Site icon Ullalavani

ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ವಿಕಾಸ ಪರ್ವ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಬೋಳಿಯಾರ್‍: ಬಲಿಷ್ಠ ರಾಷ್ಟ್ರವನ್ನು ಕಟ್ಟುವ ಜನರ ಕನಸ್ಸನ್ನು ಮೋದಿ ನೇತೃತ್ವದ ಕೇಂದ್ರ ಸರಕಾರ ನನಸು ಮಾಡುತ್ತಿದ್ದು, ದೇಶದ ಅಭಿವೃದ್ಧಿಯ ಜೊತೆಗೆ ಅಂತರಾಷ್ಟ್ರೀಯ ಸಂಬಂಧಗಳನ್ನು ಬೆಳೆಸುವ ಮೂಲಕ ದೇಶದ ಕೀರ್ತಿಯನ್ನು ಉತ್ತುಂಗಕ್ಕೆ ಏರಿಸುತ್ತಿದ್ದಾರೆ ಎಂದು ಸಂಸದ ನಳಿನ್‍ಕುಮಾರ್ ಕಟೀಲ್ ಹೇಳಿದರು.

ಅವರು ಬೋಳಿಯಾರ್‍ನಲ್ಲಿ ಭಾನುವಾರ ನಡೆದ ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ವಿಕಾಸ ಪರ್ವ ಹಾಗೂ ಮಂಗಳೂರು ವಿಧಾನಸಭಾ ಕ್ಷೇತ್ರದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮಲ್ಲಿಕಾರ್ಜುನ ಖರ್ಗೆಯವರು ಸಭೆಯೊಂದರಲ್ಲಿ ಮೂಢನಂಬಿಕೆಯ ಹೆಸರಿನಲ್ಲಿ ನರಬಲಿ ನಡೆಯುತ್ತಿದೆ ಎಂದು ಹೇಳಿದ್ದರು. ಕಾಂಗ್ರೆಸ್ ಸರಕಾರ ನರಬಲಿಯ ಮೂಲಕ ರಾಜ್ಯವನ್ನು ಹದಗೆಡಿಸುತ್ತಿದೆ. ಜಪಾನ್‍ಗೆ ಭಗವದ್ಗೀತೆಯ ಚಿಂತನೆ ಹಾಗೂ ಅರಬ್ ರಾಷ್ಟ್ರದಲ್ಲಿ ದೇವಸ್ಥಾನ ಕಟ್ಟುವ ಮೂಲಕ ವಿದೇಶಗಳಲ್ಲಿ ದೇಶದ ಸಂಸ್ಕøತಿ ಹಾಗೂ ಸಂಬಂಧವನ್ನು ಬೆಸೆಯುವಂತೆ ಮಾಡಿದ್ದಾರೆ. ಆದ್ದರಿಂದ ಪಕ್ಷದ ಸಾಧನೆಯಿಂದ ದೇಶ ಬೆಳೆಯಬೇಕು ಎನ್ನುವುದೇ ಬಿಜೆಪಿಯ ಗುರಿ ಎಂದರು.

ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಮಾತನಾಡಿ ಮಂಗಳೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ ಸಂತೋಷ್‍ಕುಮಾರ್ ಬೋಳಿಯಾರ್ ಅಧಿಕಾರ ವಹಿಸಿ ದೊಡ್ಡ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಇನ್ನು ಈ ಕ್ಷೇತ್ರದಲ್ಲಿ ಉತ್ತಮ ಕಾರ್ಯ ಮಾಡುವ ಮೂಲಕ ಜನಪರ ಕಾಳಜಿ ವಹಿಸಿ ಸಚಿವ ಖಾದರ್‍ರವರನ್ನು ಮಾಜಿ ಸಚಿವ ಆಗುವ ಜತೆಗೆ ಮಾಜಿ ಶಾಸಕ ಮಾಡುವ ಕೆಲಸವನ್ನು ಮಾಡಬೇಕು. ಇದಕ್ಕೆ ಸಮಿತಿಯಲ್ಲಿರುವ ಎಲ್ಲಾ ಪದಾಧಿಕಾರಿಗಳು ಕೈಜೋಡಿಸಿಕೊಂಡು ಕೆಲಸ ಮಾಡಬೇಕು ಎಂದು ತಿಳಿಸಿದರು.

ಸಭಾಧ್ಯಕ್ಷ ವಹಿಸಿಕೊಂಡಿದ್ದ ಮಂಗಳೂರು ವಿಧಾನಸಭಾ ಕ್ಷೇತ್ರದ ನೂತನ ಅಧ್ಯಕ್ಷರಾದ ಸಂತೋಷ್ ಕುಮಾರ್ ಬೋಳಿಯಾರ್ ಮಾತನಾಡಿ, ನನಗೆ ದೊಡ್ಡದೊಂದು ಜವಾಬ್ದಾರಿಯನ್ನು ಬಿಜೆಪಿ ಪಕ್ಷದ ಹಿರಿಯ ಮುಖಂಡರು ನೀಡಿದ್ದಾರೆ. ಅದನ್ನು ಉತ್ತಮ ರೀತಿಯಲ್ಲಿ ಮಾಡುವ ಮೂಲಕ ಪಕ್ಷವನ್ನು ಬೆಳೆಸುವ ಕಾರ್ಯವನ್ನು ಖಂಡಿತಾ ಮಾಡುತ್ತೇನೆ ಎಂದರು.
ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್, ಬಿಜೆಪಿ ದ.ಕ.ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ ಕೆ. ಜಯರಾಮ ಶೆಟ್ಟಿ, ರುಕ್ಮಯ ಪೂಜಾರಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಮೀನಾಕ್ಷಿ ಶಾಂತಿಗೋಡು, ರಾಜ್ಯಕಾರ್ಯಕಾರಿಣಿ ಸದಸ್ಯರಾದ ಅನ್ವರ್ ಮಾಣಿಪ್ಪಾಡಿ, ರವೀಂದ್ರ ಶೆಟ್ಟಿ ಉಳಿದೊಟ್ಟು ಹರೇಕಳ, ಜಿಲ್ಲಾ ಉಪಾಧ್ಯಕ್ಷರಾದ ಚಂದ್ರಹಾಸ್ ಉಳ್ಳಾಲ್, ರವಿಶಂಕರ ಮಿಜಾರು, ಪ್ರ. ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ಉಮಾನಾಥ ಕೋಟ್ಯಾನ್,ಕಿಶೋರ್‍ರೈ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನೂತನ ಸಮಿತಿಯ ಉಪಾಧ್ಯಕ್ಷರಾಗಿ ಯಶವಂತ ಅಮೀನ್. ಮೋಹನ್‍ದಾಸ್ ಶೆಟ್ಟಿ , ಪ್ರಕಾಶ್ ಸಿಂಪೆÇೀನಿ, ಪ್ರವೀಣ್ ಶೆಟ್ಟಿ ಪುದು, ಹರಿಯಪ್ಪ ಸಾಲಿಯಾನ್, ಜಯಶ್ರೀ ಕರ್ಕೇರ, ಕಾರ್ಯದರ್ಶಿಗಳಾಗಿ ಗೋಪಾಲ್ ಅಶ್ವತ್ತಡಿ, ಶಕಿಲಾ ಜನಾರ್ಧನ ಕುಲಾಲ್, ರಾಮಕೃಷ್ಣ ಅಸೈಗೋಳಿ, ಲೋಲಾಕ್ಷಿ ಆಚಾರ್ಯ, ವೇದಾವತಿ ಗಟ್ಟಿ, ಹೇಮಂತ್ ಶೆಟ್ಟಿ, ಕೋಶಾ„ಕಾರಿಯಾಗಿ ಮಯೂರ್ ಉಳ್ಳಾಲ್, ಯುವ ಮೋರ್ಚಾದ ಅಧ್ಯಕ್ಷ ಸುಜಿತ್ ಮಾಡೂರು, ಪ್ರ. ಕಾರ್ಯದರ್ಶಿ ಸಚಿನ್ ಶೆಟ್ಟಿ ಸಾಂತ್ಯಗುತ್ತು ಅವರನ್ನು ಗೌರವಿಸಲಾಯಿತು.
ಬಿಜೆಪಿ ಹಿರಿಯ ಮುಖಂಡ ಟಿ.ಜಿ.ರಾಜಾರಾಮ ಭಟ್ ಸ್ವಾಗತಿಸಿದರು. ಜಿಲ್ಲಾ ಮುಖಂಡರಾದ ರಾಜೇಶ್ ಶೆಟ್ಟಿ ಪಜೀರು ಗುತ್ತು ಕಾರ್ಯಕ್ರಮ ನಿರ್ವಹಿಸಿದರು. ಪ್ರ.ಕಾರ್ಯದರ್ಶಿಗಳಾದ ಮೋಹನ್‍ರಾಜ್ ಕೆ.ಆರ್. ವಂದಿಸಿದರು.

Exit mobile version