Site icon Ullalavani

ತೊಕ್ಕೊಟ್ಟು:ವಾಹನ ಸಂಚಾರ ಅಸ್ತವ್ಯಸ್ತ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ತೊಕ್ಕೊಟ್ಟು: ಪಿಕಪ್ ವಾಹನದ ಟಯರ್ ಕಳಚಿದ ಪರಿಣಾಮ ಅರ್ಧತಾಸು ವಾಹನ ಸಂಚಾರಕ್ಕೆ ಅಡ್ಡಿಯುಂಟಾದ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಮಂಗಳವಾರ ಸಂಜೆ ನಡೆಯಿತು.

ಮಂಗಳೂರಿನಿಂದ ತಲಪಾಡಿ ಕಡೆಗೆ ಇಂಟರ್‍ಲಾಕ್ ಹೇರಿಕೊಂಡು ಸಾಗುತ್ತಿದ್ದ ಪಿಕಪ್ ವಾಹನದ ಟಯರ್ ತೊಕ್ಕೊಟ್ಟು ಜಂಕ್ಷನ್‍ನಲ್ಲಿನ ರಾ.ಹೆ.ಯಲ್ಲಿ ಕಳಚಿತು.

ಪರಿಣಾಮ ಪಿಕಪ್ ವಾಹನ ರಸ್ತೆಯಲ್ಲೇ ಉಳಿದು , ಫ್ಲೈಓವರ್ ಕಾಮಗಾರಿ ಹಿನ್ನೆಲೆಯಲ್ಲಿ ರಾ.ಹೆ.ಯಲ್ಲಿ ರಸ್ತೆ ಕಿರಿದಾಗಿದ್ದು, ಅಧಿಕ ವಾಹನ ಸಂಚಾರವಿರುವ ಪ್ರದೇಶದಲ್ಲಿ ಆಗಾಗ ಸಂಚಾರಕ್ಕೆ ಅಡ್ಡಿಯುಂಟಾಗುತ್ತಿತ್ತು. ಮಂಗಳವಾರ ಸಂಜೆ ವೇಳೆ ಪಿಕಪ್ ವಾಹನದ ಕೆಟ್ಟು ನಿಂತ ಪರಿಣಾಮದಿಂದ ಒಂದು ತಾಸು ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿ ಎರಡು ಕಿ.ಮೀ ದೂರವನ್ನು ತಲುಪಲು ವಾಹನ ಸವಾರರಿಗೆ ಅರ್ಧ ತಾಸು ಬೇಕಾಯಿತು. ಬಳಿಕ ಉಳ್ಳಾಲ ಪೊಲೀಸರು ಕ್ರೇನ್ ಮೂಲಕ ಪಿಕಪ್ ವಾಹನವನ್ನು ಮೇಲಕ್ಕೆತ್ತುವ ಮೂಲಕ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Exit mobile version