Site icon Ullalavani

ವಿವಿ ಮಟ್ಟದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸುವ ಕಾರ್ಯಕ್ರಮ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಕೊಣಾಜೆ: ಕರಾವಳಿಯ ಜನ ತುಳು ಎನ್ನುವ ಪುಟ್ಟ ಭಾಷೆಯನ್ನು ಅವಕಾಶ ಸಿಕ್ಕಾಗಲೆಲ್ಲಾ ಬಳಸಿ ವಿಶ್ವದ ಭೂಪಟದಲ್ಲಿ ಇಲ್ಲಿನ ಸಂಸ್ಕøತಿಯನ್ನು ಸೇರಿಸಿದ್ದು ಕನ್ನಡಿಗರಿಗೆ ಹೆಮ್ಮೆಯ ವಿಚಾರ ಎಂದು ಮಂಗಳೂರು ವಿವಿಯ ಹಳೆ ವಿದ್ಯಾರ್ಥಿ, ಮೈಸೂರು ಸಂತ ಫಿಲೋಮಿನ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೃಷ್ಣೇ ಗೌಡ ಆಭಿಪ್ರಾಯಪಟ್ಟರು.

ಮಂಗಳೂರು ವಿವಿಯ ಮಂಗಳಾ ಆಡಿಟೋರಿಯಂನಲ್ಲಿ ಗುರುವಾರ ನಡೆದ ಕ್ರೀಡೆ ಮತ್ತು ಸಾಂಸ್ಕ ೃತಿಕ ಕ್ಷೇತ್ರದಲ್ಲಿ ಅಂತರ್ ವಿವಿ ಮಟ್ಟದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸುವ `ದರ್ಪಣ’-2016′ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬಗ್ಗೆ ಹೇಳಲು ಪದಗಳು ಸಾಲದು. ಪ್ರತಿಯೊಂದು ರಂಗದಲ್ಲಿ ಅದ್ಭುತವನ್ನೇ ಸಾಧಿಸಿರುವ ಉಪನ್ಯಾಸಕರಿಗಿಂತಲೂ ನಿರೂಪಕರೇ ಮಿಗಿಲಾಗಿ ಕಾಣುವ ಮಂಗಳೂರು, ಮಂಗಳಗಂಗೋತ್ರಿ ವಿವಿ ದೇಶಕ್ಕೆ ಆತ್ಯಮೂಲ್ಯ ಕಾಣಿಕೆ ನೀಡಿದೆ ಎಂದು ನುಡಿದರು.

ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಮಾತನಾಡಿ ಐದು ಕೋಟಿ ವಿದ್ಯಾರ್ಥಿಗಳ ನಡುವೆ ರಾಷ್ಟ್ರೀಯ ದಾಖಲೆ ಬರೆಯುವ ಸ್ಪರ್ದಿಯ ಸಾಧನೆ ನಿಜಕ್ಕೂ ಶ್ರೇಷ್ಠವಾದದ್ದು. ವಿವಿಗಳಲ್ಲಿ ರ್ಯಾಂಕ್ ಪಡೆಯುವುದು ಅದು ಕೇವಲ ವಿವಿಗೆ ಸೀಮಿತವಾದರೆ ರಾಷ್ಟ್ರಮಟ್ಟದ ದಾಖಲೆ ಬರೆಯಲು ದೇಶೀಯ ಮಟ್ಟದಲ್ಲಿ ಮಿಂಚಬೇಕಾದರೆ ಕಠಿಣ ಪರಿಶ್ರಮವೂ ಅಗತ್ಯ. ಆ ದಿಸೆಯಲ್ಲಿ ರ್ಯಾಂಕ್ ವಿಜೇತ ವಿದ್ಯಾರ್ಥಿಗೆ ಹೋಲಿಸಿದರೆ ರಾಷ್ಟ್ರಮಟ್ಟದ ದಾಖಲೆ ಮಾಡುವ ವಿದ್ಯಾರ್ಥಿ ಉನ್ನತ ಸಾಲಿನಲ್ಲಿ ಕಾಣುತ್ತಾನೆ ಎಂದರು.
ಭಾರತೀಯ ಹಾಕಿ ತಂಡದ ಮಾಜಿ ಕಪ್ತಾನ ಅರ್ಜುನ ಪ್ರಶಸ್ತಿ ಪುರಸ್ಕøತ ಅರ್ಜುನ್ ಹಾಲಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಮಂಗಳೂರು ವಿವಿ ಉಪ ಕುಲಪತಿ ಡಾ.ಕೆ.ಭೈರಪ್ಪ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಕಬಡ್ಡಿ ತಂಡದ ಆಟಗಾರ ಸುಖೇಶ್ ಹೆಗ್ಡೆ,
ಮೈಸೂರು ಸಂತ ಫಿಲೋಮಿನ ಕಾಲೇಜಿನ ಪ್ರಾಂಶುಪಾಲ ಪೆÇ್ರ.ಕೃಷ್ಣೇ ಗೌಡ, ಪುಣೇರಿ ಪಲ್ಟನ್ ತಂಡದ ಪ್ರತಿನಿಧಿ ಸಚಿನ್ ಸುವರ್ಣ, ಡಾ. ಉದಯ, ಮಂಗಳೂರು ವಿವಿಯ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಕಿಶೋರ್ ಕುಮಾರ್, ಸಹಾಯಕ ನಿರ್ದೇಶಕ ಡಾ. ಪ್ರಸನ್ನ ಪಿ.ಕೆ., ರಮೇಶ್ ಎಚ್.ಎಂ, ಗಿರೀಶ್‍ದಾಸ್ ಕೂಳೂರು ಉಪಸ್ಥಿತರಿದ್ದರು.
ಸಹಾಯಕ ನಿರ್ದೇಶಕರಾದ ಡಾ. ಸಂತೋಷ್ ಜೆರಾಲ್ಡ್ ಡಿಸೋಜ ಸ್ವಾಗತಿಸಿದರು. ಪತ್ರಕರ್ತ ಮನೋಹರ್ ಪ್ರಸಾದ್ ಹಾಗೂ ಮಧು ಮಾಯಿಲಂಕೋಡಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ 2015-16ರ ಸಾಲಿನಲ್ಲಿ ನಡೆದ ಸಾಂಸ್ಕøತಿಕ ಮತ್ತು ಕ್ರೀಡಾ ಕ್ಷೇತ್ರದ ಸಾಧಕರಿಗೆ ಬಹುಮಾನ ನೀಡಿ ಪುರಸ್ಕರಿಸಲಾಯಿತು.
***ಆಳ್ವಾಸ್ ಕಾಲೇಜಿಗೆ ಸಮಗ್ರ ಪ್ರಶಸ್ತಿ
ಪ್ರಥಮ : ಆಳ್ವಾಸ್ ಮೂಡುಬಿದಿರೆ ಸಮಗ್ರ ಚಾಂಪಿಯನ್
ದ್ವಿತೀಯ: ಉಜಿರೆಯ ಎಸ್‍ಡಿಎಂ ಕಾಲೇಜು
ತೃತೀಯ: ಸಂತ ಎಲೋಶಿಯಸ್ ಕಾಲೇಜು ಮಂಗಳೂರು
ಬಾಕ್ಸ್‍ಗೆ: ಮಂಗಳೂರು ವಿವಿಯ 36ವರ್ಷಗಳ ಇತಿಹಾಸದಲ್ಲಿ ಅಖಿಲ ಭಾರತ ಮಟ್ಟದ ಕ್ರೀಡೆಯಲ್ಲಿ ಮಂಗಳೂರು ವಿವಿ ಮೂರು ಬಾರಿ ಚಾಂಪಿಯನ್ ಆಗಿ ಗುರುತಿಸಿಕೊಂಡಿರುವುದು ಅದ್ವಿತೀಯ ಸಾಧನೆ. ಹಲವು ರಾಷ್ಟ್ರೀಯ ದಾಖಲೆಗಳು ಮಂಗಳೂರು ವಿವಿ ಹೆಸರಿನಲ್ಲಿದೆ. ಕ್ರೀಡೆ ಮತ್ತು ಸಾಂಸ್ಕøತಿಕ ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಪೆÇ್ರ್ರೀತ್ಸಾಹಿಸುವ ನಿಟ್ಟಿನಲ್ಲಿ ವಿವಿ ದೊಡ್ಡ ಮೊತ್ತದ ಬಹುಮಾನ ನೀಡುತ್ತಿರುವುದು ಶ್ಲಾಘನೀಯ. ರಾಜ್ಯದ ಯಾವ ವಿವಿಯಲ್ಲೂ ಕ್ರೀಡೆ ಹಾಗೂ ಸಾಂಸ್ಕøತಿಕವಾಗಿ ಸಾಧನೆಗೈದವರನ್ನು ಮಂಗಳೂರು ವಿವಿಯಷ್ಟು ಚೆನ್ನಾಗಿ ಸತ್ಕರಿಸಸಲು ಸಾಧ್ಯವಿಲ್ಲ.
ಡಾ. ಎಂ. ಮೋಹನ್ ಆಳ್ವ
ಮೂಡುಬಿದಿರೆ
**ಕಾರ್ಯಕ್ರಮದಲ್ಲಿ ಮೈಸೂರಿನ ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿ, ನೈಜೀರಿಯಾದ ಆ್ಯಡೂ ಅಬ್ದುಲ್ ಖಾದಿರಿ ಯಾರೆ ನೀನು ರೋಜಾ ಹೂವೇ ಹಾಡು ಹಾಡಿ ನೆರೆದಿದ್ದ ಸಾವಿರ ಸಂ
ಖ್ಯೆಯ ವಿದ್ಯಾರ್ಥಿಗಳ ಮನಗೆದ್ದರು.
***ಮಂಗಳೂರು ವಿವಿಯ ಇತಿಹಾಸದಲ್ಲಿ ಕ್ರೀಡಾ ವಿಭಾಗದ ವತಿಯಿಂದ ಅಂತರ್ ವಿವಿ ಮಟ್ಟದಲ್ಲಿ ಕ್ರೀಡೆ ಹಾಗೂ ಸಾಂಸ್ಕøತಿಕ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮ ಅದ್ದೂರಿ ಪ್ರದಶೃನ ನಡೆಯಿತು.
***ಆಳ್ವಾಸ್ ಮೂಡುಬಿದಿರೆ ತಂಡದ ವಿದ್ಯಾರ್ಥಿಗಳಿಂದ ದೇಶ ಭಕ್ತಿಗೀತೆ ಹಾಗೂ ಭ್ರಷ್ಟಾಚಾರ ವಿರೋಧಿ ಆಕರ್ಷಕ ನೃತ್ಯ ಪ್ರದರ್ಶನ ನಡೆಯಿತು.
***ಉಭಯ ಕಾರ್ಯಕ್ರಮ ನಿರೂಪಕರು ಪದೇ ಪದೇ ಎಕ್ಕಸಕದ ಈರ್ ದಾನೆ ಮೂಲು ಸಂಭಾಷಣೆಯನ್ನು ಹಲವು ಬಾರಿ ಬಳಸಿಕೊಂಡರು.
***ಅತಿಥಿಗಳ ಪರಿಚಯ ಒಮದು ಕಡೆ ಸಾಗುತ್ತಿದ್ದರೆ ವಿಶಾಲವಾದ ಎಲ್‍ಇಡಿ ಪರದೆಯಲ್ಲಿ ಅವರ ಸಾಧನೆಯ ಮೆಲುಕು ಹಾಕಲಾಗುತ್ತಿತ್ತು.
***ವಿವಿಯ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಕಿಶೋರ್ ಕುಮಾರ್ ಅವರ ಸಂಘಟನೆ, ಉಪನ್ಯಾಸಕರು, ಶಿಕ್ಷಕರು ಹಾಗೂ ಸಿಬ್ಬಂದಿಗಳ ಸಹಕಾರ ಕಾರ್ಯಕ್ರಮ ಆಚ್ಚಕಟ್ಟಾಗಿ ನಡೆಯಿತು. ಸ್ವಲ್ಪವೂ ಬೋರ್ ಆಗಲಿಲ್ಲ. ವಿವಿ ಕಾರ್ಯಕ್ರಮ ಆಗಿದ್ದರೂ ಗಂಭೀರತೆಗಿಂತ ಸ್ವಲ್ಪ ಹೊರಬಂದ ಕಾರಣ ಜೊತೆಗೆ ಸ್ಟಾರ್ ಆಟಗಾರರು, ಖ್ಯಾಸ ಹಾಸ್ಯ ಪಟು ಪ್ರೊ. ಕೃಷ್ಣೇ ಗೌಡ, ನಟಿಯರಾದ ಪವಿತ್ರಾ ಚಿತ್ರ ಖ್ಯಾತಿಯ ಚಿರಶ್ರೀ ಅಂಚನ್ ಹಾಗೂ ತುಳು ಕನ್ನಡ ಭಾಷಾ ನಟಿ ಅನ್ವಿತಾ ರಾವ್ ಉಪಸ್ಥಿತಿ ಕಾರ್ಯಕ್ರಮಕ್ಕೆ ಕಳೆತಂದಿತ್ತು.
ವಿದ್ಯಾರ್ಥಿಗಳ ಮನಸ್ಸಿಗೆ ಮುದನೀಡಿತ್ತು.

Exit mobile version