Site icon Ullalavani

ಹರೇಕಳ: ಕುಡಿಯುವ ನೀರಿನ ಬೃಹತ್ ಬಾವಿ ಉದ್ಘಾಟನೆ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಹರೇಕಳ: ಬೇಸಿಗೆಯ ಸುಡು ಬಿಸಿಲು, ಎತ್ತರ ಪ್ರದೇಶದ ಜನರು ನೀರಿಲ್ಲದೆ ಬಹುದೂರ ನಡೆದುಕೊಂಡು ಸಾಗಿ ಬೋರ್‍ವೆಲ್ ಬಡಿದು ನೀರು ತರುವ ಸಾಹಸ, 5 ಕ್ಕೂ ಅಧಿಕ ಬೋರ್ ವೆಲ್ ಕೊರೆದರೂ ನೀರು ಸಿಗದೆ ನಿರಾಸೆ, ಆದರೆ ಸದ್ಯ ಹರೇಕಳ ಗ್ರಾಮದ ಕುತ್ತಿಮೊಗೆರು ಸಮೀಪ ಸಚಿವರು , ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಗ್ರಾಮ ಪಂಚಾಯತ್ ಸಹಯೋಗದಿಂದ ಖಾಸಗಿ ವ್ಯಕ್ತಿಯೊಬ್ಬರ ದಾನದ ಜಾಗದಲ್ಲಿ ನಿರ್ಮಾಣವಾದ ಬೃಹತ್ ಬಾವಿಯಿಂದ ಗ್ರಾಮದ ಜನರ ಬಾಯಾರಿಕೆ ಈಡೇರಿದೆ.

ಭಾನುವಾರ ಹರೇಕಳ ಗ್ರಾಮದ ಕುತ್ತಿಮೊಗರು ಸಮೀಪ ರೂ.15 ಲಕ್ಷ ಅನುದಾನದಲ್ಲಿ ನಿರ್ಮಿಸಲಾದ ಬಾವಿಯನ್ನು ಉದ್ಘಾಟಿಸಿ ಮಾತನಾಡಿದರು.

ಬಳಿಕ ಮಾತನಾಡಿದ ಅವರು ಬಹುಕಾಲದ ಕುಡಿಯುವ ನೀರಿನ ಸಮಸ್ಯೆ ಹರೇಕಳದ ಜನರನ್ನು ತೊಂದರೆಗೀಡು ಮಾಡಿತ್ತು. ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ವತಿಯಿಂದ ಅಲ್ಲಲ್ಲಿ ಬೋರ್‍ವೆಲ್ ನಿರ್ಮಿಸಿದರೂ ಪ್ರಯೋಜನವಾಗಿರಲಿಲ್ಲ. ಆದರೆ ಬಾವಿ ನಿರ್ಮಾಣದಿಂದ ಗ್ರಾಮದ ಜನರ ಚಿಂತೆ ದೂರವಾಗಿದ್ದು, ಕೃಷಿ ಚಟುವಟಿಕೆಗಳಿಗೂ ಪೂರಕವಾಗಿದೆ. ಕುತ್ತಿಮೊಗರು, ಅಂಬ್ಲಮೊಗರು, ತಲಪಾಡಿ ಪಂಜಾಳ, ಕ್ವಾಟ್ರಗುತ್ತು, ಮುಡಿಪು ಚಚ್ ್ , ಉಳ್ಳಾಲ ರಸ್ತೆ, ಗಟ್ಟಿಕುದ್ರು , ಬೈತಾರು, ಮಲೆಕೆದು ರಸ್ತೆಗಳ ಅಭಿವೃದ್ಧಿಯನ್ನು ಹಲವು ಕೋಟಿ ರೂ. ಅನುದಾನಗಳಲ್ಲಿ ನಡೆಸಲಾಗಿದ್ದು, ಇನ್ನಷ್ಟು ಒಳರಸ್ತೆಯ ಅಭಿವೃದ್ಧಿಯನ್ನು ಹಂತ ಹಂತವಾಗಿ ನಡೆಸಲಾಗುವುದು. ಮುಂದಿನ ದಿನಗಳಲ್ಲಿ ಇಡೀ ಗ್ರಾಮಕ್ಕೆ ನೀರು ಪೂರೈಸುವ ಸಲುವಾಗಿ ಓವರ್ ಹೆಡ್ ಟ್ಯಾಂಕ್ ನಿರ್ಮಿಸುವ ಯೋಜನೆ ರೂಪಿಸಲಾಗುವುದು ಎಂದರು.

ಈ ಸಂದರ್ಭ ತಾಲೂಕ್ ಪಂಚಾಯತ್ ಮಾಜಿ ಸದಸ್ಯ ಮಹಮ್ಮದ್ ಮುಸ್ತಾಫ, ರತ್ನ ಎಜ್ಯುಕೇಷನ್ ಟ್ರಸ್ಟಿನ ಅಧ್ಯಕ್ಷ ರವೀಂದ್ರಶೆಟ್ಟಿ ಉಳಿದೊಟ್ಟು ಹರೇಕಳ, ಹರೇಕಳ ಪಂಚಾಯಿತಿ ಅಧ್ಯಕ್ಷೆ ಅನಿತಾ ಡಿಸೋಜಾ, ಉಪಾಧ್ಯಕ್ಷ ಮಹಾಬಲ್ ಹೆಗ್ಡೆ, ತಾಲೂಕ್ ಪಂಚಾಯತ್ ಸದಸ್ಯೆ ಶಶಿಪ್ರಭಾ ಶೆಟ್ಟಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸುದರ್ಶನ್ ಶೆಟ್ಟಿ, ದೆಬ್ಬೆಲಿಗುತ್ತು ಪ್ರಭಾಕರ ಭಂಡಾರಿ, ಮೋಹನದಾಸ್ ಶೆಟ್ಟಿ, ಸ್ಥಳದಾನಿ ಫ್ರಾಂಕ್ಲಿನ್, ಜನಾರ್ದನ ಗಟ್ಟಿ, ಶೇಖರ್ ಗಟ್ಟಿ, ಝಕರಿಯಾ ಮಲಾರ್ ಹಾಗೂ ಹರೇಕಳ ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.

Exit mobile version