ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕಿನ್ಯ: ಕಿನ್ಯ ಗ್ರಾಮ ಪಂಚಾಯತ್‍ನ 2015-2016ನೇ ಸಾಲಿನ 2ನೇ ಹಂತದ ಗ್ರಾಮ ಸಬೆಯು ಕಿನ್ಯ ಉಕ್ಕುಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ನೋಡೆಲ್ ಅಧಿಕಾರಿಯಾಗಿ ಮಂಗಳೂರು ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಯಶೋಧರ ಜೆ. ಕಿನ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲಿನಿ, ಉಪಾಧ್ಯಕ್ಷರಾದ ಸಿರಾಜ್ ಕಿನ್ಯಾ, ಸದಸ್ಯರಾದ ಮೊಹಮ್ಮದ್, ಫಾರೂಕ್ ಕಿನ್ಯಾ, ಹಮೀದ್ ಕಿನ್ಯಾ, ಅಬೂಶಾಲಿ, ಮಹಾಬಲ ಪೂಂಜ, ಆಶಾಲತಾ, ಮೈಮೂನಾ, ಕುಸುಮಾ, ಹಾಗೂ ತಾಲೂಕು ಪಂಚಾಯತ್ ಸದಸ್ಯರಾದ ಸಿದ್ದೀಕ್ ತಲಪಾಡಿ ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ದಿ ಅಧಿಕಾರಿ ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು,ಕಾರ್ಯದರ್ಶಿ ಸುರೇಖ ವರದಿ ಮಂಡನೆ ಮಾಡಿದರು