ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ದೇರಳಕಟ್ಟೆ: ದಂತ ವೈದ್ಯಕೀಯ ಶಿಕ್ಷಣದಲ್ಲಿ ಹೊಸ ಹೊಸ ತಂತ್ರe್ಞÁನಗಳು, ಕೋರ್ಸ್‍ಗಳ ಮೂಲಕ ದಂತ ವೈದ್ಯರಿಗೆ ಮಾರ್ಗದರ್ಶನ ನೀಡುವ ಕಾರ್ಯಗಳು ನಡೆಯುತ್ತಿದೆ, ಓರಲ್ ಇಂಪ್ಲಾಂಟೋಲೋಜಿಯಂತಹ ವಿಶೇಷ ಸರ್ಟಿಫಿಕೆಟ್ ಕೋರ್ಸ್‍ನಂತಹ ಶೈಕ್ಷಣಿಕ ತರಬೇತಿಯನ್ನು ಎಲ್ಲಾ ವಿಭಾಗಗಳು ನಡೆಸಲು ಮುಂದೆ ಬರಬೇಕು ಇದಕ್ಕೆ ನಿಟ್ಟೆ ವಿಶ್ವವಿದ್ಯಾನಿಲಯ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ಧವಿದೆ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಉಪಕುಲತಿ ಪ್ರೊ| ರಮಾನಂದ ಶೆಟ್ಟಿ ಅಭಿಪ್ರಾಯಪಟ್ಟರು.
ದೇರಳಕಟ್ಟೆಯ ಎ.ಬಿ.ಶೆಟ್ಟಿ ಮೆಮೋರಿಯಲ್ ಇನ್‍ಸ್ಟಿಟ್ಯೂಟ್ ಆಫ್ ಡೆಂಟರ್ ಸೈನ್ಸ್‍ನ ವಿಂಶತಿ ಭವನದಲ್ಲಿ ಇತ್ತೀಚೆಗೆ ಜರಗಿದ ಎ.ಬಿ.ಶೆಟ್ಟಿ ಮೆಮೋರಿಯಲ್ ಇನ್‍ಸ್ಟಿಟ್ಯೂಟ್ ಆಫ್ ಡೆಂಟರ್ ಸೈನ್ಸ್ ಇದರ ಓರಲ್ ಇಂಪ್ಲಾಂಟೋಲೋಜಿ ವಿಭಾಗದಲ್ಲಿ ತರಬೇತಿ ಪಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡುವ ಕಾರ್ಯಕ್ರಮ ಮತ್ತು ನಿರಂತರ ದಂತ ವೈದ್ಯಕೀಯ ಶಿಕ್ಷಣ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾಹೆ ಇನ್‍ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್‍ನ ಡೀನ್ ಡಾ| ಅನಿಲ್ ಎಂ. ನಿರಂತರ ದಂತ ವೈದ್ಯಕೀಯ ಶಿಕ್ಷಣ ಕಾರ್ಯಾಗಾರವನ್ನು ನಡೆಸಿಕೊಟ್ಟರು.
ಸ್ನಾತಕೋತ್ತರ ಶಿಕ್ಷಣ ವಿಭಾಗದ ನಿರ್ದೇಶಕ ಡಾ| ಬಿ.ರಾಜೇಂದ್ರ ಪ್ರಸಾದ್ ಪೆÇ್ರಸ್ತೋಡೋಂಟಿಕ್ಸ್ ವಿಭಾಗದ ಪ್ರಾಧ್ಯಾಪಕ ಹಘು ಮುಖ್ಯಸ್ಥರಾದ ಡಾ| ಚೇತನ್ ಹೆಗ್ಡೆ ಉಪಸ್ಥಿತರಿದ್ದರು.
ಎ.ಬಿ.ಶೆಟ್ಟಿ ಮೆಮೋರಿಯಲ್ ಇನ್‍ಸ್ಟಿಟ್ಯೂಟ್ ಆಫ್ ಡೆಂಟರ್ ಸೈನ್ಸ್‍ನ ಪ್ರಾಂಶುಪಾಲ ಮತ್ತು ಡೀನ್ ಪ್ರೊ| (ಡಾ|) ಯು.ಎಸ್. ಕೃಷ್ಣ ನಾಯಕ್ ಪ್ರಸ್ತಾವಿಕ ಮಾತುಗಳನ್ನಾಡಿದರು. ಓರಲ್ ಇಂಪ್ಲಾಂಟೋಲೋಜಿ ವಿಭಾಗ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ| ಮನೋಜ್ ಶೆಟ್ಟಿ ಸ್ವಾಗತಿಸಿದರು. ಪೆÇಸ್ತೋಡೋಂಟಿಕ್ಸ್ ಮತ್ತಿ ಇಂಪ್ಲಾಂಟೋಲೋಜಿ ವಿಭಾಗದ ಪ್ರಾಧ್ಯಾಪಕ ಡಾ| ರಕ್ಷಿತ್ ಹೆಗ್ಡೆ ವಂದಿಸಿದರು.