ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕೊಣಾಜೆ: ಜೀವಶಾಸ್ತ್ರ ಹಾಗೂ ರಸಾಯನ ಶಾಸ್ತ್ರ ವಿಭಿನ್ನ ಅಧ್ಯಯನವಾಗಿದ್ದು ಇವೆರಡರ ಕೂಡುವಿಕೆಯ ಅಧ್ಯಯನಗಳ ಕುರಿತು ಮತ್ತು ಸಂಶೋಧನೆಗೆ ವಿದ್ಯಾರ್ಥಿಗಳು ಹೆಚ್ಚಿನ ಮಹತ್ವ ನೀಡಬೇಕಿದೆ ಎಂದು ಎಂದು ಪದ್ಮಭೂಷಣ ಪುರಸ್ಕøತ ಹಾಗೂ ಬೆಂಗಳೂರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನ ನಿವೃತ್ತ ನಿರ್ದೆಶಕ ಪಿ. ಬಲರಾಮ ತಿಳಿಸಿದ್ದಾರೆ.
ಅವರು ಮಂಗಳೂರು ವಿಶ್ವ ವಿದ್ಯಾನಿಲಯದ ವಿಜ್ಷಾನ ವಿಭಾಗದ ನೂತನ ಜೀವರಸಾಯನ ಶಾಸ್ತ್ರ ಸಂಶೋಧನಾ ಪ್ರಯೋಗಲಯ, ಜೀವಶಾಸ್ತ್ರ ಪ್ರಯೋಗಲಯವನ್ನು ಉದ್ಘಾಟಸಿ ಬಳಿಕ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಆಡಿಟೋರಿಯಂನಲ್ಲಿ ವಿದ್ಯಾರ್ಥಿಗಳಿಗಾಗಿ ನಡೆದ ` ಜೀವಶಾಸ್ತ್ರದಲ್ಲಿ ರಾಸಾಯನಿಕ ಸಂವಹನ’ ಕುರಿತ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರಕೃತಿ ಜತೆಗಿನ ಯುದ್ಧದ ಮೂಲಕ ಜೀವಸಂಕುಲಗಳಿಗೆ ಸಂಪನ್ಮೂಲಗಳನ್ನು ಕ್ರೋಢೀಕರಿಸದಂತೆ ಜೀವಶಾಸ್ತ್ರ ಮತ್ತು ರಸಾಯನಶಾಸ್ತ್ರದ ಕೂಡುವಿಕೆಯ ಅನ್ವೇಷಣೆಯಾಗಿದೆ. ಅನ್ವೇಷಣೆಗಳು ಭವಿಷ್ಯದ ಚಿಂತನೆಯನ್ನು ಒಳಗೊಂಡ ವಿಷಯದಲ್ಲಿ ಇರಬೇಕಿದೆ ಎಂದರು.
ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ. ಬೈರಪ್ಪ ಅಧ್ಯಕ್ಷತೆ ವಹಿಸಿದ್ದರು. ಇಂಡಸ್ಟ್ರಿಯಲ್ ಕೆಮೆಸ್ಟ್ರಿ ವಿಭಾಗ ಮುಖ್ಯಸ್ಥೆ ಹಾಗೂ ಕಾರ್ಯಕ್ರಮದ ಸಂಘಟಕಿ ಡಿ.ಕೆ .ಸರೋಜಿನಿ ಸ್ವಾಗತಿಸಿದರು. ಅವಿನಾಶ್ ಕುಡುವ ಅತಿಥಿಗಳನ್ನು ಪರಿಚಯಿಸಿದರು. ಅರುಣ್ ಕುಮಾರು ಕಾರ್ಯಕ್ರಮ ನಿರ್ವಹಿಸಿದರು.