ಉಳ್ಳಾಲ ನ್ಯೂಸ್ ನೆಟ್ ವರ್ಕ್
ಕೊಣಾಜೆ: ಸ್ವಾಮಿ ವಿವೇಕಾನಂದರು ಒಬ್ಬ ಶ್ರೇಷ್ಠ ಭಾರತೀಯರಾಗಿದ್ದು ಸದೃಢ ಭಾರತ ನಿರ್ಮಾಣದಲ್ಲಿ ಇವರ ಆದರ್ಶ ಹಾಗೂ ಚಿಂತನೆಗಳು ಮಹತ್ವವಾದ ಪಾತ್ರವನ್ನು ವಹಿಸಿದೆ. ದೇಶದ ಸಂಸ್ಕøತಿಯನ್ನು ವಿದೇಶದಲ್ಲಿ ಪಸರಿಸಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ ಎಂದು ಮಂಗಳೂರು ವಿ.ವಿಯ ಇತಿಹಾಸ ವಿಭಾಗದ ನಿವೃತ್ತ ಪ್ರಾಧ್ಯಾಪಕ ಹಾಗೂ ಇತಿಹಾಸ ತಜ್ಞ ಪ್ರೊ. ಸುರೇಂದ್ರ ರಾವ್ ಅಭಿಪ್ರಾಯಪಟ್ಟರು.
ಸ್ವಾಮಿ ವಿವೇಕಾನಂದರು ತಮ್ಮ ಸಣ್ಣ ವಯಸ್ಸಿನಲ್ಲಿಯೇ ಸಂಸ್ಕ ೃತ, ಬಂಗಾಳಿ, ಆಂಗ್ಲ, ಸ್ಪಾನಿಷ್, ಫ್ರೆಂಚ್, ಹಿಂದಿ ಸೇರಿದಂತೆ ಬಹುಭಾಷೆಯಲ್ಲಿ ವಿಶೇಷ ಪಾಂಡಿತ್ಯವನ್ನು ಪಡೆದಿದ್ದರು. ಪ್ರಪಂಚ ಸುತ್ತುತ್ತಿದ್ದಾಗ ವಿವೇಕಾನಂದರ ಆಕರ್ಷಕ ವ್ಯಕ್ತಿತ್ವ ಹಾಗೂ ಅವರ ಮಾತಿನ ಗಾಂಭೀರ್ಯತೆ ಎಲ್ಲರನ್ನು ಆಕರ್ಷಿಸುತ್ತಿತ್ತು. ವರ್ಣ, ಭಾಷೆ, ದೇಶದ ಹಂಗಿಲ್ಲದೆ ಜನರು ಅವರನ್ನು ನೋಡಲು ಮುಗಿಬೀಳುತ್ತಿದ್ದರು. ಪರಕೀಯರು ದೇಶವನ್ನು ಆಳುತ್ತಿದ್ದ ಸಂದರ್ಭದಲ್ಲಿ ದೇಶದ ಸಂಸ್ಕ ೃತಿ, ಧರ್ಮ ಹಾಗೂ ರಾಷ್ಟಿ ್ರೀಯ ಭಾವೈಕ್ಯತೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ತೋರಿಸಿಕೊಟ್ಟವರು ಸ್ವಾಮಿ ವಿವೇಕಾನಂದರು ಎಂದ ಅವರು ಇಂದಿನ ಯುವ ಸಮುದಾಯ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು .
ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ. ಭೈರಪ್ಪ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಪ್ರೊ.ಎ.ಎಂ. ಲೋಕೇಶ್ ಉಪಸ್ಥಿತರಿದ್ದರು.
ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ನಿರ್ದೇಶಕ ಪ್ರೊ. ಉದಯ ಬಾರ್ಕೂರು ಸ್ವಾಗತಿಸಿದರು.
ಕನ್ನಡ ವಿಭಾಗದ ಡಾ. ಧನಂಜಯ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು.