Site icon Ullalavani

ತಂತ್ರಜ್ಞಾನದ ಯುಗದಲ್ಲಿ ಜೀವನದ ಮೌಲ್ಯಗಳನ್ನು ಕಳೆದುಕೊಳ್ಳಬಾರದು: ಡಾ.ರಾಮ್ ನಾರಾಯಣ್

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ದೇರಳಕಟ್ಟೆ: ತಂತ್ರಜ್ಞಾನದ ಯುಗದಲ್ಲಿ ಜೀವನದ ಮೌಲ್ಯಗಳನ್ನು ಕಳೆದುಕೊಳ್ಳದೆ, ಶಿಕ್ಷಕರ ಉತ್ತಮ ಮಾರ್ಗದರ್ಶನವನ್ನು ಪಾಲಿಸುವುದರ ಮೂಲಕ ಜೀವನದಲ್ಲಿ ಯಶಸ್ಸು ಗಳಿಸಬಹುದು ಎಂದು ಮಣಿಪಾಲ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಹಾಗೂ ಮಣಿಪಾಲ ವಿಶ್ವವಿದ್ಯಾಲಯದ ಉಪಾಧ್ಯಕ್ಷ ಡಾ.ರಾಮ್ ನಾರಾಯಣ್ ಅಭಿಪ್ರಾಯಪಟ್ಟರು.

ಅವರು ದೇರಳಕಟ್ಟೆಯ ಎ.ಬಿ.ಶೆಟ್ಟಿ ದಂತ ಮಹವಿದ್ಯಾಲಯದ 31 ನೇ ವಾರ್ಷಿಕೋತ್ಸವ ಸಮಾರಂಭವನ್ನು ಸೋಮವಾರ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಡಿಟೋರಿಯಂನಲ್ಲಿ ಉದ್ಘಾಟಿಸಿದರು.

ಶಿಕ್ಷಕರು ವಿದ್ಯಾರ್ಥಿಗಳ ಮೇಲಿನ ಪ್ರೀತಿ ಮತ್ತು ಬಾಂಧವ್ಯವನ್ನು ಬೆಳೆಸುವುದರ ಮೂಲಕ ಉತ್ತಮ ಪ್ರಜೆಗಳನ್ನು ರೂಪಿಸಲು ಸಾಧ್ಯ. ಅಂತರ್ಜಾಲದ ಮೂಲಕ ಸ್ಮಾಟ್ ್ ಫೋನನ್ನೇ ಪ್ರಪಂಚವಾಗಿರಿಸಿರುವ ಯುವ ಸಮುದಾಯ ಜೀವನದ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದೆ. ಕಂಪ್ಯೂಟರಿನ ಮೌಸ್ ನಲ್ಲಿ ಯಶಸ್ಸಿದೆ ಎಂದು ಭಾವಿಸುವವರು ಜೀವನದ ಕುರಿತ ವಿಮರ್ಶೆ ಮಾಡಬೇಕಿದೆ. ಮನುಷ್ಯನ ಅಭಿವೃದ್ಧಿ ತಂತ್ರಜ್ಞಾನದಿಂದ ನಡೆಸಲು ಮುಂದಾಗಿರುವವರು ಮಾನವೀಯತೆಯನ್ನು ಮೈಗೂಡಿಸಿಕೊಳ್ಳಬೇಕಿದೆ. ಇನ್ನೊಬ್ಬರನ್ನು ಬಲಿಷ್ಠರನ್ನಾಗಿಸುವುದು, ಮನುಷ್ಯನನ್ನು ಉಪಯೋಗಿಸಿ ವಸ್ತುಗಳನ್ನು ಸಂಪಾದಿಸುವ ಬದಲು ಮನುಷ್ಯನನ್ನು ಪ್ರೀತಿಸಿ ವಸ್ತುಗಳನ್ನು ಗಳಿಸಿ, ದೂರುವಿಕೆಯನ್ನು ಸವಾಲಾಗಿ ಸ್ವೀಕರಿಸುವ ಮೂಲಕ ಯಶಸ್ವಿ ಜೀವನವನ್ನು ನಡೆಸಬಹುದು ಎಂದರು.

ಎ.ಬಿ.ಶೆಟ್ಟಿ ದಂತ ಮಹಾವಿದ್ಯಾಲಯದ ಡೀನ್ ಡಾ.ಯು.ಯಸ್.ಕೃಷ್ಣ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸ್ನಾತಕೋತ್ತರ ಕಲಿಕಾ ವಿಭಾಗದ ನಿರ್ದೇಶಕ ಡಾ. ಬಿ.ರಾಜೇಂದ್ರ ಪ್ರಸಾದ್, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಡೀನ್ ಡಾ. ಪ್ರಿಯದರ್ಶಿನಿ ಹೆಗ್ಡೆ ಮುಖ್ಯ ಅತಿಥಿಗಳಾಗಿದ್ದರು. ದಂತ ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ.ಚೇತನ್ ಹೆಗ್ಡೆ, ಡಾ.ಸುಭಾಷ್ ಬಾಬು, ಡಾ.ಬಿಜು, ಡಾ.ಪುಷ್ಪರಾಜ್, ಡಾ.ಔರಿ, ಡಾ.ಶಿಶಿರ್ ಉಪಸ್ಥಿತರಿದ್ದರು.

ಉಪಪ್ರಾಂಶುಪಾಲೆ ಡಾ.ಮಿತ್ರಾ.ಯನ್ ಹೆಗ್ಡೆ ಸ್ವಾಗತಿಸಿದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಮರೂಫ್ ಬೇಗ್ ವಾರ್ಷಿಕ ವರದಿ ವಾಚಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಅರ್ಜುನ್ ಕಿಣಿ ವಂದಿಸಿದರು.

Exit mobile version