ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ದ.ಕ. ಜಿಲ್ಲೆಯ ಅಜ್ಮೀರ್ ಎಂದು ಖ್ಯಾತಿ ಪಡೆದಿರುವ ಉಳ್ಳಾಲ ದರ್ಗಾ ಅಧ್ಯಕ್ಷರ ಆಯ್ಕೆಯ ವಿಚಾರದಲ್ಲಿ ಎರಡು ಪಂಗಡಗಳ ನಡುವೆ ವಾಗ್ದಾಳಿ ನಡೆದು ತಾರಕಕ್ಕೇರಿ ದರ್ಗಾ ಕಚೇರಿಗೆ ವಕ್ಫ್‍ಬೋರ್ಡ್ ಬೀಗ ಜಡಿದ ಘಟನೆ ಗುರುವಾರ ರಾತ್ರಿ ನಡೆದಿದೆ.
ಘಟನೆಯ ವಿವರ:
ಉಳ್ಳಾಲ ದರ್ಗಾ ಸಮಿತಿಯ ನೂತನ ಸದಸ್ಯರ ಸಭೆಯನ್ನು ಮಂಗಳವಾರ ಕರೆಯಲಾಗಿತ್ತು. ಮಂಗಳವಾರ ಒಂದು ಪಂಗಡದ ಸದಸ್ಯರು ಹಾಜರಾದರೆ, ಉಳ್ಳಾಲ ಖಾಝಿ, ಮಾಜಿ ಅಧ್ಯಕ್ಷ ಹಂಝ ಸೇರಿದಂತೆ ಹಲವು ಮಂದಿ ಗೈರುಹಾಜರಾಗಿದ್ದರು. ಇದರಿಂದ ಬೇಸತ್ತ ಸಭೆ ಸೇರಿದ ಸದಸ್ಯರು ಅಬ್ದುಲ್ ರಶೀದ್‍ರವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದರು. ಬಳಿಕ ಅದೇ ದಿನ ಸಂಜೆ ಉಳ್ಳಾಲ ಖಾಝಿಯವರ ನೇತೃತ್ವದಲ್ಲಿ ಸಭೆ ಸೇರಿದ ಉಳಿದ ಸದಸ್ಯರು ಬುಖಾರಿಯವರನ್ನು ಅಧ್ಯಕ್ಷರನ್ನಾಗಿ ಆರಿಸಿದ್ದರು. ಆದರೆ ಅಬ್ದುಲ್ ರಶೀದ್‍ರವರು ಅಧ್ಯಕ್ಷರ ಕುರ್ಚಿ ಬಿಟ್ಟು ಕೊಡಲು ನಿರಾಕರಿಸಿದ್ದು, ನನಗೆ ಸ್ಪಷ್ಟ ಬಹುಮತವಿದ್ದು, ಬಹುಮತದಿಂದ ಆಯ್ಕೆಯಾಗಿದ್ದೇನೆ ಎಂದಿದ್ದರು.
ಸಚಿವರ ತಾಯಿಯ ಖಬರ್ ಗೋರಿಯನ್ನು ಕೆಡವಿದ ದುಷ್ಕರ್ಮಿಗಳು
ಮಾಜಿ ಶಾಸಕ ದಿ. ಯು.ಟಿಫರೀದ್ ಅವರ ಧರ್ಮಪತ್ನಿ ಹಾಗೂ ಹಾಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅವರ ತಾಯಿ ದಿ.ಯು.ಟಿ.ನಸೀಮಾ ಅವರ ಉಳ್ಳಾಲ ದರ್ಗಾ ವಠಾರದಲ್ಲಿದ್ದ ಖಬರ್ ಗೋರಿಯನ್ನು ದುಷ್ಕರ್ಮಿಗಳ ಗುಂಪೊಂದು ಕೆಡವಿದೆ. ದರ್ಗಾ ಅಧ್ಯಕ್ಷರ ವಿವಾದಕ್ಕೆ ಸಂಬಂಧಿಸಿ ಗುಂಪೊಂದು ಈ ಕೃತ್ಯ ಎಸಗಿರುವುದಾಗಿ ತಿಳಿದುಬಂದಿದೆ.