ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು: ಕೇಂದ್ರ ಸರಕಾರ ಚಿನ್ನಾಭರಣ ಉದ್ಯಮದ ಮೇಲೆ ವಿಧಿಸಿರುವ ಅಬಕಾರಿ ಸುಂಕದಿಂದ ಸ್ವರ್ಣವ್ಯಾಪಾರಸ್ಥರಿಗೆ ಹಾಗೂ ಗ್ರಾಹಕರಿಗೆ ತೊಂದರೆಯಾಗಿದ್ದು ಈ ಬಗ್ಗೆ ಈಗಾಗಲೇ ದೇಶದಾದ್ಯಂತ 26 ದಿನಗಳ ಮುಷ್ಕರ ನಡೆದಿದ್ದು , ಇನ್ನೂ ಎ.10ರವರೆಗೆ ಮುಷ್ಕರವನ್ನು ಮುಂದುವರೆಸಲಿದ್ದೇವೆ ಎಂದು ಉಡುಪಿ ಸ್ವರ್ಣ ವ್ಯಾಪಾರಿ ಸಂಘದ ಅಧ್ಯಕ್ಷ ಜಯ ಆಚಾರ್ಯ ತಿಳಿಸಿದ್ದಾರೆ.
ಅವರು ಭಾನುವಾರ ತೊಕ್ಕೊಟ್ಟು ರತ್ನಂ ಹೊಟೇಲಿನಲ್ಲಿ ಜರಗಿದ ತೊಕ್ಕೊಟ್ಟು ವಲಯದ ಸ್ವರ್ಣ ವ್ಯಾಪಾರಿ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
೨ಲಕ್ಷ ಮೇಲ್ಪಟ್ಟು ಖರೀದಿಸುವ ಚಿನ್ನಗಳ ಮೇಲೆ ಶೇ.1ರಷ್ಟು ತೆರಿಗೆ ಹಾಗೂ ಪಾನ್ ಕಾರ್ಡ್ ನಂಬರನ್ನು ಕಡ್ಡಾಯವಾಗಿ ನಮೂದಿಸಬೇಕು ಎಂಬ ಹೊಸ ನೀತಿ ಇದು ಗ್ರಾಹಕರಿಗೆ ಹೊರೆಯಾಗಲಿದೆ. ಒಗ್ಗಟ್ಟಿನ ಹೋರಾಟದಿಂದ ಮಾತ್ರ ನಿಲ್ಲಿಸಲು ಸಾಧ್ಯ. ಅದಕ್ಕಾಗಿ ಎ.10ರವರೆಗೆ ಪ್ರತಿಭಟನೆಯನ್ನು ಮುಂದುವರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಂಗಳೂರು ಸ್ವರ್ಣ ವ್ಯಾಪಾರಿ ಸಂಘದ ಕಾರ್ಯದರ್ಶಿ ಪ್ರಶಾಂತ್ ಶೇಟ್, ತೊಕ್ಕೊಟ್ಟು ಸ್ವರ್ಣ ವ್ಯಾಪಾರಿ ಸಂಘದ ಅಧ್ಯಕ್ಷ ಮಹಮ್ಮದ್ ಶಹಾಬುದ್ಧೀನ್, ತೊಕ್ಕೊಟ್ಟು ವ್ಯಾಪಾರಿ ಸಂಘದ ಕಾರ್ಯದರ್ಶಿ ಶ್ರೀನಿವಾಸ್, ಕೋಶಾಧಿಕಾರಿ ಅಬ್ದುಲ್ ಸಲಾಂ ಉಪಸ್ಥಿತರಿದ್ದರು.
ಕೃಷ್ಣ ಪೊನ್ನೆತ್ತೊಡು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿ