ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಸ್ವಾತಂತ್ರ್ಯೋತ್ಸವದ ದಿನದಂದು ಅಬ್ಬಕ್ಕಳನ್ನು ಸ್ಮರಿಸುವ ಕಾರ್ಯ ಶ್ಲಾಘನೀಯ. ಅಬ್ಬಕ್ಕಳ ನಾಡಿನಲ್ಲಿ ಸರ್ವಧರ್ಮೀಯರು ಶಾಂತಿ ನೆಮ್ಮದಿಯಿಂದ ಬದುಕಿ ಜೀವಿಸುವ ವಾತಾವರಣ ನಿರ್ಮಾಣವಾಗಬೇಕಿದೆ ಎಂದು ಉಳ್ಳಾಲ ಬಿಲ್ಲವ ವೇದಿಕೆ ಅಧ್ಯಕ್ಷ ಕೆ.ಟಿ.ಸುವರ್ಣ ಹೇಳಿದರು.
ಅವರು ಉಳ್ಳಾಲದ ಕರಾವಳಿ ಸಾಂಸ್ಕøತಿಕ ಪರಿಷತ್ ವತಿಯಿಂದ 70 ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಉಳ್ಳಾಲದಲ್ಲಿರುವ ವೀರರಾಣಿ ಅಬ್ಬಕ್ಕಳ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿ ಮಾತನಾಡಿದರು.
ಬಿಜೆಪಿ ಹಿರಿಯ ಮುಖಂಡ ಸೀತಾರಾಮ ಬಂಗೇರ, ರೈಲ್ವೇ ಸಲಹಾ ಸಮಿತಿ ಸದಸ್ಯ ಚಂದ್ರಹಾಸ ಅಡ್ಯಂತಾಯ, ಮೊಗವೀರಸಮಾಜ ಉಳ್ಳಾಲದ ಅಧ್ಯಕ್ಷ ಭರತ್ ಕುಮಾರ್ ಉಳ್ಳಾಲ್, ಉಳ್ಳಾಲ ವಿದ್ಯಾರಣ್ಯ ಕಲಾವೃಂದದ ಅಧ್ಯಕ್ಷ ಚೂಡಪ್ಪ ಉಳ್ಳಾಲ್, ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ, ನಿವೃತ್ತ ಸೇನಾನಿ ಶಂಕರ್, ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷ ಯಶವಂತ ಅಮೀನ್, ಪ್ರೇಮನಾಥ ಪುತ್ರನ್, ಜಿಲ್ಲಾ ಮೀನುಗಾರರ ಪ್ರಕೋಷ್ಠದ ಉಪಾಧ್ಯಕ್ಷ ಹಾಗೂ ಮಾಜಿ ನಗರಸಭೆ ಸದಸ್ಯೆ ದಯಾನಂದ ತೊಕ್ಕೊಟ್ಟು, ಬಿಜೆಪಿ ಮಂಗಳೂರು ವಿಧಾನಸಭಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಶ್ರಫ್ ಹರೇಕಳ, ಉಳ್ಳಾಲ ನಗರಸಭೆ ವಿರೋಧ ಪಕ್ಷದ ನಾಯಕಿ ಮಹಾಲಕ್ಷ್ಮಿ, ನಗರಸಭೆ ಸದಸ್ಯೆ ಸೂರ್ಯಕಲ, ಚಂದ್ರಹಾಸ್ ಪಂಡಿತ್ ಹೌಸ್ , ಬೃಜೇಶ್ ನಾಯರ್, ಪ್ರಕಾಶ್ ಉಳ್ಳಾಲ್, ಉಳ್ಳಾಲದ ರಿಕ್ಷಾ ಚಾಲಕ ಹಾಗೂ ಮಾಲಕರ ಸಂಘದ ಅಧ್ಯಕ್ಷ ದಾಮೋದರ್ ಶೆಟ್ಟಿಗಾರ್ , ಪ್ರವೀಣ್.ಯಸ್ .ಕುಂಪಲ, ಬಿಎಂಎಸ್ ಮುಖಂಡ ಪುರುಷೋತ್ತಮ ಕಲ್ಲಾಪು, ರಾಜೇಶ್ ಗಟ್ಟಿ ಮುಂಡೋಳಿ, ಕಿರಣ್ ಶೆಟ್ಟಿ, ಹಿತೇಶ್ ಉಳ್ಳಾಲಬೈಲ್, ಬಾಲಕೃಷ್ಣ ಶೆಟ್ಟಿ ಉಳ್ಳಾಲಗುತ್ತು, ಕಿಶೋರ್ ಪುತ್ರನ್, ರಾಜೇಶ್. ಯು.ಬಿ, ಭಗತ್ ಸಿಂಗ್ ಪ್ರತಿಷ್ಠಾನದ ಕೃಷ್ಣ ತೊಕ್ಕೊಟ್ಟು, ಹರೀಶ್ ಅಂಬ್ಲಮೊಗರು, ಗೋಪಿನಾಥ್ ಬಗಂಬಿಲ ಉಪಸ್ಥಿತರಿದ್ದರು.
ಜೀವನ್ ಕೆರೆಬೈಲು ಕಾರ್ಯಕ್ರಮ ನಿರೂಪಿಸಿದರು. ದಯಾನಂದ ತೊಕ್ಕೊಟ್ಟು ವಂದಿಸಿದರು.