Site icon Ullalavani

ತೊಕ್ಕೊಟ್ಟು: ಟಯರ್ ಅಂಗಡಿ ಬೆಂಕಿಗೆ ಆಹುತಿ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ತೊಕ್ಕೊಟ್ಟು: ತೊಕ್ಕೊಟ್ಟು ಜಂಕ್ಷನಿನಲ್ಲಿರುವ ಆರ್.ಇ.ಬಿ.ಕಾಂಪ್ಲೆಕ್ಸ್ ಸಮೀಪದ ಕಾಂಪೌಂಡಿನಲ್ಲಿದ್ದ ಟಯರ್ ಅಂಗಡಿಯೊಂದು ಬೆಂಕಿಗೆ ಆಹುತಿಯಾದ ಘಟನೆ ಗುರುವಾರ ಸಂಜೆ ಸಂಭವಿಸಿದೆ.

ತೊಕ್ಕೊಟ್ಟು ಜಂಕ್ಷನಿನಲ್ಲಿರುವ ಅಬ್ದುಲ್ ರೆಹಮಾನ್ ಎಂಬವರಿಗೆ ಸೇರಿದ ಟಯರ್ ಅಂಗಡಿಯಲ್ಲಿ ದುರಂತ ಸಂಭವಿಸಿದೆ.

ಘಟನೆಯಿಂದಾಗಿ ಇಡೀ ಜಂಕ್ಷನ್‍ನಲ್ಲಿ ಹೊಗೆ ತುಂಬಿ ಕತ್ತಲ ವಾತಾವರಣ ನಿರ್ಮಾಣವಾಗಿತ್ತು. ಸಂಜೆ ಸುಮಾರಿಗೆ ಆಕಸ್ಮತಾಗಿ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಬೆಂಕಿಯ ಜ್ವಾಲೆ ಎತ್ತರಕ್ಕೆ ಉರಿದು ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಿಸಿತ್ತು.

ಈ ವೇಳೆ ಅಂಗಡಿಯೊಳಗಿದ್ದ ಟಯರ್, ಟಯರ್ ರಿಸೋಲ್ವಿಂಗ್ ಯಂತ್ರ ಬೆಂಕಿಗೆ ಆಹುತಿಯಾಗಿದ್ದು ಲಕ್ಷಾಂತರ ರೂ.ನಷ್ಟ ಸಂಭವಿಸಿರಬಹುದೆಂದು ಆಂದಾಜಿಸಲಾಗಿದೆ. ಅಂಗಡಿಯೊಳಗೆ ಯಾರು ಇಲ್ಲದೇ ಇರುವುದರಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲ.

ಸಮೀಪದಲ್ಲೇ ಡಿಸೇಲ್ ಜನರೇಟರ್, ವಾಣಿಜ್ಯ ಕಟ್ಟಡ, ಗೂಡಂಗಡಿಗಳಿದೆ. ಆದರೆ ಅಗ್ನಿಶಾಮಕ ದಳದ ಸಕಾಲಿಕ ಆಗಮನದಿಂದ ನಡೆಯುತ್ತಿದ್ದ ದೊಡ್ಡ ದುರಂತ ತಪ್ಪಿದೆ. ಅಗ್ನಿಶಾಮಕ ದಳದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನೆಯಿಂದಾಗಿ ನೂರಕ್ಕೂ ಅಧಿಕ ಕೂತೂಹಲಿಗರು ಸ್ಥಳದಲ್ಲಿ ಜಮಾಯಿಸಿದ್ದಾರಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಸಮಯ ವಾಹನಸಂಚಾರಕ್ಕೆ ಅಡ್ಡಿಯುಂಟಾಯಿತು. ಉಳ್ಳಾಲ ಪೊಲೀಸರು ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಬೆಂಕಿ ಅಕಸ್ಮಿಕವಾಗಿ ತಗಲಿರುವುದೇ ಅಥವಾ ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ಇನ್ನಷ್ಟೇ ತನಿಖೆ ನಡೆಸಬೇಕಿದೆ.

Exit mobile version