ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಪ್ರತಿಯೊಂದು ಧರ್ಮವೂ ಸಮಾಜದಲ್ಲಿ ಶಾಂತಿ ಸಾಮರಸ್ಯ ಬಯಸುತ್ತದೆ. ಸ್ವಧರ್ಮವನ್ನು ಪ್ರೀತಿಸುತ್ತಾ ಇತರ ಧರ್ಮಗಳನ್ನು ಗೌರವಿಸುವ ಮೂಲಕ ಸಮಾಜದಲ್ಲಿ ಸನ್ನಡತೆಯ ಬಾಳು ಬಾಳುತ್ತಾ ಇತರರಿಗೆ ಮಾದರಿಯಾಗಬೇಕು ಎಂದು ಆಹಾರ ಮತ್ತು ನಾಗರಿಕೆ ಪೂರೈಕೆ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ಅವರು ಈದುಲ್ ಫಿತರ್ ಪ್ರಯುಕ್ತ ಬುಧವಾರ ಉಳ್ಳಾಲ ದರ್ಗಾದಲ್ಲಿ ವಿಶೇಷ ಪ್ರಾರ್ಥನೆಯಲ್ಲಿ ಭಾಗವಹಿಸಿ ಮಾತನಾಡಿದರು.
ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಮಾತನಾಡಿ ಇಸ್ಲಾಂ ಒಂದು ಶ್ರೇಷ್ಠ ಧರ್ಮವಾಗಿದ್ದು ಅದರದ್ದೇ ಆದ ಧಾರ್ಮಿಕ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇತರ ಧರ್ಮೀಯರನ್ನು ಮತಾಂತರ ಮಾಡುವ ಅಗತ್ಯ ಇಸ್ಲಾಂಗೆ ಇಲ್ಲ. ಹಾಗೆಯೇ ಧರ್ಮವಿರೋಧಿ ಕೃತ್ಯವಾದ ಭಯೋತ್ಪಾದನೆಗೆ ಇಸ್ಲಾಂ ಎಂದೂ ಪೆÇ್ರೀತ್ಸಾಹಿಸದು . ಯಾವುದೇ ಸಂಘಟನೆಗಳು ಅಲ್ಲಾಹುವಿನ ಭವನದಲ್ಲಿ ಬೇಡ. ಧಾರ್ಮಿಕ ಕಾರ್ಯಗಳು ಬಹಳ ಸೂಕ್ಷ್ಮವಾಗಿದ್ದು ಎಲ್ಲೂ ಕೂಡಾ ಚ್ಯುತಿ ಬಾರದಂತೆ ನೋಡಿಕೊಳ್ಳಬೇಕಾದ ಜವಬ್ದಾರಿ ನಮ್ಮೆಲ್ಲರ ಮೇಲಿದೆ. ಸಂಘಟನೆಗಳಿಂದ ನಡೆಯುವ ಒಳ್ಳೆಯ ಕಾರ್ಯಗಳು ಸಮುದಾಯದ ಅಭಿವೃದ್ಧಿಗೆ ಪೂರಕವಾಗಿ ಇತರ ಭಾಗದಲ್ಲಿ ನಡೆಯಲಿ. ಯಾವುದೇ ಸಂಘಟನೆಗಳಿಂದ ಸಮುದಾಯ, ಸಮಾಜವನ್ನು ಒಂದುಗೂಡಿಸುವ ಪರಸ್ಪರ ಸಾಮರಸ್ಯವನ್ನು ಸಹೋದರತೆಯನ್ನು ಬೆರೆಯಲು ಪೂರಕವಾದ ವಾತಾವರಣ ನಿರ್ಮಾಣವಾಗಬೇಕು ಎಂದರು.
ಉಪಾಧ್ಯಕ್ಷರುಗಳಾದ ಯು.ಕೆ. ಮೋನು ಕೋಟೆಪುರ ಹಾಗೂ ಬಾವಾ ಮುಹಮ್ಮದ್ ಮದನಿ ನಗರ, ಪ್ರಧಾನ ಕಾರ್ಯದರ್ಶಿ ಹಾಜಿ ತ್ವಾಹಾ ಮುಹಮ್ಮದ್ ಹಳೆಕೋಟೆ, ಜೊತೆ ಕಾರ್ಯದರ್ಶಿ ನೌಷಾದ್ ಮೇಲಂಗಡಿ, ಕೋಶಾಧಿಕಾರಿ ಯು.ಕೆ. ಇಲ್ಯಾಸ್ ಉಳ್ಳಾಲ ಪೇಟೆ, ಲೆಕ್ಕ ಪರಿಶೋಧಕ ಯು.ಟಿ.ಇಲ್ಯಾಸ್ ತೋಟ, ಉಳ್ಳಾಲ ನಗರಸಭೆಯ ಅಧ್ಯಕ್ಷ ಹುಸೈನ್ ಕುಂಞಮೋನು, ದರ್ಗಾ ಸದಸ್ಯ ಫಾರೂಕ್ ಉಳ್ಳಾಲ್, ಆಸಿಫ್ ಅಬ್ದುಲ್ಲ ಮೇಲಂಗಡಿ, ಹಮೀದ್ ಕೋಡಿ, ಅಬ್ದುಲ್ ರಹ್ಮಾನ್ ಅದ್ದ ಕೋಟೆಪುರ, ಮುಸ್ತಫಾ ಮಂಚಿಲ, ತಂಝಿಲ್ ಮುಕ್ಕಚ್ಚೇರಿ, ಮುಹಮ್ಮದ್ ಹಾಜಿ ಹಳೆಕೋಟೆ, ಮೊಯ್ದಿನಬ್ಬ ಆಝಾದ್ ನಗರ, ಅಬೂಬಕ್ಕರ್ ಕೋಟೆಪುರ, ಮಾಜಿ ಸದಸ್ಯ ಮುಸ್ತಫಾ, ಅಯ್ಯೂಬ್ ಉಳ್ಳಾಲ, ಕಬೀರ್ ಚಾಯಬ್ಬ, ಎ.ಎ. ಖಾದರ್ ಹಾಜಿ, ಯು.ಎಚ್. ಅಹ್ಮದ್, ಪುರಸಭೆಯ ಮಾಜಿ ಅಧ್ಯಕ್ಷ ಬಾಜಿಲ್ ಡಿಸೋಜ ಉಪಸ್ಥಿತರಿದ್ದರು.