Site icon Ullalavani

ಐದು ದಿನಗಳ ಕಾಲ ನೇತ್ರಾವತಿಯ ನೂತನ ಸೇತುವೆ ಬಂದ್

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ 66ರ ನೇತ್ರಾವತಿ ಹಳೆ ಸೇತುವೆಯ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ಮುಂದಿನ ಐದು ದಿನಗಳ ಕಾಲ ನೇತ್ರಾವತಿಯ ನೂತನ ಸೇತುವೆಯನ್ನು ಲೋಡ್ ಟೆಸ್ಟಿಂಗ್‍ಗಾಗಿ ವಾಹನ ಸಂಚಾರಕ್ಕೆ ಸ್ಥಗಿತಗೊಳಿಸಲಾಗುವುದು ಎಂದು ಹೆದ್ದಾರಿ ಕಾಮಗಾರಿ ವಹಿಸಿರುವ ಸಂಸ್ಥೆ ಪ್ರಕಟನೆಯಲ್ಲಿ ತಿಳಿಸಿದೆ.

ಹೆದ್ದಾರಿಯ ಹಳೆ ಸೇತುವೆಯಲ್ಲಿ ಮುಂದಿನ ಐದು ದಿನಗಳ ಕಾಲ ದ್ವಿಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಐದು ದಿನಗಳೊಳಗಾಗಿ ನೂತನ ಸೇತುವೆಯ ಲೋಡ್ ಟೆಸ್ಟಿಂಗ್ ಕಾರ್ಯವನ್ನು ಮುಗಿಸಲಾಗುವುದು ಬಳಿಕ ವಾಹನ ಸಂಚಾರಕ್ಕೆ ತೆರವುಗೊಳಿಸಲಾಗುವುದು. ಈ ಸಂದರ್ಭದಲ್ಲಿ ವಾಹನಗಳು ಅಡ್ಡಾದಿಡ್ಡಿ ಚಲಿಸದೆ 30 ಕಿ.ಮೀ. ವೇಗ ಮಿತಿಯಲ್ಲಿ ಚಲಿಸಿದರೆ ಹೆದ್ದಾರಿಯಲ್ಲಿ ಸುಗಮ ಸಂಚಾರ ನಡೆಸಬಹುದು ಎಂದು ಹೆದ್ದಾರಿ ನಿರ್ಮಾಣದ ಕಾರ್ಯ ನಡೆಸುತ್ತಿರುವ ಸಂಸ್ಥೆಯ ಮುಖ್ಯಸ್ಥರಾದ ದಿನಕರ್ ತಿಳಿಸಿದ್ದಾರೆ.

Exit mobile version