Site icon Ullalavani

ನೇತ್ರಾವತಿ ಸೇತುವೆಯಿಂದ ಹಾರಿ ಆತ್ಮಹತ್ಯೆ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ: ಅಪರಿಚಿತನೋರ್ವ ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆಗೈದಿರುವ ಘಟನೆ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ.

ಅಪರಿಚಿತ ವ್ಯಕ್ತಿಯೋರ್ವ ಸೇತುವೆ ಬದಿಯಿಂದ ನಡೆದುಕೊಂಡು ಬಂದು ನಡುಭಾಗದಲ್ಲಿ ಏಕಾಏಕಿ ನದಿಗೆ ಧುಮುಕಿದ್ದಾನೆ. ಇದನ್ನು ಸೇತುವೆಯಲ್ಲಿ ತೆರಳುತ್ತಿದ್ದ ವಾಹನ ಸವಾರರು ಹಾಗೂ ನದಿಯಲ್ಲಿ ಮರಳು ತೆಗೆಯುತ್ತಿದ್ದ ದೋಣಿಯಲ್ಲಿದ್ದವರು ಕಂಡಿದ್ದಾರೆ.

ಕೂಡಲೇ ದೋಣಿಯಲ್ಲಿದ್ದವರು ರಕ್ಷಣೆಗೆ ಮುಂದಾದರೂ ಆ ವೇಳೆಗಾಗಲೇ ಅಪರಿಚಿತ ನದಿ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾನೆ. ಸ್ಥಳಕ್ಕೆ ಉಳ್ಳಾಲ ಪೊಲೀಸರು ಹಾಗೂ ಮಂಗಳೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದಾರೆ. ಹಾರುವ ಸಂದರ್ಭ ಚಪ್ಪಲಿಗಳನ್ನು ಮೇಲಿರಿಸಿ ವ್ಯಕ್ತಿ ಹಾರಿದ್ದು, ಎರಡು ಚಪ್ಪಲಿಗಳನ್ನು ಪೊಲೀಸರು ವಶಕ್ಕೆ ತೆಗದುಕೊಂಡಿದ್ದಾರೆ. ಅಗ್ನಿ ಶಾಮಕ ಸಿಬ್ಬಂದಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

Exit mobile version