ಮಂಗಳೂರು ಕ್ಷೇತ್ರದ 25 ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ : ಖಾದರ್
UllalaVani
ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಮಂಗಳೂರು ಕ್ಷೇತ್ರದ 25 ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಶೀಘ್ರವೇ ಸ್ಥಾಪಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಅವರು ಇನೋಳಿ ದೇವಂದಬೆಟ್ಟುವಿನ ಶ್ರೀ ಸೋಮನಾಥ ದೇವಸ್ಥಾನಕ್ಕೆ ಹೋಗುವ ಕಾಂಕ್ರೀಟಿಕರಣ ರಸ್ತೆ ಹಾಗೂ ಇನೋಳಿ ಸಂಪರ್ಕಿಸುವ ರಸ್ತೆಯ ಡಾಮರೀಕರಣವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಕ್ಷೇತ್ರದ ಜನರ ಆರೋಗ್ಯ ಉತ್ತಮವಾಗಿ ಇಡುವ ನಿಟ್ಟಿನಲ್ಲಿ ಶುದ್ಧ ಕುಡಿಯುವ ನೀರಿನ ಯೋಜನೆಯನ್ನು ಸರಕಾರ ಕಲ್ಪಿಸಿದ್ದು, ಈ ನಿಟ್ಟಿನಲ್ಲಿ ಕ್ಷೇತ್ರದ 25 ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಲಾಗುವುದು. ಅತೀ ಶೀಘ್ರದಲ್ಲೇ ಪಾವೂರು ಪಂಚಾಯಿತಿ ವ್ಯಾಪ್ತಿಯಲ್ಲೂ ಘಟಕವನ್ನು ಸ್ಥಾಪಿಸಿ 20 ಲೀ. ನೀರಿಗೆ 10 ರೂ. ನಂತೆ ಪಡೆದುಕೊಳ್ಳಲಾಗುವುದು. ಇದರ ಸದುಪಯೋಗವನ್ನು ಜನರು ಪಡೆದುಕೊಳ್ಳಬಹುದು ಎಂದ ಅವರು ಮಂಗಳೂರು ಕ್ಷೇತ್ರಾದ್ಯಂತ ಬಹುತೇಕ ರಸ್ತೆಗಳನ್ನು ವಿವಿಧ ಯೋಜನೆಗಳಡಿ ಬರುವ ಅನುದಾನಗಳ ಮೂಲಕ ಕಾಂಕ್ರೀಟಿಕರಣ ಹಾಗೂ ಡಾಮರೀಕರಣವನ್ನು ಮಾಡಲಾಗಿದೆ. ಬಹಳ ವರ್ಷಗಳಿಂದ ನಾದುರಸ್ತಿಯಲ್ಲಿದ್ದ ಇನೋಳಿ ದೇವಸ್ಥಾನದ ರಸ್ತೆಯನ್ನು ಕೆಲ ಸಮಸ್ಯೆಗಳಿಂದ ಕಾಂಕ್ರೀಟಿಕರಣಗೊಳಿಸಲು ಅಸಾಧ್ಯವಾಗಿತ್ತು. ಆಧರೆ ಇಲ್ಲಿನ ಪಂಚಾಯಿತಿ ಸದಸ್ಯರುಗಳ ಸತತ ಪ್ರಯತ್ನದಿಂದ ಕಾಂಕ್ರೀಟಿಕರಣ ಯಶಸ್ವಿಯಾಗಿ ನಡೆದಿದೆ ಎಂದರು.
ಈ ಸಂದರ್ಭ ಈ ಸಂದರ್ಭ ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್, ಪಾವೂರು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಫಿರೋಜ್, ಉಪಾಧ್ಯಕ್ಷೆ ಲೀಲಾವತಿ, ಸದಸ್ಯರುಗಳಾದ ಚೆನ್ನಮ್ಮ, ವಾಮನ ಸಫಲಿಗ, ಮಹಮ್ಮದ್, ಅಬ್ದುಲ್ ಮಜೀದ್, ಪ್ರಭಾಕರ್, ವಿವೇಕ್, ಮೊದಲಾದವರು ಉಪಸ್ಥಿತರಿದ್ದರು.