ಉಳ್ಳಾಲ: ಇಲ್ಲಿನ ಶ್ರೀ ಚೀರುಂಭ ಭಗವತೀ ಕ್ಷೇತ್ರದಲ್ಲಿ ಭರಣಿ ಮಹೋತ್ಸವದ ಪ್ರಯುಕ್ತ ಹಸಿರುಹೊರೆಕಾಣಿಕೆ ಶೋಭಾಯಾತ್ರೆ ರ್ಶಈ ಜೈ ವೀರ ಮಾರುತಿ ವ್ಯಾಯಾಮ ಶಾಲೆ ತೊಕ್ಕೊಟ್ಟು ಇಲ್ಲಿಂದ ಶ್ರೀ ಕ್ಷೇತ್ರಕ್ಕೆ ವಿಜೃಂಭಣೆಯಿAದ ಜರಗಿತು.ಕಲ್ಲಡ್ಕ ಗೊಂಬೆ, ಚೆಂಡೆ ಕುಣಿತ, ಬ್ಯಾಂಡ್ , ಹುಲಿವೇಷ, ಕುಣಿತ ಭಜನೆ ಜೊತೆಗೆ ಹೊರೆಕಾಣಿಕೆಗಳು ಹಲವು ವಾಹನಗಳಲ್ಲಿ ಸಾಗಿಬಂತು. ಪರಿಸರ ಪ್ರೇಮಿ ಮಾಧವ್ ಉಳ್ಳಾಲ್ ಇವರು ರುದ್ರಾಕ್ಷ ಗಿಡವನ್ನು ಹೊರೆಕಾಣಿಕೆಯಾಗಿ ನೀಡುವ ಮೂಲಕ ಪರಿಸರ ಜಾಗೃತಿ ಮೂಡಿಸಿರುವುದು ಹೊರೆಕಾಣಿಕೆಯ ವಿಶೇಷವಾಗಿತ್ತು.ಹಸಿರುವಾಣಿ ಹೊರೆಕಾಣಿಕೆಗೆ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳು ಚಾಲನೆ ನೀಡಿದರು. ಈ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಕ್ಷೇತ್ರದ ಆಡಳಿತ ಮೊಕ್ತೇಸರರಾದ ಸುರೇಶ್ ಭಟ್ನಗರ, ಉಮಾಮಹೇಶ್ವರಿ ಕ್ಷೇತ್ರದ ಆಡಳಿತ ಮೊಕ್ತೇಸರ ಎ.ಜೆ.ಶೇಖರ್, ಅಧ್ಯಕ್ಷರಾದ ಚಿದಾನಂದ ಗುರಿಕಾರ ನಂದ್ಯ, ಯಶವಂತ ಉಚ್ಚಿಲ್, ಜಗದೀಶ್ ಉಳ್ಳಾಲ್ ಬೈಲ್, ತೀಯ ಸಮಾಜದ ಮುಖಂಡ ಚಂದ್ರಹಾಸ್ ಉಳ್ಳಾಲ್ , ಮೊಕ್ತೇಸರರುಗಳಾದ ಸದಾಶಿವ ಉಳ್ಳಾಲ್, ವಿಶ್ವನಾಥ ಉಚ್ಚಿಲ್, ರಾಘವ ಕೈಕಂಬ, ಉಮೇಶ್ ಕೊಣಾಜೆ ಉಪಾಧ್ಯಕ್ಷರುಗಳಾದ ದಿನೇಶ್ ಕುಂಪಲ,…
Author: UllalaVani
ಮಾಡೂರು: ಇಲ್ಲಿನ ಕೊಂಡಾಣ ರಸ್ತೆಯಲ್ಲಿರುವ ಸಾಯಿಧಾಮದ ಶ್ರೀ ಶಿರ್ಡಿ ಸಾಯಿಬಾಬಾ ಮಂದಿರದಲ್ಲಿ ಮಾಡೂರು ಸಾಯಿಧಾಮ ದಶಮಾನೋತ್ಸವ ಅಂಗವಾಗಿ 108 ಕಾಯಿ ಗಣಯಾಗ, ಮಹಾಚಂಡಿಕಾಯಾಗ, ನವಗೃಹ ಮೃತ್ಯುಂಜಯ ಹೋಮ, ರಾಮನವಮಿ ಉತ್ಸವ ಹಾಗೂ ಶ್ರೀ ರಕ್ತೇಶ್ವರೀ ಹಾಗೂ ಗುಳಿಗ ದೈವದ ನೇಮ ಎ.2 ರಿಂದ ಎ.8 ರವರೆಗೆ ಜರಗಲಿದೆ.ಕಂಕನಾಡಿ ಗರೋಡಿ ಕ್ಷೇತ್ರದ ವೇದಮೂರ್ತಿ ಗಂಗಾಧರ ಶಾಂತಿಯವರ ಪೌರೋಹಿತ್ಯದಲ್ಲಿ ಏಳು ದಿನಗಳ ಕಾಲ ವೈದಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನೆರವೇರಲಿದೆ.ಎ.2 ರಂದು ಗಣಪಪತಿ ಹೋಮದಿಂದ ಆರಂಭಗೊಂಡು ಸೂರ್ಯೋಯದಿಂದ ಸೂರ್ಯಾಸ್ತದವರೆಗೆ ವಿವಿಧ ಭಜನಾ ತಂಡದಿಂದ ಭಜನಾ ಸಂಕೀರ್ತನೆ ಮಧ್ಯಾಹ್ನ ಮಹಾಪೂಜೆ, ಸಂಜೆ ಕುಣಿತ ಭಜನೆ, ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ರಾತ್ರಿ ಗಾನ ಸಿಂಚನ ಭಕ್ತಿ ಸಂಗೀತ ರಸಮಂಜರಿ ಅಕ್ಷಯ ಕಾವಳ್ಕಟ್ಟೆ ಸಾರಥ್ಯದ ಸ್ವರಾಮೃತ ಮ್ಯೂಸಿಕಲ್ ತಂಡದಿಂದ ನಡೆಯಲಿದೆ.ಎ. 3ರಂದು 108 ತೆಂಗಿನಕಾಯಿ ಗಣಯಾಗ , ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಕುಣಿತ ಭಜನೆ, ಶೇಜಾರತಿ, ಮಹಾಪೂಜೆ ನಡೆಯಲಿದೆ.ಎ.4 ರಂದು ಮಹಾಚಂಡಿಕಾಯಾಗಉಪ್ಪಳ ಕೊಂಡೆವೂರು…
ಕರ್ನಾಟಕ ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿಯವರ ಹಿರಿಯ ಸಹೋದರ, ಕೈರಂಗಳ ಗ್ರಾಮದ ಧರ್ಮಕ್ಕಿ ನಿವಾಸಿ ಸತೀಶ್ ಗಟ್ಟಿ (53) ಶುಕ್ರವಾರ ಮುಂಜಾನೆ ಹೃದಯಾಘಾತದಿಂದ ನಿಧನ ಹೊಂದಿದರು.ಕಾಂಗ್ರೆಸ್ ಮುಖಂಡ ದಿ. ಸಂಜೀವ ಗಟ್ಟಿ ಹಾಗೂ ಶಾರದಾ ಗಟ್ಟಿ ದಂಪತಿ ಪುತ್ರರಾಗಿದ್ದು ಬೆಂಗಳೂರಿನಲ್ಲಿ ಯುವ ಉದ್ಯಮಿ ಆಗಿದ್ದ ಸತೀಶ್ ಗಟ್ಟಿ ಕೆಲವು ವರ್ಷ ಬೆಂಗಳೂರಿನಲ್ಲಿದ್ದು ಉದ್ಯಮ ನಡೆದುತ್ತಿದ್ದರು. ಸಮಾಜ ಸೇವೆಯ ಮೂಲಕ ಜನಾನುರಾಗಿಯಾಗಿದ್ದು ಯಕ್ಷಗಾನ, ನಾಟಕ ಹಾಗೂ ಕ್ರೀಡಾಕೂಟಗಳನ್ನು ಅದ್ದೂರಿಯಾಗಿ ಸಂಘಟಿಸುವ ಮೂಲಕ ಕೈರಂಗಳದ ಹೆಸರಿಗೆ ಇನ್ನಷ್ಟು ಮೆರಗು ತಂದಿದ್ದರು. ಮೃತರಿಗೆ ಪತ್ನಿ, ಪುತ್ರ ಇದ್ದಾರೆ. ವಿಧಾನ ಸಭೆಯ ಸ್ಪೀಕರ್ ಯು. ಟಿ. ಖಾದರ್, ಪ್ರಶಾಂತ್ ಕಾಜವ, ರಮೇಶ್ ಶೆಟ್ಟಿ ಬೋಳಿಯಾರ್, ಚಂದ್ರಹಾಸ್ ಕರ್ಕೇರ, ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಸಾರ್ವಜನಿಕ ಅಗೆಲು ಸೇವೆ ಇಲ್ಲಿ ನೀಡಬಹುದುಉಳ್ಳಾಲ : ಕೋಟೆಕಾರು ನಡಾರು ಸಾಯಿನಗರದ ಶ್ರೀ ಸ್ವಾಮಿ ಕೊರಗಜ್ಜ ಸೇವಾ ಸಮಿತಿಯ ಶ್ರೀ ಕೊರಗಜ್ಜ ಮತ್ತು ಶ್ರೀ ಗುಳಿಗ ದೈವಗಳ 7ನೇ ವಾರ್ಷಿಕ ಕೋಲ ಎ.19 ಶನಿವಾರ ಮತ್ತು ಎ.20 ಭಾನುವಾರ ಅಗೆಲು ಸೇವೆ ನಡೆಯಲಿದೆ.ಸಾರ್ವಜನಿಕ ಅಗೆಲು ಸೇವೆಯನ್ನು ನೀಡಬಹುದಾಗಿದ್ದು, ಅಗೆಲು ಸೇವೆ ನೀಡ ಬಯಸುವವರು 7019201723, 7337749696, 9481136260
ಉಳ್ಳಾಲ: ಬಗಂಬಿಲದ ಹಿಂದೂನಗರದ ಹಿಂದೂ ಯುವ ಸೇನೆಯ ಶ್ರೀ ಮಹಾದೇವಿ ಶಾಖೆಯ 15 ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ ಮಾ.29 ರಂದು ಬಗಂಬಿಲ ಮೈದಾನದಲ್ಲಿ ಜರಗಲಿದೆ.ರಾತ್ರಿ 8.30ಕ್ಕೆ ಶ್ರೀ ಕ್ಷೇತ್ರ ಒಡಿಯೂರು, ಶ್ರೀ ಗುರುದೇವ ದತ್ತ ಸಂಸ್ಥಾಪನಂ ಇಲ್ಲಿನ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.ಸಂಜೆ 7.30ಕ್ಕೆ ಮಹಾಪೂಜೆ ಮತ್ತು ಅನ್ನಸಂತರ್ಪಣೆ ಹಾಗೂ ಸ್ತಳೀಯ ಪ್ರತಿಭೆಗಳಿಂದ ನೃತ್ಯ ಕಾರ್ಯಕ್ರಮ ಹಾಗೂ ಊರ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ರಾತ್ರಿ 10.00 ಕ್ಕೆ ಬೆನಕ ಆರ್ಟ್ಸ್ ಕುಡ್ಲ ಕಲಾವಿದರಿಂದ ಪೊರಿಪುದಪ್ಪೆ ಜಲದುರ್ಗೆ ಸಿನಿ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಳ್ಳಾಲ: ಏ.5 ರಂದು ನೆಲ್ಯಾಡಿಯಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ವಾಲಿಬಾಲ್ ಚಾಂಪಿಯನ್ ಶಿಪ್ ಗೆ ಉಳ್ಳಾಲ ತಾಲೂಕು ತಂಡದ ಆಯ್ಕೆ ಪ್ರಕ್ರಿಯೆಯನ್ನು ಮಾ. 29 ರ ಶನಿವಾರ ಸಂಜೆ 6 ಗಂಟೆಗೆ ಕೋಟೆಕಾರ್ ಬಿ ಎಫ್ ಸಿ ಬೀರಿ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.ಆಯ್ಕೆ ಪ್ರಕ್ರಿಯೆಯಲ್ಲಿ ಉಳ್ಳಾಲ ತಾಲೂಕಿನ ವಾಲಿಬಾಲ್ ಆಟಗಾರರಾದ ಪುರುಷರು, ಮಹಿಳೆಯರು, ಕಾಲೇಜು ಬಾಲಕರು, ಬಾಲಕಿಯರು ಭಾಗವಹಿಸಬಹುದಾಗಿದೆ. ಆಸಕ್ತರು ಬರುವಾಗ ಆಧಾರ್ ಕಾರ್ಡ್ ಪ್ರತಿಯನ್ನು ತರತಕ್ಕದ್ದು ಎಂದು ಉಳ್ಳಾಲ ತಾಲೂಕು ವಾಲಿಬಾಲ್ ಅಶೋಸಿಯೇಷನ್ ಅಧ್ಯಕ್ಷರಾದ ತ್ಯಾಗಮ್ ಹರೇಕಳ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.ಆಯ್ಕೆ ಸುತ್ತಿಗೆ ಹೆಸರನ್ನು ನೋಂದಾಯಿಸಿಕೊಳ್ಳಲು ವಾಟ್ಸ್ ಅಪ್ ಸಂಖ್ಯೆ 9448529524
ಉಳ್ಳಾಲ : ಕರ್ನಾಟಕ ಕಾಂಗ್ರೆಸ್ ನ ಅಧ್ಯಕ್ಷರು, ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಸಂವಿಧಾನ ಬದಲಾವಣೆಯ ಹೇಳಿಕೆ ನೀಡಿರುವುದರ ವಿರುದ್ದ ಭಾರತೀಯ ಜನತಾ ಪಾರ್ಟಿ ಮಂಗಳೂರು ಮಂಡಲದ ವತಿಯಿಂದ ತೊಕ್ಕೊಟ್ಟು ಜಂಕ್ಷನ್ ಬಳಿ ಪ್ರತಿಭಟನೆ ನಡೆಸಿ ವಿರೋಧ ವ್ಯಕ್ತ ಪಡಿಸಲಾಯಿತು.ಪ್ರತಿಭಟನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಮಂಡಲ ಅಧ್ಯಕ್ಷರಾದ ಜಗದೀಶ್ ಆಳ್ವ ಕುವತ್ತೆಬೈಲ್ ರವರು ಮಾತನಾಡಿ, ಕಾಂಗ್ರೆಸ್ ನ ರಾಷ್ಟ್ರ ನಾಯಕರಾದ ರಾಹುಲ್ ಗಾಂಧಿ ಕೈಯಲ್ಲಿ ಸಂವಿಧಾನದ ಸಣ್ಣ ಪುಸ್ತಕವನ್ನಿಟ್ಟು ಲೋಕಸಭೆಯ ಒಳಗೆ ಸಂವಿಧಾನದ ರಕ್ಷಕ ಎಂದು ನಾಟಕವಾಡುತ್ತಿದ್ದರೆ, ಕಾಂಗ್ರೆಸ್ ನ ರಾಜ್ಯ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರು ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ಭಾರತೀಯ ಜನತಾ ಪಾರ್ಟಿಯು ಇದನ್ನು ಬಲವಾಗಿ ಖಂಡಿಸುತ್ತದೆ. ಮತ್ತು ಕಾಂಗ್ರೆಸ್ ನ ಅಸಲಿ ಬಂಡವಾಳವನ್ನು ಜನರು ಅರಿಯಬೇಕಿದೆ ಎಂದರು.ಬಿ.ಜೆ.ಪಿ. ಜಿಲ್ಲಾ ಕಾರ್ಯದರ್ಶಿ, ದಲಿತ ನಾಯಕರಾದ ದಿನೇಶ್ ಅಮ್ಟೂರು ಮಾತನಾಡಿ, ಕಾಂಗ್ರೆಸ್ ನ ದಲಿತ ವಿರೋಧಿ ನೀತಿಗಳ ವಿರುದ್ದ ಸಮಾಜ ಧ್ವನಿ ಎತ್ತಬೇಕಿದೆ. ಇಲ್ಲವಾದರೆ ಡಾ.ಬಿ.ಆರ್.ಅಂಬೇಡ್ಕರ್ ರವರ ಆಶಯಗಳನ್ನು…
ತೊಕ್ಕೊಟ್ಟು: ಕಾರಣಿಕ ಕ್ಷೇತ್ರ ಗುಳಿಗ ಕೊರಗಜ್ಜ ಉದ್ಭವ ಶಿಲೆಯ ಪ್ರಧಾನ ಆದಿ ಸ್ಥಳ ಬುರ್ದುಗೋಳಿ ಕಲ್ಲಾಪು ಇಲ್ಲಿಗೆ ಯೂನಿಯನ್ ಬ್ಯಾಂಕ್ ವತಿಯಿಂದ 50 ಕುರ್ಚಿ ಹಾಗೂ ಕಾಣಿಕೆ ಡಬ್ಬಿಯನ್ನು ಹಸ್ತಾಂತರಿಸಿದರು.ಈ ಸಂದರ್ಭ ಮಂಗಳೂರು ವಿಭಾಗದ ಡೆಪ್ಯುಟಿ ಜನರಲ್ ಮೆನೇಜರ್ ರಾಜಮಣಿ, ಬ್ರಾಂಚ್ ಮೆನೇಜರ್ ರಾಜೇಶ್ ಕುಮಾರ್ ರೈ, ಸಿಬ್ಬಂದಿ ಸುಧಾಕರ್, ಗುಳಿಗ ಕೊರಗಜ್ಜ ಸೇವಾ ಸಮಿತಿಯ ಅಧ್ಯಕ್ಷರಾದ ವಿಶ್ವನಾಥ್ ನಾಯ್ಕ್, ಉಪಾಧ್ಯಕ್ಷರಾದ ದೇವದಾಸ್ ಕಾಯಂಗಳ , ಕಾರ್ಯದರ್ಶಿ ಯಾದ ಕಮಲಾಕ್ಷ ವಿ. ಕೆ ಸೇವಾ ಸಮಿತಿಯ ಪ್ರಮುಖ ರಾದ ಪ್ರಶಾಂತ್ ಕಾಯಂಗಳ, ಸಂತೋಷ್ ಶೆಟ್ಟಿ, ಪುರುಷೋತ್ತಮ್ ಕಲ್ಲಾಪು, ಹರೀಶ್ ಕೊಟ್ಟಾರಿ. ಪ್ರಮೋದಿನಿ, ಶರ್ಮಿಳಾ ಶೆಟ್ಟಿ, ಸಂದ್ಯಾ ತೋಡ್ಡಲ, ಕುಸುಮ, ಇಂದಿರಾ ಕಾಯಂಗಳ ಮುಂತಾದವರು ಉಪಸ್ಥಿತರಿದ್ದರು.
ಡಿವೈಎಫ್ಐ ಮೊಂಟೆಪದವು ಘಟಕ ವತಿಯಿಂದ ಮಾದಕ ವ್ಯಸನಗಳ ವಿರುದ್ದ ಜನಜಾಗೃತಿ ಅಭಿಯಾನ ಮತ್ತು ಸೌಹಾರ್ದ ಇಫ್ತಾರ ಕೂಟವು ಮೊಂಟೆಪದವು ಜಂಕ್ಷನ್ ನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವರಾದ ರಮಾನಾಥ ರೈ ಯವರು ಭಾರತವು ಒಂದು ಪ್ರಜಾಪ್ರಭುತ್ವ ರಾಷ್ಟ್ರ. ಈ ದೇಶದಲ್ಲಿ ಎಲ್ಲಾ ಧರ್ಮಗಳ ಜನರು ಅನ್ನೋನ್ಯತೆಯಿಂದ ಬಾಳಿ ಬದುಕಬೇಕು. ಇಂತಹ ಕಾರ್ಯಕ್ರಮಗಳಿಂದ ಸೌಹಾರ್ದತೆ ಸೃಷ್ಠಿಯಾಗುತ್ತದೆ. ಆದರೆ ದುರಾದೃಷ್ಟವಾತ್ ಇಂದಿನ ಭಾರತದಲ್ಲಿ ಸುಮಾರು 300 ವರ್ಷಗಳಿಗಿಂತಲೂ ಹಳೆಯ ಗೋರಿಗಳ ಬಗ್ಗೆ ಮಾತನಾಡಲಾಗುತ್ತಿದೆ, ಇದೊಂದು ದೊಡ್ಡ ದುರಂತ ಎಂದರು. ಡಿವೈಎಫ್ಐ ಮಾಜಿ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ನಿವೃತ್ತ ಪ್ರಾಧ್ಯಪಕರಾದ ಡಾ.ಶಿವರಾಮ ಶೆಟ್ಟಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶರೀಫ್ ಮೊಂಟೆಪದವು ವಹಿಸಿದ್ದರು. ಕಾರ್ಯಕ್ರಮದಲ್ಲಿ ಡಿವೈಎಫ್ಐ ಉಳ್ಳಾಲ ತಾಲೂಕು ಅಧ್ಯಕ್ಷರಾದ ನ್ಯಾಯವಾದಿ ನಿತಿನ್ ಕುತ್ತಾರ್, ಕಾರ್ಯದರ್ಶಿ ರಿಝ್ವಾನ್ ಹರೇಕಳ, ಯೆನೆಪೋಯ ವಿದ್ಯಾಸಂಸ್ಥೆಯ ಉಪಪ್ರಾಂಶುಪಾಲರಾದ ಡಾ.ಜೀವನ್ ರಾಜ್ ಕುತ್ತಾರ್, ಕಾರ್ಮಿಕ ಮುಖಂಡರಾದ ಸುಕುಮಾರ್ ತೊಕ್ಕೊಟ್ಟು, ರಫೀಕ್ ಹರೇಕಳ, ಬಿಜೆಎಂ ಅಧ್ಯಕ್ಷರಾದ…
ಉಳ್ಳಾಲ : ತೊಕ್ಕೊಟ್ಟು ಚೆಂಬುಗುಡ್ಡೆಯಲ್ಲಿರುವ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಮಂಗಳೂರು ಪ್ರತಿವರ್ಷ ಆಯೋಜಿಸುವ ಉತ್ಥಾನ ಬೇಸಿಗೆ ಶಿಬಿರವು ಇದೇ ಮಾರ್ಚ್ 31 ರಿಂದ ಏಪ್ರಿಲ್ 12ರ ವರೆಗೆ ಬೆಳಿಗ್ಗೆ ಗಂಟೆ 9 ರಿಂದ ಸಂಜೆ 3.30ರ ವರೆಗೆ ನಡೆಯಲಿದೆ. ಮಾರ್ಚ್ 31 ರ ಬೆಳಿಗ್ಗೆ ಅತಿಥಿ ಗಣ್ಯರ ಉಪಸ್ಥಿತಿಯಲ್ಲಿ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ವಿವೇಕ ಮಂದಿರದಲ್ಲಿ ಉದ್ಘಾಟನೆ ನೆರವೇರಲಿದೆ. ಎಪ್ರಿಲ್ 12 ರಂದು ಶಿಬಿರದಲ್ಲಿ ಮಕ್ಕಳು ಅಭ್ಯಾಸಿಸಿದ ಪ್ರತಿಭೆಗಳನ್ನು ಪ್ರದರ್ಶಿಸುವ ಜೊತೆಗೆ ಸಮಾರೋಪ ಸಮಾರಂಭ ನಡೆಯಲಿದೆ. 4 ವರ್ಷದಿಂದ 15 ವರ್ಷ ವಯಸ್ಸಿನ ಮಕ್ಕಳು ಪಾಲ್ಗೊಳ್ಳಬಹುದಾದ ಈ ಶಿಬಿರದಲ್ಲಿ ಭಾರತೀಯ ಚಿತ್ರಕಲೆ, ಕರಕುಶಲ ತರಬೇತಿ, ಕಸೂತಿ ಕೆಲಸ, ಚಿಂತನಾ ಬೌದ್ಧಿಕ್, ಧ್ಯಾನ, ಶ್ಲೋಕ, ಯೋಗ, ನೃತ್ಯ, ತಬಲ, ಯಕ್ಷಗಾನ, ಸಂಗೀತ, ಕಥಾ ನಿರೂಪಣೆ, ಸ್ವರಕ್ಷಣಾ ತಂತ್ರಗಳು, ಕುಣಿತ ಭಜನೆ, ಬೆಂಕಿ ರಹಿತ ಅಡುಗೆ, ದೇಸೀ ಆಟೋಟಗಳು, ಹಾಸ್ಯ ರಂಜನೆಗಳು ಸೇರಿದಂತೆ ವಿಭಿನ್ನ ಜೋಡಣೆಯಿದೆ.ರೂ 1500 ಮೊತ್ತದ ಮೂಲಕ ನೋಂದಾವಣೆ ಮಾಡಿಕೊಂಡರೆ ಮಧ್ಯಾಹ್ನದ…