Site icon Ullalavani

ಅಪಹರಣಕ್ಕೊಳಗಾಗಿದ್ದ ವ್ಯಕ್ತಿ ಪತ್ತೆ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಕೊಣಾಜೆ: ಎರಡು  ವಾರಗಳ  ಹಿಂದೆ ಅಪಹರಣಕ್ಕೊಳಗಾಗಿದ್ದ ಮಂಜನಾಡಿ ಕಲ್ಕಟ್ಟ ನಿವಾಸಿ ಆರೀಫ್(೨೪)  ಪತ್ತೆಯಾಗಿದ್ದು,  ಅಪಹರಣಕಾರರೇ ಬಸ್ಸಿಗೆ ಹಣ ಕೊಟ್ಟು ಸುಳ್ಯ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದಾರೆಂದು   ಕೊಣಾಜೆ ಪೊಲೀಸ್ ಠಾಣೆಗೆ ಗುರುವಾರ ಬಂದಿರುವ ಆರೀಫ್ ತಿಳಿಸಿದ್ದಾರೆ.

26ullal5ವಿದೇಶದಲ್ಲಿದ್ದ ಆರೀಫ್ ಕೆಲ ತಿಂಗಳುಗಳ ಹಿಂದೆ ಊರಿಗೆ ಮರಳಿದ್ದರು. ಬಳಿಕ‌ ಮೀನಿನ ವ್ಯಾಪಾರ ಆರಂಭಿಸಿದ್ದ ಅವರು ಚೆಂಬುಗುಡ್ಡೆ ಸಮೀಪ ಮೀನು ವ್ಯಾಪಾರ ನಡೆಸುತ್ತಿದ್ದರು.ವಾರದ ಹಿಂದೆ ಮೀನು ತರಲೆಂದು ಮಂಗಳೂರಿನ ಧಕ್ಕೆಗೆ ತೆರಳುವ ಸಂದಭ೯ ಸ್ಕಾಪಿ೯ಯೋ ವಾಹನದಲ್ಲಿ ಬಂದಿದ್ದ ತಂಡ ನಸುಕಿನ ಜಾವ ಕಲ್ಕಟ್ಟ ದಿಂದ ಅಪಹರಣ ನಡೆಸಿತ್ತು. ಬಳಿಕ ಮನೆ ಮಂದಿ ಗೆ  ವಿದೇಶದ ದೂರವಾಣಿ ಸಂಖ್ಯೆ ಮೂಲಕ ಬಂದ ಕರೆಯಲ್ಲಿ ರೂ.೧.೫ ಕೋಟಿ ಹಣದ  ಬೇಡಿಕೆ ಮುಂದಿಟ್ಟಿತ್ತು. ಇಲ್ಲವಾದಲ್ಲಿ ಕೊಲ್ಲುವ ಬೆದರಿಕೆಯನ್ನು ಹಾಕಿತ್ತು. ಅದರಂತೆ ಮನೆಮಂದಿ ಬೆದರಿ ರೂ.೨೫ ಲಕ್ಷ ರೂ ಹಣ ಕೊಡುವ ವಿಶ್ವಾಸ ನೀಡಿದರೂ ಅಪಹರಣಕಾರರು ಒಪ್ಪಿರಲಿಲ್ಲ. ಇದರಿಂದ ದ ಕುಟುಂಬ ತಡವಾಗಿ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು. ಈ ವೇಳೆ ಉಪ್ಪಿನಂಗಡಿಯ ಲತೀಫ್ ಹಾಗೂ ಕೇರಳದ ಫಾರುಕ್ ಎಂಬವರ ತಂಡ ಅಪಹರಿಸಿರುವುದಾಗಿ ತಿಳಿಸಿತ್ತು. ತನಿಖೆ ಕೈಗೆತ್ತಿಕೊಂಡ ಕೊಣಾಜೆ ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದರೂ ಪ್ರಯೋಜನವಾಗಿರಲಿಲ್ಲ. ಗುರುವಾರ ಏಕಾಏಕಿ ಆರೀಫ್ ಕೊಣಾಜೆ ಠಾಣೆಗೆ ಬಂದಿದ್ದಾರೆ.

ಹಣದ ವಿಚಾರ: ಆರೀಫ್ ವಿದೇಶದಲ್ಲಿರುವ ಸಂದಭ೯ ರೂ. ೪೦,೦೦,೦೦೦ ದಷ್ಟು ನಗದು ಪರಿಚಯದ ಮೇರೆಗೆ ಪಡೆದುಕೊಂಡಿದ್ದರು. ಅದನ್ನು ವಾಪಸ್ಸು ಮಾಡದೇ ಊರಿಗೆ ಮರಳಿದ್ದ. ಇದರಿಂದ ನೀಡಿದ ಹಣ ಪಡೆಯಲೆಂದೇ ತಂಡ ಅಪಹರಿಸಿರುವ ಸಾಧ್ಯತೆಗಳಿವೆ. ಅಪಹರಣಕಾರರು ಆರೀಫ್‌ನನ್ನು ತಮಿಳುನಾಡಿಗೆ ಕೊಂಡೊಯ್ದು ಅಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿ ಇರಿಸಿದ್ದಾರೆಂದು ಆರೀಫ್‌ ತಿಳಿಸಿದ್ದರೂ, ಆಘಾತಕ್ಕೊಳಗಾಗಿರುವುದರಿಂದ ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ. ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

Exit mobile version