ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆ ಹನುಮಾನ್ ನಗರ ಕುಂಪಲ ಇದರ ವಾರ್ಷಿಕ ಮಹಾಸಭೆ ತಾರೀಕು 16/3/2025 ರಂದು ವ್ಯಾಯಾಮ ಶಾಲೆಯಲ್ಲಿ ನಡೆಯಿತು ಸಭೆಯಲ್ಲಿ ವ್ಯಾಯಾಮ ಶಾಲೆಯ ಗೌರವಾಧ್ಯಕ್ಷರಾದ ಉಮೇಶ್ ಕುಜುಮಗದ್ದೆ ಸಭೆಯನ್ನು ನಡೆಸಿಕೊಟ್ಟರು ಮೊದಲಿಗೆ ಅಧ್ಯಕ್ಷರಾದ ರಘುವೀರ್ ರವರು ಎಲ್ಲರನ್ನು ಸ್ವಾಗತಿಸಿ ವಾರ್ಷಿಕ ವರದಿಯನ್ನು ಮಂಡಿಸಿದರು ಕೋಶಾಧಿಕಾರಿಯದ ಮನೋಜ್ ರವರು ವಾರ್ಷಿಕ ಲೆಕ್ಕಪತ್ರ ಮಂಡಿಸಿ ಅನುಮೋದನೆ ಪಡೆದರು ನಂತರ 2025-2026 ನೇ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು ನೂತನ ಅಧ್ಯಕ್ಷರಾಗಿ ಉಮೇಶ್ ಗಟ್ಟಿ ಹನುಮಾನ ನಗರ ಉಪಾಧ್ಯಕ್ಷರು ರಂಜಿತ್ ಕುಲಾಲ್ ಕುಜುಮಗದ್ದೆ, ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್ ಕುಂಪಲ, ಜೊತೆ ಕಾರ್ಯದರ್ಶಿಯಾಗಿ ಅಶ್ವಿತ್ ಕುಜುಮಗದ್ದೆ, ಕೋಶಾಧಿಕಾರಿಗಳಾಗಿ ಸುಪ್ರೀತ್ ಕುಜುಮಗದ್ದೆ ಸಹಾಯಕರಾಗಿ ಸುರೇಶ್ ಶೆಟ್ಟಿ ಚಿತ್ರಾಂಜಲಿನಗರ ಕ್ರೀಡಾ ಕಾರ್ಯದರ್ಶಿಗಳಾಗಿ ಯತಿನ್, ಭವಿತ್ ಹಾಗೂ ಅನಿಲ್, ಪೂಜಾ ಸಂಚಾಲಕರಾಗಿ ರವಿಚಂದ್ರಗಟ್ಟಿ ಶ್ರೀ ರಾಜ್ ಲಕ್ಷ್ಮಣ ಕುಜುಮಗದ್ದೆ, ಶ್ಯಾಮ್ ಪ್ರಸಾದ್ ಭಜನಾ ಸಂಚಾಲಕರಾಗಿ ಸುಭಾಷ್, ಸುರೇಂದ್ರ, ಪ್ರಥಮ್ ಹಾಗೂ ಕಾರ್ಯಕಾರಿ ಸಮಿತಿಗೆ ಹಿರಿಯ ಸದಸ್ಯರುಗಳನ್ನು ಆಯ್ಕೆ…
Author: UllalaVani
ಉಳ್ಳಾಲ : ಇತಿಹಾಸ ಪ್ರಸಿದ್ದ ಉಳ್ಳಾಲ ಉರೂಸ್ ಪ್ರಯುಕ್ತ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರನ್ನು ಉಳ್ಳಾಲ ಉರೂಸ್ ಸಮಿತಿ ನಿಯೋಗವು ಭೇಟಿ ಮಾಡಿ ಉರೂಸ್ ಪ್ರಯುಕ್ತ ಮೇ 16ರಂದು ನಡೆಯುವ ಸಾಮಾಜಿಕ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಹ್ವಾನಿಸಲಾಯಿತು. ದರ್ಗಾ ಅಧ್ಯಕ್ಷ ಬಿ.ಜಿ ಹನೀಫ್ ಹಾಜಿ, ಕೋಶಾಧಿಕಾರಿ ನಾಝಿಮ್ ರಹ್ಮಾನ್, ಯು.ಟಿ ಝುಲ್ಫಿಕರ್, ಸದಸ್ಯರಾದ ಅಬ್ದುಲ್ ಖಾದರ್ ಅವೂದಿ, ಉರೂಸ್ ಪ್ರಚಾರ ಸಮಿತಿ ಸದಸ್ಯರಾದ ಸೈಯದ್ ಕುಬೈಬ್ ತಂಙಳ್, ರಮೀಝ್ ಉಪಸ್ಥಿತರಿದ್ದರುಖುತುಬುಝ್ಝಮಾನ್ ಅಸ್ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ತಂಙಳ್ ರವರ 22ನೇ ಪಂಚವಾರ್ಷಿಕ 432ನೇ ವಾರ್ಷಿಕ ಉರೂಸ್ ಸಮಾರಂಭವು ಎಪ್ರಿಲ್ 24ರಿಂದ ಪ್ರಾರಂಭಗೊಂಡು ಮೇ 18 ರ ತನಕ ನಡೆಯಲಿದೆ, .
ಏಪ್ರಿಲ್ 2ನೇ ತಾರೀಕಿಗೆ ನಡೆಯಲಿರುವ ಸಾಮಾನ್ಯ ವಿಜ್ಞಾನ ಪರೀಕ್ಷೆಯ ಪುನರಾವರ್ತನೆಯನ್ನು ಇಂದು ಮುಸ್ಲಿಮರ ಪವಿತ್ರ ಹಬ್ಬವಾದ ಈದ್ ಆದರೂ ಎಲ್ಲಾ ವಿದ್ಯಾರ್ಥಿಗಳು ಶಾಲೆಗೆ ಬರುವುದರ ಮೂಲಕ ಸಾಮಾನ್ಯ ವಿಜ್ಞಾನ ಪಾಠವನ್ನು ಪುನಾರವರ್ತನೆ ಮಾಡುವುದರೊಂದಿಗೆ ಈದ್ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಿದರು. ಮಂಗಳೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದಂತ ಸನ್ಮಾನ್ಯ ಶ್ರೀ ಈಶ್ವರ್ ರವರು ಶಾಲೆಗೆ ಭೇಟಿ ನೀಡಿ ಶಾಲೆಯಲ್ಲಿ SSLC ಯಲ್ಲಿ ಕಲಿಯುತ್ತಿರುವಂತ ಎಲ್ಲಾ ವಿದ್ಯಾರ್ಥಿಗಳು ಮುಸ್ಲಿಂ ಮಕ್ಕಳಿದ್ದರು ಬೆಳಗಿನ ಪ್ರಾರ್ಥನೆಯಾದ ನಂತರ ಶಾಲೆಗೆ ಬಂದು ಸಾಮಾನ್ಯ ವಿಜ್ಞಾನ ಪಾಠದ ಪುನರಾವರ್ತನೆ ಮಾಡುವುದರೊಂದಿಗೆ ಹಬ್ಬವನ್ನು ಆಚರಿಸಿರುವುದು ಶ್ಲಾಘನೀಯ. ಹಬ್ಬದ ಆಸು ಪಾಸಿನಲ್ಲಿ ಸಾಧನೆಯ ಹಬ್ಬದ ಶುಭಾಶಯಗಳು ವಿದ್ಯಾರ್ಥಿಗಳು ಶಾಲೆಗೆ ಗೈರು ಹಾಜರಾಗುವುದೇ ವಾಡಿಕೆ ಆದರೆ ಹಬ್ಬದ ದಿನದಂದು ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಿ ಪುನರಾವರ್ತನೆಯಲ್ಲಿ ಭಾಗವಹಿಸಿರುವುದು ಅಭಿನಂದನಾರ್ಹ ವಾಗಿದೆ ಎಂದರು. ಶಾಲಾ ಸಂಚಾಲಕರಾದ ಇಸ್ಮಾಯಿಲ್ ಹಾಜಬ್ಬ ರವರು ವಿದ್ಯಾರ್ಥಿಗಳಿಗೆ ಹಬ್ಬದೂಟದ ವ್ಯವಸ್ಥೆ ಮಾಡಿದ್ದರು. ಶಾಲಾ ಶಿಕ್ಷಕರಾದ ಶ್ರೀಮತಿ ಸಪ್ನಾ, ಶ್ರೀಮತಿ ಬಬಿತಾ ಸಲಿನ್…
ಯೂನಿಯನ್ ಬ್ಯಾಂಕ್ ಆಪ್ ಇಂಡಿಯಾ ತೊಕ್ಕೋಟ್ಟು ಶಾಖಾ ಕಚೇರಿಯಲ್ಲಿ ಕಳೆದ 14ವರ್ಷ ಎರಡು ತಿಂಗಳ ಸೇವೆ ಸಲ್ಲಿಸಿದ ಸುಧಾಕರ್.ಪಿ. ವಾಮಂಜೂರು ಇದೀಗ ಮುಂಭಡ್ತಿಯಾಗಿ ಎಡಪದವು ಹತ್ತಿರದ ಮುತ್ತೂರು ಶಾಖಾ ಕಚೇರಿಗೆ ಪದೊನ್ನತಿ ವರ್ಗಾವಣೆಯಾಗಿದ್ದಾರೆ,ಅವರಿಗೆ ವರ್ಗಾವಣೆ ಬೀಳ್ಕೊಡುಗೆ ಗೌರವವನ್ನು ಶಾಖಾ ಕಚೇರಿಯವರು ಮತ್ತು ತೊಕ್ಕೋಟ್ಟು ಭಟ್ನಗರದ ನಾಗರಿಕರು ಶನಿವಾರ ನಡೆಸಿದರು. ಯೂನಿಯನ್ ಬ್ಯಾಂಕ್ ಆಪ್ ಇಂಡಿಯಾ ತೊಕ್ಕೋಟ್ಟು ಶಾಖಾ ಕಚೇರಿಯ ಹಿರಿಯ ಪ್ರಬಂಧಕರಾದ ರಾಜೇಶ್ ಕುಮಾರ್ ರೈ ವರ್ಗಾವಣೆ ಪತ್ರ ವಿತರಿಸಿ ಸುಧಾಕರ್ ಕಳೆದ 14 ವರ್ಷದಿಂದ ಈ ಶಾಖಾ ಕಚೇರಿಗೆ ಉತ್ತಮ ಸೇವೆ ಸಲ್ಲಿಸಿದ್ದಾರೆ, ಮುಂದೆಯೂ ಹೀಗೆ ಸೇವೆ ಸಲ್ಲಿಸಿ ಯೂನಿಯನ್ ಬ್ಯಾಂಕಿಗೆ ಉತ್ತಮ ಹೆಸರು ತರಲಿ ಎಂದು ಶುಭ ಹಾರೈಸಿದರು.ತೊಕ್ಕೊಟ್ಟು ಭಟ್ನಗರದ ನಾಗರಿಕರು ಸಾಮಾಜಿಕ ಸೇವಾ ಕರ್ತ ಸಿರಿಲ್ ರಾಬರ್ಟ್ ಡಿ ಸೋಜ, ಮೋಹನ್ ಬಂಗೇರ ಭಟ್ನಗರ ವೇಣು ಗೋಪಾಲ್, ಬ್ಯಾಂಕ್ ಕಟ್ಟಡದ ಮಾಲಕಿ ಶ್ರೀಮತಿ ಮೇರಿ, ಪೊಸಕುರಲ್ ಬಳಗದ ನಿರ್ದೇಶಕ ವಿಧ್ಯಾಧರ್ ಶೆಟ್ಟಿ ಮೊದಲಾದವರು ಸುಧಾಕರ್. ಪಿ ಅವರನ್ನು…
ಕಿನ್ಯ ಗ್ರಾಮದ ಸಾಂತ್ಯಗುತ್ತುವಿನಲ್ಲಿ ನಾಲ್ಕು ದಶಕಗಳ ಬಳಿಕ ಕಿನ್ಯ ಬೆಳರೆಂಗಿ ಶ್ರೀ ಮಲರಾಯ, ಧೂಮಾವತಿ-ಬಂಟ ದೈವಗಳಿಗೆ ಎ.6ರಂದು ನಡೆಯಲಿರುವ ‘ಧರ್ಮನೇಮ’ದ ಪೂರ್ವಭಾವಿಯಾಗಿ ತಲಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಿಂದ ಸಾಂತ್ಯಗುತ್ತುವಿಗೆ ಕೊಪ್ಪರಿಗೆ ಸಹಿತ ಹಸಿರು ಹೊರೆಕಾಣಿಕೆ ಮೆರವಣಿಗೆ ಶುಕ್ರವಾರ ನಡೆಯಿತು.ಶ್ರೀ ಕ್ಷೇತ್ರ ತಲಪಾಡಿಯ ಪ್ರದಾನ ಅರ್ಚಕ ಗಣೇಶ್ ಭಟ್ ಪಂಜಾಳ ಹೊರೆ ಕಾಣಿಕೆಗೆ ಚಾಲನೆ ನೀಡಿದರು. ಆಡಳಿತ ಮೊಕ್ತೇಸರ ಬಾಲಕೃಷ್ಣ ಸಾಮಾನಿ, ಕಾರ್ಯಾಧ್ಯಕ್ಷ ಶಿವರಾಮ ಶೆಟ್ಟಿ, , ಸಮಿತಿಯ ಸದಾನಂದ ಶೆಟ್ಟಿ ಸುರೇಶ್ ಆಳ್ವ, ರಮಾನಾಥ ಕಾವ, ಸಚಿನ್ ಶೆಟ್ಟಿ ಉದಯಕುಮಾರ್ ಶೆಟ್ಟಿ, ಪ್ರವೀಣ್ ಪಲಾಯಿ, ವಿಶ್ವನಾಥ್ ಪಲಾಯಿ, ಡಾ. ಕಿಶೋರ್ ಶೆಟ್ಟಿ ಸುಬ್ಬಯ್ಯ ಶೆಟ್ಟಿ, ಹೊರೆಕಾಣಿಕೆ ಸಮಿತಿಯ ನಿತ್ಯಾನಂದ ಭಂಡಾರಿ, ನವೀನ್ ಆಳ್ವ ಪುನೀತ್ ಯುವರಾಜ್ ಶ್ರವಣ್ ದೇವಿನಗರ, ಶ್ಯಾಮ್ ರಾಜ್ ನೆತ್ತಿಲ, ಆಶ್ವಿತ್ ಪಕ್ಕಳ, ಮೋಹನ್ ದಾಸ್ ಶೆಟ್ಟಿ ನೆತ್ತಿಲ ಬಾಳಿಕೆ, ನಾರಾಯಣ ಕಜೆ, ಮೋಹನ್ ದಾಸ್ ಭಂಡಾರಿ, ರಘುನಾಥ್ ಶೆಟ್ಟಿ, ಕೇಶವ ಕಜೆ, ಶ್ರೀನಿವಾಸ ಗಟ್ಟಿ ಸೋವೂರು, ರಾಮ…
ಉಳ್ಳಾಲ : ವೈದ್ಯರೊಬ್ಬರು ಖರೀದಿಸಿದ ಲ್ಯಾಪ್‌ಟಾಪ್‌ನಲ್ಲಿ ದೋಷ ಕಂಡುಬಂದರೂ ಸೂಕ್ತವಾಗಿ ಸ್ಪಂದಿಸದ ಲ್ಯಾಪ್‌ಟಾಪ್ ತಯಾರಿ ಕಂಪನಿಗೆ ಉತ್ಪನ್ನದ ಖರೀದಿ ಮೌಲ್ಯವನ್ನು ಶೇ.6ರ ಬಡ್ಡಿದರ ಸಹಿತ 45 ದಿನಗಳೊಳಗೆ ಹಿಂತಿರುಗಿಸುವಂತೆ ಜಿಲ್ಲಾ ಗ್ರಾಹಕ ನ್ಯಾಯಾಲಯ ಆದೇಶ ನೀಡಿದೆ. ತಪ್ಪಿದಲ್ಲಿ ಕಂಪನಿ ಮೇಲೆ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ನ್ಯಾಯಾಲಯ ಸೂಚಿಸಿದೆ.ಉಳ್ಳಾಲ ತಾಲೂಕು ಮುಡಿಪಿನ ವೈದ್ಯ ಡಾ.ಅರುಣ್ ಪ್ರಸಾದ್ ಏಸುಸ್ ಕಂಪನಿಯ 1,09,990 ರು. ಮೌಲ್ಯದ ಲ್ಯಾಪ್‌ಟಾಪ್ ಖರೀದಿಸಿದ್ದರು. ಇದಕ್ಕೆ ಒಂದು ವರ್ಷದ ವಾರಂಟಿ ಜೊತೆಗೆ ರೂ. 3498 ಮೌಲ್ಯದ ಎಕ್ಸ್‌ಟೆಂಡೆಡ್ ವಾರಂಟಿ ಪಡೆದಿದ್ದರು. ಖರೀದಿಸಿದ 6 ತಿಂಗಳಿನೊಳಗೆ ಲ್ಯಾಪ್‌ಟಾಪ್‌ನಲ್ಲಿ ನಿರಂತರ ತಾಂತ್ರಿಕ ದೋಷ, ಎಲ್‌ಸಿಡಿ ಮಾನಿಟರ್ ಗಾಜು ಒಡೆಯುವುದು ಮತ್ತಿತರ ಸಮಸ್ಯೆಗಳು ಕಂಡುಬಂದವು. ಸಂಬಂಧಿಸಿದ ಸಂಸ್ಥೆಯವರಿಗೆ ದೂರವಾಣಿ, ಇಮೇಲ್, ಟ್ವೀಟ್ ಮತ್ತಿತರ ಮಾಧ್ಯಮಗಳ ಮೂಲಕ ಸಾಕಷ್ಟು ಬಾರಿ ದೂರು ಸಲ್ಲಿಸಿದರು. ಆದರೂ, ಲ್ಯಾಪ್‌ಟಾಪ್ ರಿಪೇರಿ, ಖರೀದಿಸಿದ ಮೌಲ್ಯ ಹಿಂತಿರುಗಿಸಲು ಕಂಪನಿ ಮುಂದಾಗಲಿಲ್ಲ.ದೂರುದಾರರ ಟ್ವಿಟ್ಟರ್ ಅಕೌಂಟ್‌ನ್ನು ಕಂಪನಿ ಬ್ಲಾಕ್ ಮಾಡಿತು. ಇದರಿಂದ ರೋಸಿದ…
ಮಧೂರು ಬ್ರಹ್ಮ ಕಲಶೋತ್ಸವದ ಭಾಗವಾಗಿ ಆರ್ಯ ಮರಾಠ ಸಮಾಜದ ದೇವರ ಮನೆಗಳ ಒಕ್ಕೂಟ ಹಾಗೂ ಆರ್ಯ ಯಾನೆ ಮರಾಠ ಸಮಾಜ ಸಂಘ(ರಿ )ಮಂಗಳೂರು -ಕಾಸರಗೋಡು ಮತ್ತು ಆರ್ಯ ಸಮುದಾಯ ಸಂಘ (ರಿ )ಕಾಸರಗೋಡು ವತಿಯಿಂದ ಹೊರೆ ಕಾಣಿಕೆ ಮೆರವಣಿಗೆ ಸಮರ್ಪಸಲಾಯಿತು. ವಿಶಿಷ್ಟ, ವಿಭಿನ್ನ ರೀತಿಯಲ್ಲಿ ಶಿಸ್ತು, ಸಂಯಮ, ಸಂಪ್ರದಾಯ, ಸಂಭ್ರಮ, ಸಡಗರದಿಂದ ಜರಗಿದ ಮೆರವಣಿಗೆಯು ನೆರೆದಿದ್ದ ಅಪಾರ ಜನಸ್ತೋಮದ ಮೆಚ್ಚುಗೆಗೆ ಪಾತ್ರವಾಯಿತು. ಸಾಂಪ್ರದಾಯಿಕ ಉಡುಗೆ ಧರಿಸಿದ ಮಹಿಳೆಯರ ತಂಡದಿಂದ ಲೆಂಜಿಮ್ ತಾಳ ದೊಂದಿಗೆ ಕೇರಳ ಶೈಲಿಯ ಚೆಂಡೆಗೆ ಮಹಾರಾಷ್ಟ್ರ ಶೈಲಿಯ ನೃತ್ಯ, ಕುಂಟಾರು ಮತ್ತು ಮಲ್ಲ ತಂಡಗಳು ನಡೆಸಿಕೊಟ್ಟ ಕುಣಿತ ಭಜನೆಯು ಎಲ್ಲರ ಗಮನ ಸೆಳೆಯಿತು. ಸಮಾಜ ಬಾಂಧವರು ಕೇಸರಿ ಪೇಟಧಾರಿಗಳಾಗಿ ಶಿಸ್ತಿನ ನಡಿಗೆಯಲ್ಲಿ ಭಾಗವಹಿಸಿರುವುದು ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿ ರೂಪವೇ ಎಂಬಂತೆ ವೇಷಧಾರಿ ಆಶ್ವಾರೋಹಿಯಾಗಿ ಮೆರವಣಿಗೆಯ ಮುಂಚೂಣಿಯಲ್ಲಿ ಬಂದಿರುವುದು ವಿಶೇಷ ಆಕರ್ಷಣೆ ಯಾಗಿತ್ತು. ಮೆರವಣಿಗೆಯಲ್ಲಿ ಸಮಾಜದ 39 ದೇವರ ಮನೆಗಳ ಪ್ರಮುಖರು ಹಾಗೂ ಸದಸ್ಯರುಗಳು ಒಟ್ಟಾಗಿ ಭಾಗವಹಿಸಿ…
ಕೊಣಾಜೆ: ನಂಬಿಕೆ ಎಂಬುವುದೇ ನಮಗೆಲ್ಲರಿಗೂ ಶಕ್ತಿ. ನಂಬಿಕೆ ಇದ್ದರೆ ಯಾವುದೇ ಪುಣ್ಯ ಕಾರ್ಯ ಯಶಸ್ವಿಯಾಗಿ ನೆರವೇರಬಲ್ಲುದು. ನಮ್ಮನಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಪಾಲಿಸಿಕೊಂಡು ಬಂದರೆ ಜೀವನದ ಸಾರ್ಥಕತೆಯನ್ನು ಪಡೆಯಲು ಸಾಧ್ಯ. ಊರವರು, ಐದು ಗ್ರಾಮದವರು ಸೇರಿಕೊಂಡು ಶ್ರೀ ಉಳ್ಳಾಲ್ತಿ ಕ್ಷೇತ್ರದ ಅಭಿವೃದ್ಧಿಗಾಗಿ ನಿಸ್ವಾರ್ಥದಿಂದ ದುಡಿದಿದ್ದಾರೆ. ಎಲ್ಲರಿಗೂ ಉಳ್ಳಾಲ್ತಿಯ ಅನುಗ್ರಹ ಖಂಡಿತಾ ಇರುತ್ತದೆ ಎಂದು ಶ್ರೀ ಕ್ಷೇತ್ರ ಕಣಿಯೂರಿನ ಶ್ರೀ ಮಹಾಬಲ ಸ್ವಾಮೀಜಿ ಅವರು ಹೇಳಿದರು. ಅವರು ಕೂಟತ್ತಜೆ ಶ್ರೀ ಉಳ್ಳಾಲ್ತಿ ಅಮ್ಮ, ಬಂಟಜಾವದೆ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಅಂಗವಾಗಿ ಸೋಮವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.ಸನಾತನ ಧರ್ಮ ಅತ್ಯಂತ ಶ್ರೇಷ್ಠವಾಗಿರುವ ಧರ್ಮವಾಗಿದೆ. ಪ್ರಪಂಚವು ಹುಟ್ಟುವಾಗಲೇ ನಮ್ಮ ಸನಾತನ ಧರ್ಮವೂ ಹುಟ್ಟಿಕೊಂಡಿದೆ. ಹಿಂದೂ ಮಹಾಸಾಗರರ ನೀರನ್ನು ಬರಿದಾಗಿಸಲು ಸಾಧ್ಯವಿಲ್ಲವೋ ಹಾಗೆಯೇ ಹಿಂದೂ ಧರ್ಮವು ಕೂಡಾ ಬಲಿಷ್ಠವಾಗಿದೆ. ಧರ್ಮದ ಕಾರ್ಯದಲ್ಲಿ ನಾವೆಲ್ಲರೂ ತೊಡಗಿಸಿಕೊಂಡು ಮುನ್ನಡೆಯಬೇಕು ಎಂದರು.ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ರವೀಂದ್ರ ಶೆಟ್ಡಿ ಪಾವುಲಗುತ್ತು ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.ಬಾಜಪದ…
ಉಳ್ಳಾಲ: ಮಾಡೂರಿನ ಜನತೆಯ ಬಹುಬೇಡಿಕೆಯ ಸರಕಾರಿ ಶಾಲೆಯನ್ನು ಆಂಗ್ಲಮಾಧ್ಯಮ ಶಾಲೆಯನ್ನಾಗಿ ಪರಿವರ್ತಿಸುವ ಯೋಜನೆಗೆ ಶಾಸಕರು ಹಾಗೂ ವಿಧಾನಸಭಾ ಅಧ್ಯಕ್ಷರು ಯು.ಟಿ.ಖಾದರ್ ಗ್ರೀನ್ ಸಿಗ್ನಲ್ ನೀಡಿದ್ದು, ಸರಕಾರದಿಂದ ಅನುದಾನ ಬರುವವರೆಗೆ ತನ್ನ ವೇತನದಿಂದ ರೂ.1 ಲಕ್ಷ ವನ್ನು ಆಂಗ್ಲಮಾಧ್ಯಮ ಶಾಲೆಯ ಕಾರ‍್ಯಾಚರಣೆಗೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಸರಕಾರಿ ಶಾಲೆ ಉನ್ನತೀಕರಣದ ಪ್ರಸ್ತಾವ ಕೇಳಿಬಂದ ಹಿನ್ನೆಲೆಯಲ್ಲಿ ಮಾಡೂರು ಶಾಲೆಯಲ್ಲಿ , ಅಭಿವೃದ್ಧಿ ಸಮಿತಿಯೊಂದಿಗೆ ಎರಡನೇ ಬಾರಿ ಸಭೆ ನಡೆಸಿದ ಅವರು ಶಿಕ್ಷಣಾಧಿಕಾರಿಗಳಿಗೆ ಆಂಗ್ಲ ಮಾಧ್ಯಮ ಶಾಲೆಯನ್ನು ಆರಂಭಿಸುವಂತೆ ಸೂಚಿಸಿದ್ದಾರೆ. ಪೂರಕ ದಾಖಲೆಗಳೆಲ್ಲವನ್ನು ಶಿಕ್ಷಣ ಸಚಿವರೊಂದಿಗೆ ಚರ್ಚಿಸಿ ಸಿದ್ಧಪಡಿಸುವುದಾಗಿ ತಿಳಿಸಿದ ಅವರುಎಲ್ ಕೆ.ಜಿ ಯುಕೆಜಿ ಒಂದನೇ ತರಗತಿಗೆ ದಾಖಲಾತಿಗಳನ್ನು ಆರಂಭಿಸುವಂತೆ ತಿಳಿಸಿದ್ದಾರೆ. ಶಾಲೆಯಲ್ಲಿ ಉತ್ತಮ ಶಿಕ್ಷಣ ನೀಡುವುದು ಶಿಕ್ಷಕರ ಕರ್ತವ್ಯ, ವಿದ್ಯಾರ್ಥಿಗಳ ಸಂಖ್ಯೆಯನ್ನು ಸಮಿತಿ, ಶಿಕ್ಷಕ ವೃಂದದೊಂದಿಗೆ ಸೇರಿಕೊಂಡು ನಡೆಸಬೇಕು. ಎಲ್ ಕೆ.ಜಿ , ಯುಕೆಜಿಯಲ್ಲಿ ಒಟ್ಟು 15 ವಿದ್ಯಾರ್ಥಿಗಳು ಕಡ್ಡಾಯವಾಗಿ ಇರಲೇಬೇಕು ಎಂದು ಸೂಚಿಸಿದರು. ಕಮಿಟಿ ರಚಿಸಿ ಶಿಕ್ಷಕರಿಗೆ ಎಷ್ಟು ವೇತನ ಜೋಡಿಸಬಹುದು ಅನ್ನುವ…
ವರ್ಕಾಡಿಯ ಕೂಟತ್ತಜೆ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದ ಶ್ರೀ ಉಳ್ಳಾಲ್ತಿ ಅಮ್ಮ, ಬಂಟಜಾವದೆ, ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಹಸಿರು ಹೊರೆಕಾಣಿಕೆ ಮೆರವಣಿಗೆ ಮುಡಿಪಿನ್ನಾರ್ ದೈವಸ್ಥಾನದಿಂದ ಭವ್ಯ ಮೆರವಣಿಗೆ ಮೂಲಕ ನಂದಾರಪದವು ಮಾರ್ಗವಾಗಿ ಕ್ಷೇತ್ರಕ್ಕೆ ತಲುಪಿತು.