ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕೂಲಿ ಕೆಲಸ ಮಾಡಿ ಕುಟುಂಬ ಸಲಹುತ್ತಿರುವ ತಾಯಿಗೆ ಉಪನ್ಯಾಸಿ ಆಗುವ ಬಯಕೆ ಇದೆ. ಅದನ್ನು ಈಡೇರಿಸುವ ಭರವಸೆ ಇದೆ . ಇದು ಮಂಗಳೂರು ವಿ.ವಿ ಪದವಿ ಪ್ರಧಾನ ಸಮಾರಂಭದಲ್ಲಿ ಎರಡು ಚಿನ್ನ ಮತ್ತು 5 ನಗದು ಪ್ರಶಸ್ತಿ ಗಳಿಸಿದ ಮಲ್ಪೆ ನಿವಾಸಿ ಚೈತ್ರಾ ಅವರ ಮನದಾಳದ ಮಾತು.
ಚಿನ್ನದ ಪದಕ ಗೆದ್ದ ಅಂಬಿಕಾ
ಕನ್ನಡ ಉಪನ್ಯಾಸಕಿಯಾಗಿರುವ ಅಂಬಿಕಾ ಒಂದು ಚಿನ್ನ ಮತ್ತು ಮೂರು ನಗದು ಪುರಸ್ಕಾರ ಪಡೆದುಕೊಂಡಿದ್ದಾರೆ. ಸಂತೆಕಟ್ಟೆಯ ಮಿಲಾಗ್ರಿಸ್ ಕಾಲೇಜಿನಲ್ಲಿ ಸ್ನಾತಕೋತ್ತರ ಮತ್ತು ಬಿ.ಇಎಡ್ ಪದವಿ ಮುಗಿಸಿದ ಅಂಬಿಕಾ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಯಿ ತೀರಿದ ಬಳಿಕ ದೊಡ್ಡಮ್ಮ ಮತ್ತು ದೊಡ್ಡಪ್ಪರ ಆರೈಕೆಯಲ್ಲಿ ಬೆಳೆದು ನಿಂತ ಅಂಬಿಕಾ ಅವರು ಸಂತೆಕಟ್ಟೆ ಕರ್ಣಾಟಕ ಬ್ಯಾಂಕ್ ಉದ್ಯೋಗಿ ರವಿಶಂಕರ್ ಅವರನ್ನು ವಿವಾಹವಾಗಿದ್ದಾರೆ . ತಂದೆ ದತ್ತಾತ್ರೇಯ ಭಟ್ ಹೊಟೇಲ್ ಉದ್ಯಮಿಯಾಗಿದ್ದುಕೊಂಡು ಕಲಿಕೆಗೆಲ್ಲಾ ಪ್ರೋತ್ಸಾಹಿಸಿದ್ದು, ಮದುವೆಯಾದ ಬಳಿಕವೂ ಗಂಡನ ಪ್ರೋತ್ಸಾಹದಿಂದ ಶಿಕ್ಷಣವನ್ನು ಸಾಧಿಸುವಂತಾಯಿತು. ಮುಂದೆ ಪಿಹೆಚ್ ಡಿ ಮಾಡುವ ಯೋಚನೆಯಿದೆ ಎಂದಿದ್ದಾರೆ.