ತಿದ್ದಾರೆ. ಇದನ್ನು ಧರ್ಮ ಆಧಾರಿತವಾಗಿ ತೆಗೆದುಕೊಳ್ಳದೆ, ಸಮಾಜದ್ರೋಹಿಗಳ ಮತ್ತು ಬಡವರ ನಡುವಿನ ಹೋರಾಟ ಎಂದು ಪರಿಗಣಿಸಿ ಆರೋಪಿಗಳ ಪತ್ತೆಗೆ ಎಲ್ಲರೂ ಸಹಕರಿಸಬೇಕು ಎಂದರು. ಈ ಸಂದರ್ಭ ಉಳ್ಳಾಲ ನಗರಸಭೆ ಅಧ್ಯಕ್ಷೆ ಗಿರಿಜಾ ಬಾ, ಉಪಾಧ್ಯಕ್ಷೆ ರಝಿಯಾ ಇಬ್ರಾಹಿಂ, ಟೈಲರ್‍ಸ್ ಅಸೋಸಿಯೇಷನ್ ಮಾಜಿ ಜಿಲ್ಲಾಧ್ಯಕ್ಷ ರಮೇಶ್ ಮಾಡೂರು, ಉಳ್ಳಾಲ ಎಸ್.ಐ.ಗಳಾದ ಭಾರತಿ, ರಾಜೇಂದ್ರ, ಟೈಲರ್‍ಸ್ ಅಸೋಸಿಯೇಷನ್ನಿನ ಗಿರೀಶ್,…

Read More

ಉಳ್ಳಾಲ: ಮನುಷ್ಯ ಸುಖವನ್ನು ಅರಸುತ್ತಾ ಸಾಗಿದ್ದು ಇನ್ನೂ ತೃಪ್ತನಾಗಿಲ್ಲ. ಪ್ರಯಾಣದಲ್ಲಿರುವ ವ್ಯಕ್ತಿಯೊಬ್ಬ ಮಳೆ ಬರುವಾಗ ನಿಂದಿಸಿದರೆ, ಅದುವೇ ರೈತ ಹರ್ಷಗೊಳ್ಳುತ್ತಾನೆ. ಆಂಗ್ಲರು ಬ್ರೆಡ್ ತಿಂದು ಸಂತಸ ಪಟ್ಟರೆ ನಮ್ಮ ಜಿಲ್ಲೆಯವರು ಗಂಜಿ ಊಟದಲ್ಲಿ ತೃಪ್ತಿಪಟ್ಟುಕೊಳ್ಳಬಹುದು. ಹಾಗಾಗಿ ಸುಖ ಎಂಬುದು ವ್ಯಕ್ತಿ, ಸಮಾಜ, ನಾಡು, ಕಾಲ ಕಾಲಕ್ಕೆ ಬದಲಾಗುತ್ತದೆ ಎಂದು ಧರ್ಮಸ್ಥಳ ನಿತ್ಯಾನಂದನಗರ ಶ್ರೀರಾಮ ಕ್ಷೇತ್ರ ಮಠಾಧೀಶ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನದಲ್ಲಿ ನುಡಿದರು. ತಲಪಾಡಿ ದೇವಿಪುರದ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ನಡೆಯುತ್ತಿರುವ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರು ಹಾಗೂ ಪರಿವಾರ ದೇವರುಗಳ ಪುನರ್ ಪ್ರತಿಷ್ಠೆ ಹಾಗೂ ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತ ನಡೆಯುತ್ತಿರುವ ಐದನೆಯ ದಿನದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಮನುಷ್ಯನಾಗಿ ಹುಟ್ಟಿದ ಮೇಲೆ ನಮ್ಮ ಲಕ್ಷ ್ಯ ಆತ್ಮನ ಸಾಕ್ಷಾತ್ಕಾರದತ್ತ ಇರಬೇಕು. ಮಗು ತಾಯಿಯ ಗರ್ಭದಿಂದ ಬಂದ ಕೂಡಲೇ ಮೂರು ಗುಣಗಳಿಂದ ಆವರಿಸಲ್ಪಡುತ್ತದೆ. ಅಕ್ಕಸಾಲಿಗನೊಬ್ಬ ಶುದ್ಧ ಅಪರಂಜಿ ಚಿನ್ನವಾದರೂ ಅದನ್ನು ಸುಂದರ ಹಾಗೂ ಗಟ್ಟಿಬಂಗಾರ ಮಾಡಲು ಅದಕ್ಕೆ ಸ್ವಲ್ಪ…

Read More

ಉಳ್ಳಾಲ: ಯುವಜನಾಂಗಕ್ಕೆ ಧಾರ್ಮಿಕ ಪ್ರಜ್ಞೆ ಮೂಡಿಸುವ ಸಲುವಾಗಿ ಹಲವು ಮೂಲಗಳಿಂದ ಮಾಹಿತಿ ಸಂಗ್ರಹಿಸಿ, ಭಾಷಾಂತರಿಸಿ, ತಾಳೆಗರಿಯಲ್ಲಿರುವ ವಿಷಯ ಸಂಕಲ್ಪಿಸಿ ಕನ್ನಡದ ಓದುಗರಿಗೆ ಸುಲಭವಾಗಿ ತಿಳಿಸುವ ಉದ್ದೇಶದಿಂದ ಧರ್ಮ ಜ್ಞಾನ ಪುಸ್ತಕವನ್ನು ರಚಿಸಲಾಗಿದೆ ಎಂದು ಲೇಖಕ, ತೀಯ ಸಮಾಜದ ಒಂದನೇ ಗುರಿಕಾರ ಪ್ರಕಾಶ್.ಎಂ.ಉಳ್ಳಾಲ್ ಅಭಿಪ್ರಾಯಪಟ್ಟರು. ಅವರು ತೊಕ್ಕೊಟ್ಟು ಕ್ಲಿಕ್ ಸಭಾಭವನದಲ್ಲಿ ತೊಕ್ಕೊಟ್ಟು ಬಿ.ಬಿ.ಸಿ ಪ್ರಕಾಶನದಡಿ ಮುದ್ರಣಗೊಂಡ `ಧರ್ಮ ಜ್ಞಾನ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಿಂದು ಆಚರಣೆಗಳಲ್ಲಿ ಹಲವು ನಂಬಿಕೆಗಳಿವೆ. ಅವೆಲ್ಲದಕ್ಕೂ ವೈಜ್ಞಾನಿಕ ಕಾರಣಗಳು ಇವೆ. ಇದನ್ನು ಯುವಜನಾಂಗಕ್ಕೆ ಪರಿಚಯಿಸುವ ಪ್ರಯತ್ನ ಪುಸ್ತಕದಲ್ಲಿದೆ. ಹಿಂದು ಸಮಾಜೋತ್ಸವದಲ್ಲಿ ಹೆಚ್ಚು ಯುವಜನಾಂಗ ಭಾಗವಹಿಸುವುದರಿಂದ ಅಲ್ಲಿಯೂ ಪುಸ್ತಕದ ಪ್ರಚಾರ ನಡೆಯಲಿದೆ ಎಂದರು. ಉಳ್ಳಾಲ ಶ್ರೀ ಚೀರುಂಭ ಭಗವತಿ ಕ್ಷೇತ್ರದ ಕಾರ್ಯದರ್ಶಿ ಪದ್ಮನಾಭ ಮಾಡೂರು ಕಾರ್ಯಕ್ರಮ ಉದ್ಘಾಟಿಸಿದರು. ಉಳ್ಳಾಲ ತೀಯ ಸ್ವಸಹಾಯ ಸಂಘದ ಕಾರ್ಯದರ್ಶಿ ಪವನ್ ರಾಜ್ ಕೊಲ್ಯ, ನಿತಿನ್ ರಾಜ್ ಮಾಸ್ತಿಕಟ್ಟೆ, ಉದ್ಯಮಿ ಚಂದ್ರಕಾಂತ್ ತೊಕ್ಕೊಟ್ಟು, ಸತೀಶ್ ಫನಿಕರ್, ಸುರೇಂದ್ರ ಗಂಡಿ ಉಪಸ್ಥಿತರಿದ್ದರು. ತೀಯ ಸಮಾಜದ…

Read More

ಉಳ್ಳಾಲ: ಯಾವುದೇ ಪ್ರದೇಶದ ಅಭಿವೃದ್ಧಿ ಆಗಬೇಕಾದರೆ ಆ ಭಾಗದ ಜನತೆ ಹಾಗೂ ಜವಾಬ್ದಾರಿಯುತ ಸಂಘ ಸಂಸ್ಥೆಗಳು ಸಂಘಟನೆಗಳ ಪಾತ್ರ ಬಹು ಮುಖ್ಯ. ಆ ನಿಟ್ಟಿನಲ್ಲಿ ನರಿಂಗಾನ ಗ್ರಾಮದ ಸೌರ್ಕುಡೇಲಿನಲ್ಲಿ ನೂತನ ಕಿರು ಸೇತುವೆ ನಿರ್ಮಾಣಕ್ಕಾಗಿ ಸಂಘ ಸಂಸ್ಥೆಗಳು ಹಾಗೂ ಇಲ್ಲಿನ ಜನರು ವಿವಿಧ ರೀತಿಯಲ್ಲಿ ಶ್ರಮಿಸಿದ್ದಾರೆ. ನೂತನ ಸೇತುವೆ ನಿರ್ಮಾಣದ ಮೂಲಕ ಅವರೆಲ್ಲರ ನಿರೀಕ್ಷೆ ಶೀಘ್ರದಲ್ಲಿ ಈಡೇರಲಿದ್ದು, ಈ ಯೋಜನೆಗೆ ಸಹಕರಿಸಿದ ಎಲ್ಲರೂ ಅಭಿನಂದನಾರ್ಹರು ಎಂದು ರಾಜ್ಯಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಆಭಿಪ್ರಾಯಪಟ್ಟರು. ನರಿಂಗಾನ ಗ್ರಾಮದ ತೌಡುಗೋಳಿ ಕ್ರಾಸ್‍ನಿಂದ ತೌಡುಗೋಳಿ ಸಂಪರ್ಕ ರಸ್ತೆಯ ಸರ್ಕುಡೇಲಿನಲ್ಲಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಕಿರು ಸೇತುವೆಗೆ ಭಾನುವಾರ ಶಿಲಾನ್ಯಾಸಗೈದು ಅವರು ಮಾತನಾಡಿದರು. ನರಿಂಗಾನ ಭಾಗದ ಅತಿಮುಖ್ಯ ಸೇತುವೆ ಸರ್ಕುಡೇಲು ಸೇತುವೆ ಕೇರಳ ಹಾಗೂ ಕರ್ನಾಟಕ ಗಡಿಭಾಗದಲ್ಲಿ ಪ್ರಮುಖ ಕೊಂಡಿಯೇ ಆಗಿದೆ. ಸೇತುವೆ ನಿರ್ಮಾಣ ಕಾಲದಲ್ಲಿ ಇಲ್ಲಿನ ಭೂಮಾಲೀಕರು ಪರೋಪಕಾರಿ ಭಾವನೆ ತೋರಿದ ಹಿನ್ನೆಲೆಯಲ್ಲಿ ಸುಮಾರು ಐದು ದಶಕಗಳ ಹಿಂದೆಯೇ ಈ ವ್ಯಾಪ್ತಿಯಲ್ಲಿ…

Read More

ಉಳ್ಳಾಲ, ಫೆ. 15: ವಿಶ್ವಹಿಂದೂ ಪರಿಷತ್ ಸುವರ್ಣ ಮಹೋತ್ಸವದ ಅಂಗವಾಗಿ ಮಾ 1ರಂದು ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆಯುವ ಹಿಂದೂ ಸಮಾಜೋತ್ಸವದ ಪೂರ್ವಭಾವಿಯಾಗಿ ಭಾನುವಾರ ಅಸೈಗೋಳಿಯಿಂದ ಕುತ್ತಾರುವರೆಗೆ ಬೈಕ್ ರ‌್ಯಾಲಿ ನಡೆಯಿತು. ಅಸೈಗೋಳಿಯಿಂದ ದೇರಳಕಟ್ಟೆ , ಕುಂಪಲ, ಕೋಟೆಕಾರು ಬೀರಿ, ಮಾಡೂರು, ಸೋಮೇಶ್ವರ , ತೊಕ್ಕೊಟ್ಟು , ಉಳ್ಳಾಲ ಮಾರ್ಗವಾಗಿ ಕುತ್ತಾರು ಶ್ರೀ ಸಿದ್ಧಿವಿನಾಯಕ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಸಮಾಪನಗೊಂಡಿತು. ಬೈಕ್ ರ್ಯಾಲಿಗೆ ವಿಶ್ವಹಿಂದೂ ಪರಿಷತ್  ಮಾಜಿ ಕಾರ್ಯದರ್ಶಿ   ಹಾಗೂ ನಿವೃತ್ತ ಅಧ್ಯಾಪಕ ವೆಂಕಪ್ಪ ಮಾಸ್ಟರ್ ಅಸೈಗೋಳಿ ಚಾಲನೆ ನೀಡಿದರು. ಹಿರಿಯರಾದ ಟಿ. ಅಂಬು, ವಿಶ್ವಹಿಂದೂ ಪರಿಷತ್ ನ ಜಿಲ್ಲಾ ಕಾರ್ಯದರ್ಶಿ  ಗೋಪಾಲ ಕುತ್ತಾರ್, ಬಜರಂಗದಳದ ಜಿಲ್ಲಾ ಸಹ ಸಂಚಾಲಕ ಪ್ರವೀಣ್ ಕುತ್ತಾರ್, ಪ್ರಖಂಡ ಸಂಚಾಲಕ ರವಿ ಅಸೈಗೋಳಿ, ಬಜೆಪಿ ಕೊಣಾಜೆ ಗ್ರಾಮ ಸಮಿತಿ ಅಧ್ಯಕ್ಷ ನಾರಾಯಣ ರೈ ಕ್ಕೆಮಜಲು, ವಿಶ್ವಹಿಂದೂ ಪರಿಷತ್ನ ಪ್ರಖಂಡ ಕಾರ್ಯದರ್ಶಿ ಬಿ.ನಾರಾಯಣ ಕುಂಪಲ, ವಿಶ್ವ ಹಿಂದೂ ಪರಿಷತ್, ಬಜರಂಗದಳ, ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ರ‌್ಯಾಲಿ ಭಾಗವಹಿಸಿದರು.…

Read More

ಉಳ್ಳಾಲ : ನಾಗರಿಕ ಸಮಾಜದಲ್ಲಿ ವಿಜ್ಞಾನ ಮನುಕುಲಕ್ಕೆ ಒಳಿತನ್ನು ಉಂಟುಮಾಡಲು ಹೆಚ್ಚು ಉಪಯುಕ್ತವಾಗಬೇಕು. ಕೆಲವೊಂದು ಪ್ರಶ್ನೆಗಳಿಗೆ ವಿಜ್ಞಾನದಲ್ಲಿ ಉತ್ತರವಿಲ್ಲ. ವಿಜ್ಞಾನ ವಾಸ್ತವಕ್ಕೆ ಹತ್ತಿರವಿದ್ದು ಜ್ಞಾನ ಹೆಚ್ಚಿಸವ ಕೆಲಸ ಮಾಡಿದರೆ ತತ್ವ ಯೋಚಿಸುವಂತೆ ಮಾಡುತ್ತದೆ ಎಂದು ಸುಪ್ರೀಂ ಕೋಟಿ‍‍ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಎಂ.ಎನ್.ವೆಂಕಟಾಚಲಯ್ಯ ಅಭಿಪ್ರಾಯಪಟ್ಟರು. ನಿಟ್ಟೆ ವಿಶ್ವವಿದ್ಯಾಲಯ ಮತ್ತು ಪೀಪಲ್ಸ್ ಕೌನ್ಸಿಲ್ ಆಫ್ ಎಜುಕೇಶನ್ ಜಂಟಿ ಆಶ್ರಯದಲ್ಲಿ ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯದ ಕೆ.ಎಸ್.ಹೆಗ್ಡೆ ಆಡಿಟೋರಿಯಂನಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಪ್ರಥಮ ಅಖಿಲ ಭಾರತ ಪೀಪಲ್ಸ್ ವೈದ್ಯಕೀಯ ಹಾಗೂ ಆರೋಗ್ಯ ವಿಜ್ಞಾನ ಸಮ್ಮೇಳನವನ್ನು ಗುರುವಾರ ಉದ್ಘಾಟಿಸಿ, ಬಳಿಕ ಸಮ್ಮೇಳನ ಪ್ರಯುಕ್ತ ಹೊರತಂದ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

Read More

ಉಳ್ಳಾಲ: ಎಸ್ಎಸ್ಎಫ್ ಮತ್ತು ತಖ್ವಿಯತುಲ್ ಇಸ್ಲಾಂ ಯೆಂಗ್ಮೆನ್ಸ್ ಎಸೋಸಿಯೇಶನ್ ಕಲ್ಕಟ್ಟ ಇದರ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಸ್ವಲಾತ್ ವಾರ್ಷಿ ಕ ಕಾರ್ಯಕ್ರಮಕ್ಕೆ ಅಗಮಿಸಿದ ಅಸ್ಸಯ್ಯದ್ ಅಬ್ದುರ್ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ಬಾಯಾರ್ ಇಲ್ಯಾಸ್ ಜುಮಾ ಮಸೀದಿ ಕಟ್ಟಡಕ್ಕೆ ಶಿಲನ್ಯಾಸ ನೆರವೇರಿಸಿದರು. ಈ ಸಂದರ್ಭ ಇಲ್ಯಾಸ್ ಜುಮಾ ಮಸ್ಜಿದ್ ಉಪಾಧ್ಯಕ್ಷರುಗಳಾದ ಮೊಹಮ್ಮದ್ ಖಂಡಿಕ, ಮೊಯಿದಿನ್ ಕುಂಞ, ಇಲ್ಯಾಸ್ ಮಸೀದಿಯ ಖತೀಬ್ ಮಹಮ್ಮದ್ ಹನೀಫ್ ಸಖಾಫಿ, ಎಸ್ವೈಎಸ್ ಕಲ್ಕಟ್ಟ ಶಾಖೆಯ ಅಧ್ಯಕ್ಷ ಮೋನು ಕಲ್ಕಟ್ಟ, ಮಂಜನಾಡಿ ಗ್ರಾ.ಪಂ. ಉಪಾಧ್ಯಕ್ಷ ಕುಂಞಿಬಾವ ಹಾಜಿ ಮುಂತದವರು ಉಪಸ್ಥಿತರಿದ್ದರು.

Read More