ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ :ಉಳ್ಳಾಲ ನಗರಸಭಾ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‍ನ ಹಿರಿಯ ನಾಯಕ ಹುಸೈನ್ ಕುಂಞಮೋನು ಅಧ್ಯಕ್ಷರಾಗಿ ಜಯಗಳಿಸಿದ್ದು, ಉಪಾಧ್ಯಕ್ಷರಾಗಿ ಕಾಂಗ್ರೆಸ್‍ನ ಚಿತ್ರಕಲಾ ಚಂದ್ರಕಾಂತ್ ಜಯಗಳಿಸಿದ್ದಾರೆ.
ಉಳ್ಳಾಲ ನಗರಸಭೆಯ ಎರಡನೇ ಅವಧಿಯ ಅಧ್ಯಕ್ಷ , ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕುಂಞಮೋನು 17 ಮತಗಳನ್ನು ಪಡೆದು ವಿಜಯಿಯಾದರೆ, ಪ್ರತಿಸ್ಪರ್ಧಿ ಬಿಜೆಪಿಯ ಪೆÇಡಿಮೋನು 7 ಮತಗಳನ್ನು ಪಡೆದು ಪರಾಜಯಗೊಂಡರು. ಪಕ್ಷೇತರ ಸದಸ್ಯರೊಬ್ಬರು ಮತದಾನ ನಡೆಸದೆ ತಟಸ್ಥರಾಗಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್„ಸಿದ್ದ ಕಾಂಗ್ರೆಸ್‍ನ ಚಿತ್ರಕಲಾ ಚಂದ್ರಕಾಂತ್ 17 ಮತಗಳನ್ನು ಪಡೆದು ವಿಜಯಿಯಾದರೆ, ಬಿಜೆಪಿಯ ಮಹಾಲಕ್ಷ್ಮಿ 7 ಮತಗಳನ್ನು ಪಡೆದು ಪರಾಜಯಗೊಂಡರು.
ಇಬ್ಬರ ಸದಸ್ಯತ್ವ ಅನರ್ಹ : ಉಳ್ಳಾಲ ಪುರಸಭೆ ಮೇಲ್ದರ್ಜೆಗೇರಿ ಉಳ್ಳಾಲ ನಗರಸಭೆಯಾಗಿದ್ದು, ಒಟ್ಟು 27 ಸದಸ್ಯರನ್ನು ಹೊಂದಿದೆ. ಇವರಲ್ಲಿ ಕಾಂಗ್ರೆಸ್‍ನ 17 ಸದಸ್ಯರಿದ್ದು, ಚುನಾವಣಾ ಸಂದರ್ಭದಲ್ಲಿ ಅಫಿದವಿಟ್‍ನಲ್ಲಿ ಪೂರ್ಣ ಮಾಹಿತಿ ನೀಡದ ಕಾರಣ, ಕಲ್ಲಾಪು ವಾರ್ಡ್‍ನ ಉಸ್ಮಾನ್ ಕಲ್ಲಾಪು ಮತ್ತು ಚೆಂಬುಗುಡ್ಡೆ ವಾರ್ಡ್‍ನ ಬಾಝಿಲ್ ಡಿ.ಸೋಜ ಅವರ ಸದಸ್ಯತ್ವ ಅನರ್ಹಗೊಂಡ ಹಿನ್ನಲೆಯಲ್ಲಿ 15 ಸದಸ್ಯರ ಬಲವನ್ನು ಕಾಂಗ್ರೆಸ್ ಹೊಂದಿದೆ. ಉಳಿದಂತೆ ಬಿಜೆಪಿ 7 ಸದಸ್ಯರನ್ನು ಹೊಂದಿದ್ದು, ಇಬ್ಬರು ಪಕ್ಷೇತರರು, ಒಂದು ಎಸ್‍ಡಿಪಿಐ ಸದಸ್ಯರಿದ್ದಾರೆ. ಇಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಎಸ್‍ಡಿಪಿಐ ಮತ್ತು ಪಕ್ಷೇತರರ ಸದಸ್ಯರೊಬ್ಬರು ಮತ ಚಲಾಯಿಸಿದ್ದರು.
ಹಿರಿಯ ನಾಯಕ : ಕೆ. ಹುಸೈನ್ ಯಾನೆ ಕುಂಞಮೋನು 1967ರಿಂದಲೇ ಕಾಂಗ್ರೆಸ್ ಕಾರ್ಯಕರ್ತರಾಗಿದ್ದರು. ಜಿಲ್ಲಾ ಕಾಂಗ್ರೆಸ್ ಜತೆ ಕಾರ್ಯದರ್ಶಿ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ರಾಗಿ, ಉಳ್ಳಾಲ ಮಂಡಲ ಪಂಚಾಯತ್ ಸದಸ್ಯರಾಗಿ, ಉಳ್ಳಾಲ ನಗರ ಪಂಚಾಯತ್ ಸದಸ್ಯ, ಸ್ಥಾಯಿ ಸಮಿತಿ ಅದ್ಯಕ್ಷರಾಗಿ, ಉಳ್ಳಾಲ ನಗರಸಭಾ ಹಿಂದಿನ ಪುರಸಭಾ ಸದಸ್ಯರಾಗಿ ಆಯ್ಕೆಯಾಗಿದ್ದು, ಎರಡನೇ ಅವ„ಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಳ್ಳಾಲ ಸ್ಪೋಟ್ರ್ಸ್ ಕ್ಲಬ್‍ನ ಕಳೆದ 34 ವರ್ಷದಿಂದ ನಿರಂತರವಾಗಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಚಿತ್ರಕಲಾ ಚಂದ್ರಕಾಂತ್ ಪ್ರಥಮ ಬಾರಿಗೆ ಉಳ್ಳಾಲ ಪುರಸಭಾ ಸದಸ್ಯರಾಗಿ ಆಯ್ಕೆಯಾಗಿದ್ದು, ಇದೀಗ ಮೇಲ್ದರ್ಜೆಗೇರಿರುವ ಉಳ್ಳಾಲ ನಗರಸಭೆಯ ಎರಡನೇ ಅವಧಿಗೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾ ಅಧಿಕಾರಿಯಾಗಿ ಸಹಾಯಕ ಕಮಿಷನರ್ ಡಾ| ಅಶೋಕ್ ಕಾರ್ಯ ನಿರ್ವಹಿಸಿದ್ದು, ಉಳ್ಳಾಲ ನಗರಸಭಾ ನಿರ್ಗಮಿತ ಅಧ್ಯಕ್ಷೆ ಗಿರಿಜಾ ಎಂ.ಉಪಾಧ್ಯಕ್ಷೆ ರಝೀಯಾ ಇಬ್ರಾಹಿಂ, ನಗರಸಭಾ ಪೌರಾಯುಕ್ತೆ ರೂಪಾ ಡಿ. ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಫತ್ತಾಕ್, ಜಿಲ್ಲಾ ಕಾಂಗ್ರೆಸ್ ಮುಖಂಡ ಟಿ.ಕೆ.ಸು„ೀರ್ ಸೇರಿದಂತೆ ಉಳ್ಳಾಲ ನಗರಸಭಾ ಸದಸ್ಯರು ಉಪಸ್ಥಿತರಿದ್ದರು.