Site icon Ullalavani

ಬಾವುಕರಾಗಿ ಕಣ್ಣೀರಿಟ್ಟ ಅಸ್ರಣ್ಣ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಕೊಲ್ಯ: ಶ್ರೀ ಕಟೀಲು ದುರ್ಗಾಪರಮೇಶ್ವರಿ ಅಮ್ಮನ ಭಕ್ತರು ಕೊಲ್ಯ ಶ್ರೀ ಸೌಭಾಗ್ಯ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶ್ರೀ ಕಟೀಲು ದೇವರ ಮೇಲೆ ಅವಹೇಳನ ಮಾಡಿರುವ ಬಗ್ಗೆ ಧಾರ್ಮಿಕ ಜಾಗೃತಿ ಮತ್ತು ಖಂಡನಾ ಸಭೆಯಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕ ಅನಂತಪದ್ಮನಾಭ ಅಸ್ರಣ್ಣ ಬಾವುಕರಾಗಿ ಕಣ್ಣೀರಿಟ್ಟ ಘmನೆ ನಡೆಯಿತು.

ದೇಶದ ಸಂಸ್ಕøತಿಯಲ್ಲಿ ಅನಾದಿ ಕಾಲದಿಂದಲೂ ತಾಯಿಗೆ ಅತ್ಯಂತ ಮಹತ್ತರತೆಯನ್ನು ಕೊಡಲಾಗಿದೆ. ಜಿಲ್ಲೆಯಲ್ಲಿ ಕಟೀಲಿನ ದೇವಿಗೆ ಸ್ವಂತ ಅಮ್ಮನಷ್ಟು ಪ್ರಾತಿನಿಧ್ಯ ಕೊಡಲಾಗುತ್ತಿದೆ. ಅಂತಹ ನಾಡಿನಲ್ಲೇ ಇದ್ದುಕೊಂಡು ಕ್ಷೇತ್ರದ ತಾಯಿಗೆ ಅವಹೇಳನಕಾರಿಯಾಗಿ ಬರೆಯುವ ಮೂಲಕ ಧರ್ಮವನ್ನು ಉರಿಸುವ ಕೆಲಸ ಆಗುತ್ತಿದೆ. ಇದರ ವಿರುದ್ಧ ಹೋರಾಡದೇ ಇದ್ದಲ್ಲಿ ಹುಟ್ಟಿರುವುದು ವ್ಯರ್ಥ. ತಪ್ಪು ಎಂದು ತಿಳಿದರೂ ಪ್ರತಿಭಟಿಸದೇ ಇದ್ದಲ್ಲಿ ಧರ್ಮ ಉಳಿಯಲು ಸಾಧ್ಯವಿಲ್ಲ. ತಪ್ಪಿನ ಅರಿವು ಲೋಕಕ್ಕೆ ತಿಳಿಸುವ ಕೆಲಸ ಆಗಬೇಕಿದೆ. ಶ್ರೀ ಕ್ಷೇತ್ರ ಕಟೀಲಿಗೆ ಮುಸ್ಲಿಂ, ಕ್ರಿಶ್ಚಿಯನ್ನರು ಬಂದು ಪೂಜೆ ಸಲ್ಲಿಸಿ ಹೋಗುತ್ತಾರೆ. ಸಮಾರಸ್ಯದ ಕ್ಷೇತ್ರವೆನಿಸಿರುವ ಕಟೀಲಿನ ಹೆಸರಿಗೆ ಅಪಾರ ಗೌರವ ಇದೆ. ಮುಸ್ಲಿಂ ಸಮುದಾಯದಲ್ಲಿ ದುರ್ಬುದ್ಧಿಯ ಪ್ರವೃತ್ತಿಯನ್ನು ಹೊಂದಿರುವುದು ದೊಡ್ಡ ಅಪರಾಧ. ಅದನ್ನು ಎತ್ತಿಹಿಡಿಯದೇ ಇದ್ದಲ್ಲಿ ಅದು ದೊಡ್ಡ ಅಪರಾಧ ಎಂದ ಅವರು ಕಲ್ಲು, ಮರ, ಭೂಮಿ ಉಪಯುಕ್ತ ಸೊತ್ತುಗಳನ್ನು ಪೂಜಿಸುವ ಮಹತ್ವರತೆ ಹಿಂದೂ ಸಂಸ್ಕøತಿಯಲ್ಲಿದೆ. ಎಲ್ಲgನ್ನು ಪ್ರೀತಿಸುವ ಸಮುದಾಯ ಹಿಂದುಗಳದ್ದು. ಅಂತಹ ದೇಶದ ಅನ್ನ ತಿಂದು ಅಲ್ಲಿನ ಜನರ ಧಾರ್ಮಿಕ ಭಾವನೆಗಳಿಗೆ ಘಾಸಿಯುಂಟು ಮಾಡುವುದು ಖಂಡನೀಯ. ಉಪಕಾರ ಸ್ಮರಣೆ ಇಲ್ಲದೇ ಇದ್ದಲ್ಲಿ ಜೀವನದಲ್ಲಿ ಪ್ರಾಯಶ್ಚಿತ್ತವೇ ಇಲ್ಲ. ಅತ್ತೂರು ಇಗರ್ಜಿ, ಮುಸ್ಲಿಂ ಮಸೀದಿಗೆ ಹಿಂದೂಗಳು ಹೋಗುವ ಸಂಸ್ಕøತಿ ಇರುವ ಸಂದರ್ಭ ಅವರ ದೇವರಿಗೆ ಅವಹೇಳನ ಇಡೀ ಹಿಂದು ಸಮುದಾಯಕ್ಕೆ ದೊಡ್ಡ ಆಘಾತವೇ ಆಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯ್ಯಕ್ಷ ಸತೀಶ್ ಕುಂಪಲ ಅಧ್ಯಕ್ಷತೆ ವಹಿಸಿದ್ದರು.
ಉಳ್ಳಾಲ ಬಿಲ್ಲವ ವೇದಿಕೆ ಅಧ್ಯಕ್ಷ ಕೆ.ಟಿ.ಸುವರ್ಣ, ಕೊಲ್ಯ ನಾಗಬ್ರಹ್ಮಸ್ಥಾನದ ಧರ್ಮದರ್ಶಿ ಭಾಸ್ಕರ್ ಐತಾಳ್, ಕಾಪಿಕಾಡು ಉಮಾಮಹೇಶ್ವರಿ ದೇವಸ್ಥಾನದ ಅಧ್ಯಕ್ಷ ಎ.ಜೆ.ಶೇಖರ್, ಲಕ್ಷ್ಮೀ ನರಸಿಂಹ ದೇವಸ್ಥಾನದ ಮೊಕ್ತೇಸರ ಶ್ರೀಕರ ಕಿಣಿ, ಕೊಲ್ಯ ಶಾರದ ಉತ್ಸವ ಸಮಿತಿಯ ಅಧ್ಯಕ್ಷ ಸೀತಾರಾಮ ಬಂಗೇರ, ಕೊಲ್ಯ ನಾಗಬ್ರಹ್ಮ ಸ್ಥಾನದ ಅಧ್ಯಕ್ಷ ಸುಶಾಂತ್ ಭಂಡಾರಿ, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಅನಿಲ್ ದಾಸ್, ಜೈವೀರ ಮಾರುತಿ ವ್ಯಾಯಾಮ ಶಾಲೆಯ ವಿಠಲ ಶ್ರೀಯಾನ್, ಆಲಿಚಾಮುಂಡೇಶ್ವರಿ ದೈವಸ್ಥಾನದ ಅಧ್ಯಕ್ಷ ಮಾಧವ ಬಗಂಬಿಲ, ಉಳಿಯ ದೇವಸ್ಥಾನದ ಆಡಳಿತ ಮೊಕ್ತೇಸರ ಯು.ಎಸ್.ಪ್ರಕಾಶ್ ಮೊಕ್ತೇಸರರು, ಕುತ್ತಾರು ಶ್ರೀರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದ ಮಾಜಿ ಅಧ್ಯಕ್ಷ ಪವಿತ್ರ ಕುಮಾರ್ ಗಟ್ಟಿ, ಉಳ್ಳಾಲ ಮೊಗವೀರ ಸಮಾಜದ ಅಧ್ಯಕ್ಷ ಭರತ್ ಉಳ್ಳಾಲ್, ಉಳ್ಳಾಲ ವಲಯ ಬಮಟರ ಸಂಘದ ಮಾಜಿ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಹರೇಕಳ, ಹರೀಶ್ ಕುತ್ತಾರ್, ಕುಂಪಲ ಬಾಲಕೃಷ್ಣ ಮಂದಿರದ ಎಸ್.ಎಸ್. ನಾೈಕ್, ದಯಾನಂದ ತೊಕ್ಕೊಟ್ಟು, ರಮೇಶ್ ಕೊಂಡಾಣ, ಗಣೇಶ್ ಕಾಪಿಕಾಡು, ಹರೀಶ್ ಅಂಬ್ಲಮೊಗರು, ಪುರುಷೋತ್ತಮ ಕಲ್ಲಾಪು, ಆನಂದ ಶೆಟ್ಟಿ, ಹಿತೇಶ್ ಉಳ್ಳಾಲಬೈಲ್, ಪ್ರೇಮನಾಥ್ ಪುತ್ರನ್, ದೇರಳಕಟ್ಟೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಸೀತಾರಾಮ ಶೆಟ್ಟಿ ದಡಸ್ ಉಪಸ್ಥಿತರಿದ್ದರು.

ಪ್ರವೀಣ್ ಬಸ್ತಿ ಕಾರ್ಯಕ್ರಮ ನಿರೂಪಿಸಿದರು. ಜೀವನ್ ತೊಕ್ಕೊಟ್ಟು ಸ್ವಾಗತಿಸಿದರು. ಕುಮುದಾ ಅಡಪ್ಪ ಕುಂಪಲ ಖಂಡನಾ ನಿರ್ಣಯ ಮಂಡಿಸಿದರು.

Exit mobile version