Site icon Ullalavani

ಗೋವು ದೇಶದ ಸಂಪತ್ತು: ಗೋಪಾಲ್‍ಜೀ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಪಜೀರು: ದೇಶದಲ್ಲಿ ಅನಾದಿಕಾಲದಿಂದಲೂ ಗೋವಿನ ಬಗ್ಗೆ ಪೂಜ್ಯನೀಯ ಭಾವವನ್ನು ಬೆಳೆಸಿಕೊಂಡು ಬಂದ ಸಂಸ್ಕøತಿ ನಮ್ಮದು. ತಾಯಿಯ ರೂಪದಲ್ಲಿ ನಾವು ಕಾಣುವ ಗೋವು ಅದು ದೇಶದ ಸಂಪತ್ತು ಆಗಿದೆ. ಆದರೆ ನಾವು ಗೋವಿನ ಬದಲು ಹುಲಿಯನ್ನು ರಾಷ್ಟ್ರೀಯ ಪ್ರಾಣಿ ಎಂದು ಕರೆದಿರುವುದು ವಿಪರ್ಯಾಸ. ಇನ್ನಾದರೂ ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸುವ ಕೆಲಸ ಆಗಬೇಕಾಗಿದೆ ಜೊತೆಗೆ ಗೋಹತ್ಯೆ ನಿಷೇದ ಕಾನೂನನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕಾದ ಅನಿವಾರ್ಯತೆ ಇದೆ ಎಂದು ವಿಶ್ವಹಿಂದೂ ಪರಿಷತ್‍ನ ಕ್ಷೇತ್ರ ಸಂಘಟನಾ ಕಾರ್ಯದರ್ಶಿ ಗೋಪಾಲ್‍ಜೀ ಅವರು ಹೇಳಿದರು.

ಅವರು ಪಜೀರು ಬೀಜಗುರಿಯ ಗೋವನಿತಾಯ ಟ್ರಸ್ಟ್‍ನ 16 ನೇ ವರ್ಷಾಚರಣೆ ಅಂಗವಾಗಿ ನೂತನ ಗೊಶಾಲೆಯ ಶಿಲಾನ್ಯಾಸ ಕಾರ್ಯಕ್ರಮದ ಅಂಗವಾಗಿ ಭಾನುವಾರ ನಡೆದ ಸ¨ssÁ ಕಾರ್ಯಕ್ರಮದಲ್ಲಿ `ಗೋ ಸಂತತಿಯ ಅಭಿವೃದ್ದಿಯಲ್ಲಿ ಸಂಘ ಸಂಸ್ಥೆಗಳ ಪಾತ’್ರ ಎಂಬ ವಿಷಯದಲ್ಲಿ ಅವರು ಮಾತನಾಡಿದರು.

ದೇಶೀ ಹಸುವಿನ ಹಾಲು ಅದು ಅಮೃತ ಇದ್ದ ಹಾಗೆ. ಆದ್ದರಿಂದ ದೇಶಿ ಹಸುಗಳ ಸಂರಕ್ಷಣೆಯ ಜೊತೆಗೆ ಗೋವಿನ ಮಹತ್ವದ ಬಗ್ಗೆ ಮಕ್ಕಳಲ್ಲಿ ಅರಿವು ಹುಟ್ಟಿಸುವ ಕೆಲಸ ಸಂಘ ಸಂಸ್ಥೆಗಳಿಂದ ಆಗಬೇಕಾಗಿದೆ. ಒಂದು ಕಾಲದಲ್ಲಿ ಕೋಟ್ಯಂತರ ಸಂಖ್ಯೆಯಲ್ಲಿ ಗೋವುಗಳಿದ್ದವು ಆದರೆ ಇದೀಗ ಭಾರತದಲ್ಲಿ ಗೋವಿನ ಸಂಖ್ಯೆ ಕ್ಷೀಣಿಸುತ್ತಿದೆ. ಬಾರತದಿಂದ ಗೋ ಮಾಂಸ ರಪ್ತಾಗುವುದನ್ನು ತಡೆಗಟ್ಟುವ Pಕೆಲಸ ಸರಕಾರದಿಂದ ಆಗಬೇಕಾಗಿದ್ದು ಅಲ್ಲದೆ ಗೋವಿನ ಸಂರಕ್ಷಣೆಯ ಬಗ್ಗೆ ಜಾಗೃತಿ ಹುಟ್ಟಿಸುವ ಕೆಲಸ ಸಂಘ ಸಂಸ್ಥೆಗಳಿಂದ ಆಗಬೇಕಾಗಿದೆ, ಹಾಗೆಯೇ ಪ್ರತೀ ಶಾಲೆಯಲ್ಲಿ ಗೋಪೂಜೆಯನ್ನು ನಡೆಸುವಂತಹ ಕೆಲಸ ಆಗಬೇಕಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ ಅವರು, ಪ್ರಗತಿಪರವಾದ ಇಂದಿನ ಸಮಾಜದಲ್ಲಿ ನಾವು ಸಮಾಜಮುಖಿ ಚಿಂತನೆಯೊಂದಿಗೆ ಮೌಲ್ಯಯುತ ಬದುಕು ಸಾಗಿಸುವ ವ್ಯವಸ್ಥೆ ಆಗಬೇಕಾಗಿದೆ ಪಜೀರಿನ ಗೋವನಿತಾಯ ಟ್ರಸ್ಟ್ ಕಳೆದ ಹಲವಾರು ವರ್ಷಗಳಿಂದ ಸಮಾಜಮುಖಿ ಕೆಲಸದೊಂದಿಗೆ ಗೋ ಸಂರಕ್ಷಣೆಯಂತಹ ಪುಣ್ಯದ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಜೀರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸೀತಾರಾಮ ಶೆಟ್ಟಿ ಅವರು ವಹಸಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಸಂತೋಷ್ ಕುಮಾರ್ ಬೋಳಿಯಾರ್, ತಾಲೂಕು ಪಂಚಾಯಿತಿ ಸದಸ್ಯ ನವೀನ್ ಪಾದಲ್ಪಾಡಿ, ಉದ್ಯಮಿ ಶಶಿಧರ ಶೆಟ್ಟಿ ಮುಂತಾದವರು ಭಾಗವಹಿದ್ದರು.

ಟ್ರಸ್ಟಿ ಅನಂತ ಕೃಷ್ಣ ಭಟ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟ್‍ನ ಗೌರವಾಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ಸ್ವಾಗತಿಸಿದರು.

Exit mobile version