Site icon Ullalavani

ಜು. 24:ಆಟಿ ಸಮ್ಮನ ಮತ್ತು ಆಟಿದ ವನಸ್ ತೆನಸ್ ಕಾರ್ಯಕ್ರಮ

ಉಳ್ಳಾಲ ನ್ಯೂಸ್ ನೆಟ್ ವರ್ಕ್

ಕುಂಪಲ: ಕುಂಪಲ ಕೇಸರಿ ಮಿತ್ರವೃಂದ ಮತ್ತು ಕೇಸರಿ ಮಾತೃ ಮಂಡಳಿಯ ವತಿಯಿಂದ ಆಟಿ ಸಮ್ಮನ ಮತ್ತು ಆಟಿದ ವನಸ್ ತೆನಸ್ ಕಾರ್ಯಕ್ರಮ ಜು. 24ರಂದು ಆದಿತ್ಯವಾರ ಬೆಳಿಗ್ಗೆ 10 ಗಂಟೆಗೆ ಕೇಸರಿ ಸಭಾ ಭವನದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಉಮೇಶ್ ಗಾಂಬೀರ್ ಬಲ್ಯ ಬಾಳಿಕೆ ಕೃಷಿಕೆರೆ ಅವರು ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಬು ಶ್ರೀ ಶಾಸ್ತ ಕಿನ್ಯಾ ವಹಿಸಲಿದ್ದು , ಹೊಸದಿಗಂತ ಪತ್ರಿಕೆಯ ಹಿರಿಯ ಪತ್ರಕರ್ತ ಗುರುವಪ್ಪ ಬಾಳೆಪುಣಿ ತುಳು ಮದಿಪು ನೀಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಬೆಂಗಳೂರು ಕರ್ನಾಟಕ ರಾಜ್ಯ ಕೈಗಾರಿಕಾ ಸರಬರಾಜು ಮತ್ತು ಮಾರಾಟ ಮಹಾ ಮಂಡಲದ ಉಪಾಧ್ಯಕ್ಷ ಮಯೂರ್ ಉಳ್ಳಾಲ್, ಮಂಗಳೂರು ರೋಟರಿ ಕ್ಲಬ್ ಅಧ್ಯಕ್ಷ ವೆಂಕಟೇಶ್ ಪೈ, ಕೇಸರಿ ಮಾತೃಮಂಡಳಿ ಗೌರವ ಸಲಹೆಗಾರರಾದ ಜಯಲಕ್ಷ್ಮೀ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Exit mobile version