Site icon Ullalavani

ಉಳ್ಳಾಲದಲ್ಲಿ ರೂ. 2000 ನಕಲಿ ನೋಟು

ಉಳ್ಳಾಲ ನ್ಯೂಸ್ ನೆಟ್ ವರ್ಕ್

ತೊಕ್ಕೊಟ್ಟು: ಇನ್ನೂ ರೂ. 2,000 ದ ನೋಟನ್ನು ಕಂಡವರಿಲ್ಲ, ಆದರೆ ಅಷ್ಟರಲ್ಲೇ ತೊಕ್ಕೊಟ್ಟು ಕಲ್ಲಾಪು ಸಮೀಪ ಮೀನು ವ್ಯಾಪಾರಿಗೆ ರೂ. 2,000 ನಕಲಿ ನೋಟು ನೀಡಿ ವಂಚಿಸಿರುವ ಘಟನೆ ಸೋಮವಾರ ನಡೆದಿದೆ.

ಕಲ್ಲಾಪು ಬಳಿ ಟೆಂಪೋದಲ್ಲಿ ಮೀನು ಮಾರಾಟ ನಡೆಸುವ ಉಳ್ಳಾಲದ ಮುಸ್ತಾಫ ಎಂಬವರಿಗೆ ವಂಚಿಸಲಾಗಿದೆ. ಮಧ್ಯಾಹ್ನ ವೇಳೆ ಮೀನು ಖರೀದಿಸಲು ಹಲವು ಗ್ರಾಹಕರಿದ್ದು, ಅವರಲ್ಲಿ ಹಲವರು ಹೊಸ 2000 ನೋಟು ನೀಡಿ 500 ರೂ.ಗಳ ಮೀನು ಖರೀದಿಸಿ, ಉಳಿದ ಚಿಲ್ಲರೆ ಹಣವನ್ನು ಪಡೆಯುತ್ತಿದ್ದರು. ಈ ನಡುವೆ ಗೊತ್ತಿಲ್ಲದೆ ಹಣ ಪಡೆದುಕೊಂಡ ಮುಸ್ತಾಫ ಅವರು ಸಂಜೆ ವೇಳೆ ಹಣ ಎಣಿಸುವ ಸಂದರ್ಭ ನೋಡು ನಕಲಿಯಾಗಿರುವುದು ಬೆಳಕಿಗೆ ಬಂದಿದೆ.

ಕಲರ್ ಪ್ರಿಂಟರ್ ಮೂಲಕ ನೋಟನ್ನು ಮುದ್ರಿಸಲಾಗಿದ್ದು, ಅದಕ್ಕೆ ನೀರು ತಾಗಿ ಬಣ್ಣವೂ ಅಳಿಸಿ ಹೋಗಿದೆ. ನೂತನ ನೋಟಿನ ಭಾವಚಿತ್ರವನ್ನು ವಾಟ್ಸ್ಯಾಪ್ , ಅಂತರ್ಜಾಲದ ಮುಖೇನ ಪಡೆದು , ಕಲರ್ ಪ್ರಿಂಟರ್ ಮೂಲಕ ಅದನ್ನು ಮುದ್ರಿಸುವ ಜಾಲ ಸಕ್ರಿಯವಾಗಿದೆ ಅನ್ನುವ ಮಾಹಿತಿ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಈ ಕುರಿತು ಉಳ್ಳಾಲ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ.

Exit mobile version