Site icon Ullalavani

ಬಂದ್‍ಗೆ ಮಿಶ್ರ ಪ್ರತಿಕ್ರಿಯೆ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ: ದೇಶವ್ಯಾಪಿ ಬಂದ್‍ಗೆ ಉಳ್ಳಾಲ ನಗರ ಪ್ರದೇಶದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೆ ಗ್ರಾಮೀಣ ಪ್ರದೇಶದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮಂಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಉಳ್ಳಾಲ, ತೊಕ್ಕೊಟ್ಟು ಸೇರಿದಂತೆ ಪ್ರಮುಖ ಪಟ್ಟಣಗಳಲ್ಲಿ ಹೆಚ್ಚಿನ ಅಂಗಡಿ ಮುಗ್ಗಟ್ಟುಗಳು ಬಂದ್ ಆಗಿದ್ದರೆ, ತಲಪಾಡಿ, ದೇರಳಕಟ್ಟೆ ಕೋಟೆಕಾರು, ದೇರಳಕಟ್ಟೆ, ಕುತ್ತಾರು, ಅಸೈಗೋಳಿ, ಮುಡಿಪು, ಕೊಣಾಜೆ, ಗ್ರಾಮಚಾವಡಿ, ಪಾವೂರು, ಕೈರಂಗಳ, ಹರೇಕಳ, ನರಿಂಗಾನ ಸೇರಿದಂತೆ ಹೆಚ್ಚಿನ ಪ್ರದೇಶದಲ್ಲಿ ಕೆಲವೊಂದು ಅಂಗಡಿಗಳು ತೆರೆಯುವ ಮೂಲಕ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಸ್ ಸಂಚಾರ ಸಂಪೂರ್ಣ ಬಂದ್ :

ಮಂಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಸ್ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಪಾವೂರು ಹರೇಕಳ, ಇನೋಳಿ, ಕೊಣಾಜೆ ಮಾರ್ಗವಾಗಿ ಸಂಚರಿಸುವ ಖಾಸಗಿ ಸಿಟಿ ಬಸ್ಸುಗಳು. ಬಿ.ಸಿ.ರೋಡ್, ವಿಟ್ಲ, ಪುತ್ತೂರು ಸೇರಿದಂತೆ ತೌಡುಗೋಳಿ, ಮುಡಿಪು ಮಾರ್ಗವಾಗಿ ಸಂಚರಿಸುವ ಸರ್ವಿಸ್ ಬಸ್‍ಗಳು ಸಂಚಾರ ಸ್ಥಗಿತಗೊಳಿಸಿದ್ದರಿಂದ ತೊಕ್ಕೊಟ್ಟು -ಕೊಣಾಜೆ ಮಂಗಳೂರು ವಿ.ವಿ. ಸಂಪರ್ಕಿಸುವ ರಸ್ತೆಯಲ್ಲಿ ಯಾವುದೇ ಬಸ್ಸುಗಳು ಸಂಚಾರ ನಡೆಸಿಲ್ಲ. ರಾಷ್ಟ್ರೀಯ ಹೆದ್ದಾರಿ 66ರ ಮಂಗಳೂರಿನಿಂದ ತಲಪಾಡಿ, ಉಳ್ಳಾಲ, ಕುಂಪಲ ಸಂಚರಿಸುವ ಖಾಸಗಿ ಸಿಟಿಬಸ್ಸುಗಳು ರಸ್ತೆಗಿಳಿಯದೆ ಹೊರಗಿನಿಂದ ಬಂದ ಪ್ರಯಾಣಿಕರು ಪರದಾಡುವಂತಾಯಿತು. ಖಾಸಗಿ ಕಾರು ಸೇರಿದಂತೆ ರಿಕ್ಷಾಗಳು ಬಾಡಿಗೆ ನಡೆಸುತ್ತಿರುವುದು ಕಂಡು ಬಂದರೆ, ಸಿಐಟಿಯು ಸೇರಿದಂತೆ ಕೆಲವು ಸಂಘಟನೆಗಳಿಗೆ ಸೇರಿದ ಟೂರಿಸ್ಟ್ ವಾಹನಗಳು ಸಂಚಾರ ಸ್ಥಗಿತಗೊಳಿಸಿದ್ದವು. ಪ್ರತಿಭಟನೆಗೆ ತೊಕ್ಕೊಟ್ಟು ಟೂರಿಸ್ಟ್ ವಾಹನ ಮಾಲಕರ ಮತ್ತು ಚಾಲಕರ ಸಂಘ ಬೆಂಬಲ ವ್ಯಕ್ತಪಡಿಸಿ ಸಂಚಾರವನ್ನು ಸ್ಥಗಿತಗೊಳಿಸಿತ್ತು.

ಅಹಿತಕರ ಘಟನೆಗಳಿಲ್ಲ :

ತೊಕ್ಕೊಟ್ಟು ಸೇರಿದಂತೆ ಉಳ್ಳಾಲ ವ್ಯಾಪ್ತಿಯ ಹೊರವಲಯಗಳಲ್ಲಿ ಶಾಂತಿಯುತ ಬಂದ್ ನಡೆದಿದೆ. ಕುತ್ತಾರಿನಲ್ಲಿ ಎಡಪಕ್ಷಗಳ ಸಂಘಟನೆಯಿಂದ ರಸ್ತೆಯಲ್ಲಿ ಟಯರ್‍ಗೆ ಬೆಂಕಿ ಹಾಕುವ ಮೂಲಕ ಪ್ರತಿಭಟನೆ ನಡೆದರೆ, ತೊಕ್ಕೊಟ್ಟಿನಲ್ಲಿ ಬೆಳಗ್ಗೆಯೇ ಕಾರ್ಯಕರ್ತರು ಕೆಲವೊಂದು ಅಂಗಡಿಗಳನ್ನು ವ್ಯಾಪಾರ ನಡೆಸದಂತೆ ಮನವಿ ಮಾಡಿದರು. ಶುಕ್ರವಾರದಂದು ಮುಸ್ಲಿಂ ಸಮುದಾಯ ಅಂಗಡಿಗಳಿಗೆ ರಜೆಯಾಗಿದ್ದು, ಉಳಿದಂತೆ ಮುಖ್ಯ ಪಟ್ಟಣಗಳಲ್ಲಿ ಅಂಗಡಿ ಮುಗ್ಗಟ್ಟುಗಳು ಬಂದ್ ಆಗಿತ್ತು. ತೊಕ್ಕೊಟ್ಟು ಜಂಕ್ಷನ್‍ನಲ್ಲಿ ಸಿಪಿಐಎಂ ಮತ್ತು ಅದರ ಸಹ ಸಂಘಟನೆಗಳ ಪ್ರತಿಭಟನಾ ಕಾರ್ಯಕ್ರಮ ನಡೆಯಿತು.

ಬಿಕೋ ಎಂದ ರಾಷ್ಟ್ರೀಯ ಹೆದ್ದಾರಿ :

ವಾಹನಗಳಿಂದ ಸದಾ ಗಿಜಿಗಿಡುತ್ತಿದ್ದ ಮಂಗಳೂರಿನಿಂದ ಕೇರಳ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶುಕ್ರವಾರ ಭಾರತ್ ಬಂದ್‍ನಿಂದ ಹೆದ್ದಾರಿ ಬಿಕೋ ಎನ್ನುವಂತಿತ್ತು. ಕೇರಳದಲ್ಲಿಯೂ ಪ್ರತಿಭಟನೆಯಿಂದ ಕೇರಳದಿಂದ ಮಂಗಳೂರಿಗೆ ಬರುವ ವಾಹನಗಳನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿತ್ತು. ತಲಪಾಡಿ, ಕೆ.ಸಿ.ರೋಡ್, ಕೋಟೆಕಾರು, ಬೀರಿ, ಕೊಲ್ಯ, ತೊಕ್ಕೊಟ್ಟು ಸೇರಿದಂತೆ ಹೆಚ್ಚಿನ ಬಸ್ ನಿಲ್ದಾಣಗಳಲ್ಲಿ ಪೆÇಲೀಸರು ಮಾತ್ರ ಕಂಡು ಬಂದರು. ತೊಕ್ಕೊಟ್ಟು ಕೇಂದ್ರ ಬಸ್ ನಿಲ್ದಾಣವೂ ಬಿಕೋ ಎನ್ನುವಂತಿತ್ತು.

ಮುನ್ನಚ್ಚೆರಿಕೆ ಕ್ರಮವಾಗಿ ಉಳ್ಳಾಲ ಸೇರಿದಂತೆ ಹೆಚ್ಚಿನ ಪ್ರದೇಶದಲ್ಲಿ ಕೆಎಸ್‍ಆರ್‍ಪಿ ಪೆÇಲೀಸರು ಸೇರಿದಂತೆ ಸ್ಥಳೀಯ ಕೊಣಾಜೆ ಮತ್ತು ಉಳ್ಳಾಲ ಪೆÇಲೀಸರು ಬಿಗು ಬಂದೋಬಸ್ತ್ ಏರ್ಪಡಿಸಿದ್ದರು.

ವಿದ್ಯಾರ್ಥಿಗಳಿಲ್ಲದೆ ನಡೆದ ತರಗತಿಗಳು:

ಖಾಸಗಿ ಶಾಲೆಗಳಿಗೆ ಬಹುತೇಕ ರಜೆ ಘೋಷಿಸಲಾಗಿದ್ದರೆ, ಸರಕಾರಿ ಶಾಲೆಗಳು ತೆರೆದಿದ್ದರೂ ತರಗತಿಗಳೆಲ್ಲವೂ ಖಾಲಿಯಾಗಿತ್ತು. ಬಸ್ಸುಗಳಿಲ್ಲದೆ ತರಗತಿಗೆ ಹಾಜರಾಗದ ವಿದ್ಯಾರ್ಥಿಗಳು ಪಾಠ ಕೇಳುವುದರಿಂದ ವಂಚಿತರಾದರು. ತಲಪಾಡಿ ಶಾಲೆಗೆ ಬರುವ ದೂರದ ಮಂಜೇಶ್ವರ, ಪಾವೂರು, ಕಿನ್ಯಾ ಮೂಲದ ವಿದ್ಯಾರ್ಥಿಗಳು ಬಸ್ಸುಗಳಿಲ್ಲದೆ ಶಾಲೆಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಬೆರಳೆಣಿಕೆ ವಿದ್ಯಾರ್ಥಿಗಳಿಗೆ ಖಾಸಗಿ ವಾಹನಗಳನ್ನು ಆಶ್ರಯಿಸಿ ಬಂದ ಶಿಕ್ಷಕ ಶಿಕ್ಷಕಿಯರು ಪಾಠ ಹೇಳುವಂತಾಯಿತು.

ಬಸ್ಸುಗಳಿಲ್ಲದೆ ಮಾರಾಟವಾಗದ ಪತ್ರಿಕೆ:

ಜನಸಂಚಾರ ಇರುವ ಗಡಿಪ್ರದೇಶ ತಲಪಾಡಿ ಪ್ರದೇಶಗಳಲ್ಲಿ ದಿನನಿತ್ಯ ಸಾವಿರದಷ್ಟು ಮಂದಿ ಸೇರುತ್ತಾರೆ. ಕನ್ನಡ, ಮಲಯಾಳಿ , ಆಂಗ್ಲ ಪತ್ರಿಕೆಗಳನ್ನು ಬಸ್ ಪ್ರಯಾಣಿಕರ ಸಹಿತ ನಿಲ್ದಾಣದಗಳಲ್ಲಿ ನಿಲ್ಲುವ ಪ್ರಯಾಣಿಕರಿಗೆ ಮುಟ್ಟಿಸುವ ಜವಾಬ್ದಾರಿಯನ್ನು ಹಿರಿಯರಾದ ಇಬ್ರಾಹಿಂ ವರ್ಷಗಳಿಂದ ನಡೆಸುತ್ತಾ ಬಂದಿದ್ದಾರೆ. ಆದರೆ ಬಂದ್ ಪ್ರಯುಕ್ತ ಮಾರಾಟಕ್ಕೆ ಕೊಂಡ ಪತ್ರಿಕೆಗಳು ಮಾರಾಟವಾಗದೆ ಹಾಗೇ ಉಳಿಯಿತು. ಬೆಳಿಗ್ಗೆ 10 ಗಂಟೆಯಾಗುತ್ತಲೇ ಅವರು ಮನೆಗೆ ವಾಪಸ್ಸಾಗುವಂತಾಯಿತು.

ತೊಕ್ಕೊಟ್ಟುವಿನಲ್ಲಿ ಸಿಐಟಿಯು ಪ್ರತಿಭಟನೆ
ಕಾರ್ಮಿಕರಿಗೆ ಕನಿಷ್ಟ ವೇತನ ನಿಗದಿ ಸೇರಿದಂತೆ ಸಿಐಟಿಯುನ 12 ಬೇಡಿಕೆಗಳನ್ನು ಈಡೇರಿಕೆ ಮಾಡುವಂತೆ ಕೇಂದ್ರ ಸರಕಾರದ ಜನವಿರೋ„ ನೀತಿಯನ್ನು ವಿರೋಧಿಸಿ ಸಿಐಟಿಯು ಪ್ರಾರಂಬಿಸಿರುವ ಮುಷ್ಕರ ಇಂದು ಬಂದ್ ಆಗಿ ಪರಿವರ್ತನೆಯಾಗಿದ್ದು ದೇಶದಾದ್ಯಂತ ಬೇರೆ ಬೇರೆ ನಗರಗಳು ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಎಲ್ಲಾ ವರ್ಗದ ಜನರು ಬಂದ್ ನಡೆಸುವ ಮೂಲಕ ದೇಶ ಪ್ರೇಮಿ ಬಂದ್ ಆಗಿ ಮಾರ್ಪಾಟ್ಟಾಗಿದೆ ಎಂದು ಡಿವೈಎಫ್‍ಐ ಉಳ್ಳಾಲ ವಲಯ ಕಾರ್ಯದರ್ಶಿ ಜೀವನ್ ಕುತ್ತಾರು ಅಭಿಪ್ರಾಯಪಟ್ಟರು.

ಅವರು ಭಾರತ್ ಬಂದ್ ಪ್ರಯುಕ್ತ ಕಾರ್ಮಿಕ ಸಂಘಟನೆಗಳ ಆಶ್ರಯದಲ್ಲಿ ತೊಕ್ಕೊಟ್ಟು ಜಂಕ್ಷನ್‍ನಲ್ಲಿ ನಡೆದ ಪ್ರತಿಭಟಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕಾರ್ಮಿಕರಿಗೆ ಕನಿಷ್ಟ 18,000 ವೇತನ ನಿಗದಿ, ರಸ್ತೆ ಸುರಕ್ಷಾ ಮಸೂದೆ ಜಾರಿಗೆ ತರಬಾರದು ಯುವಜನರಿಗೆ ಉದ್ಯೋಗ ಸೇರಿದಂತೆ ಸಿಐಟಿಯು 12 ಬೇಡಿಗಳನ್ನು ಈಡೇರಿಸಬೇಕು ಇದೊಂದು ಮುಷ್ಕರದ ರೀತಿಯಲ್ಲಿ ಚಳವಳಿಯನ್ನು ಆರಂಭಿಸಿತ್ತು. ಇದೀಗ ಬಂದ್ ಆಗಿ ಪರಿವರ್ತನೆಯಾಗಿದ್ದು, ದೇಶದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.

ಪ್ರತಿಭಟನೆಯಲ್ಲಿ ಸಿಪಿಐಎಂ ಉಳ್ಳಾಲ ವಲಯ ಕಾರ್ಯದರ್ಶಿ ಕೃಷ್ಣಪ್ಪ ಸಾಲ್ಯಾನ್, ಸಿಐಟಿಯು ಕಾರ್ಯದರ್ಶಿ ಜಯಂತ ನಾೈಕ್, ಸಿಪಿಐಎಂ ಜಿಲ್ಲಾ ಸಮಿತಿ ಸದಸ್ಯ ಪದ್ಮಾವತಿ ಶೆಟ್ಟಿ , ಸಿಪಿಐಎಂ ಉಳ್ಳಾಲ ವಲಯ ಸಮಿತಿ ಸದಸ್ಯ ಮಹಾಬಲ ದೆಪ್ಪೆಲಿಮಾರು, ಉಳ್ಳಾಲ ವಲಯ ಕಟ್ಟಡ ಕಾರ್ಮಿಕ ಮುಖಂಡ ಜನಾರ್ಧನ , ಮುನ್ನೂರು ಗ್ರಾಮ ಪಂಚಾಯತ್ ಸದಸ್ಯ ಗಣೇಶ್ ಟೈಲರ್, ಜನವಾದಿ ಮಹಿಳಾ ಸಂಘಟನೆಯ ಮುಖಂಡೆ ವಿಲಾಸಿನಿ ತೊಕ್ಕೊಟ್ಟು ಮತ್ತಿತರರು ಉಪಸ್ಥಿತರಿದ್ದರು.

Exit mobile version