Site icon Ullalavani

ಇಬ್ಬರು ಮಕ್ಕಳೊಂದಿಗೆ ವಿವಾಹಿತ ಮಹಿಳೆ ನಾಪತ್ತೆ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ತೊಕ್ಕೊಟ್ಟು :ವಿವಾಹಿತ ಮಹಿಳೆಯೋರ್ವಳು ತನ್ನ ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿರುವ ಕುರಿತು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭಂಡಾರ ಬೈಲು ನಿವಾಸಿ ಅಶ್ವಿನಿ(29) ಹಾಗೂ ಸಾನ್ವಿ(4), ಸಾತ್ವಿಕ್(1.8) ನಾಪತ್ತೆಯಾದವರು.

ಕಳೆದ ಐದು ವರ್ಷದ ಹಿಂದೆ ಬಂಟ್ವಾಳ ತಾಲೂಕಿನ ಮಾರ್ನಬೈಲ್ ಗೆ ಅಶ್ವಿನಿಯನ್ನು ವಿವಾಹ ಮಾಡಿಕೊಡಲಾಗಿತ್ತು. ಅಸೌಖ್ಯದಿಂದ ಬಳಲುತ್ತಿದ್ದ ಅಶ್ವಿನಿ 3ತಿಂಗಳ ಹಿಂದೆ ತನ್ನ ತಾಯಿ ಮನೆಗೆ ಬಂದಿದ್ದರು. ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆಯ ಬಳಿಕ ತಾಯಿ ಮನೆಯಲ್ಲಿಯೇ ಉಳಿದಿದ್ದ ಅಶ್ವಿನಿಯ ತಾಯಿಗೆ ಹೃದಯಾಘಾತವಾಗಿದ್ದ ಹಿನ್ನಲೆಯಲ್ಲಿ ಕೊಲ್ಯದಲ್ಲಿರುವ ತನ್ನ ಚಿಕ್ಕಮ್ಮನ ಮನೆಗೆ ತೆರಳಿದ್ದರು. ಮಾರ್ಚ್ 16ರಂದು ಚಿಕ್ಕಮ್ಮ ಸ್ವಸಹಾಯ ಸಂಘದ ಮೀಟಿಂಗ್ ಹೋದ ಸಮಯದಲ್ಲಿ ಅಶ್ವಿನಿ ತನ್ನ ಇಬ್ಬರು ಮಕ್ಕಳ ಜೊತೆಗೆ ಮನೆ ಬಿಟ್ಟು ಹೋದವರು ವಾಪಾಸ್ಸಾಗದೇ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ತಂದೆ ಸುರೇಶ್ ನೀಡಿದ ದೂರಿನಂತೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version