ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಮುಡಿಪು: ಪಕ್ಷದಲ್ಲಿ ನಿಯತ್ತು , ಪ್ರಾಮಾಣಿಕತೆಯನ್ನು ಇರಿಸಿಕೊಂಡವರನ್ನು ಪಕ್ಷ ಒಂದು ರೀತಿಯಲ್ಲಿ ಗುರುತಿಸುತ್ತದೆ. ಈ ಮೂಲಕ ಪಕ್ಷದ ಗೌರವವನ್ನು ಉಳಿಸುವ ಕಾರ್ಯವನ್ನು ಚುನಾಯಿತ ಅಭ್ಯರ್ಥಿಗಳು ಮಾಡಬೇಕು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ಅವರು ಮುಡಿಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಮುಡಿಪು ಆಡಿಟೋರಿಯಂನಲ್ಲಿ ಮಂಗಳವಾರ ಆಯೋಜಿಸಲಾದ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಆಯ್ಕೆಯಾದ ಅಭ್ಯರ್ಥಿಗಳಿಗೆ ಅಭಿನಂದನೆ ಹಾಗೂ ಕಾರ್ಯಕರ್ತರಿಗೆ ಮತ್ತು ಮತದಾರರಿಗೆ ನಡೆದ ಕೃತಜ್ಞತಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಕುರ್ನಾಡಿನ ಮಮತಾ.ಡಿ.ಎಸ್.ಗಟ್ಟಿ, ಕೊಳ್ನಾಡು ಕ್ಷೇತ್ರದ ಎಂ.ಎಸ್.ಮಹಮ್ಮದ್, ಕೊಣಾಜೆಯ ರಶೀದಾ ಭಾನು ಹಾಗೂ ಮಾಣಿ ಕ್ಷೇತ್ರದ ಮಂಜುಳಾ ಮಾಧವ ಮಾವೆ ಮತ್ತು ತಾ.ಪಂ ಸದಸ್ಯರಾದ ಪಾವೂರಿನ ಮಹಮ್ಮದ್ ಮೋನು, , ಸಜಿಪ ಪಡು ಸದಸ್ಯೆ ಸವಿತಾ ಹೇಮಂತ್ ಕರ್ಕೇರ, ಬೋಳಿಯಾರು ಬಿ.ಕೆ.ಜಬ್ಬಾರ್, ಹರೇಕಳ ಅಂಬ್ಲಮೊಗರು ಕ್ಷೇತ್ರದ ಶಶಿಪ್ರಭಾ.ಡಿ.ಶೆಟ್ಟಿ, ಇರಾ ಕ್ಷೇತ್ರದ ಚಂದ್ರಹಾಸ್ ಕರ್ಕೇರ, ಬಾಳೆಪುಣಿ-ಕೈರಂಗಳದ ಹೈದರ್ ಕೈರಂಗಳ, ಮಂಜನಾಡಿಯ ಸುರೇಖಾ ಚಂದ್ರಹಾಸ್, ತಲಪಾಡಿಯ ಸಿದ್ಧೀಖ್, ವಿಟ್ಲಪಡ್ನೂರಿನ ಶೋಭಾ ರೈ, ಪುದು ಕ್ಷೇತ್ರದ ಇವರನ್ನು ಅಭಿನಂದಿಸಲಾಯಿತು.
ಪಕ್ಷದ ಮುಖಂಡರಾದ ಸದಾಶಿವ ಉಳ್ಳಾಲ್,ಪದ್ಮನಾಭ ನರಿಂಗಾನ, ವೆಂಕಪ್ಪ ಕಾಜವ , ಸಂಜೀವ ಗಟ್ಟಿ, ಎಸ್.ಅಬ್ಬಾಸ್, ಉಳ್ಳಾಲ ನಗರಸಭೆ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಹಾಸಿನಿ ಬಬ್ಬುಕಟ್ಟೆ, ಬಾಳೆಪುಣಿ ಕಾಂಗ್ರೆಸ್ ವಲಯ ಅಧ್ಯಕ್ಷ ಜಗದೀಶ ತಳಾೈ, ಜಿಲ್ಲಾ ಕಿಸಾನ್ ಘಟಕದ ಅಧ್ಯಕ್ಷ ರಾಜಗೋಪಾಲ್ ಭಟ್, ಬಾಳೆಪುಣಿ ಗ್ರಾ.ಪಂ ಅಧ್ಯಕ್ಷೆ ಲೀಲಾವತಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಟಿ.ಕೆ.ಸುಧೀರ್, ಕಾರ್ಪೊರೇಟರ್ ಅಪ್ಪಿ, ಯುವಕಾಂಗ್ರೆಸ್‍ನ ರಮಾನಂದ ಪೂಜಾರಿ, ಪಜೀರು ಗ್ರಾ.ಪಂ ಅಧ್ಯಕ್ಷ ಸೀತಾರಾಮ ಶೆಟ್ಟಿ, ಕೈರಂಗಳ ಕಾಂಗ್ರೆಸ್ ವಲಯ ಅಧ್ಯಕ್ಷ ಮೌರಿಸ್ ಡಿಸೋಜಾ, ಯಸ್.ಅಬೂಬಕರ್, ಮೋರ್ಲ ಚಂದ್ರಹಾಸ್ ಶೆಟ್ಟಿ, ನರಿಂಗಾನ ಪಂ.ಅಧ್ಯಕ್ಷ ಇಸ್ಮಾಯಿಲ್ ಮೀನಂಕೋಡಿ, ಇರಾ ವಲಯ ಕಾಂಗ್ರೆಸ್ ಅಧ್ಯಕ್ಷ ಅನಿಲ್, ಅಬ್ದುಲ್ ನಾಸಿರ್, ಅಂಬ್ಲಮೊಗರು ಪಂ.ಅಧ್ಯಕ್ಷ ರಫೀಕ್ ಅಂಬ್ಲಮೊಗರು, ಪಾವೂರು ತಾ.ಪಂ ಮಾಜಿ ಸದಸ್ಯ ಮುಸ್ತಾಫ ಹರೇಕಳ, ವಿಠಲ್ ಕುಲಾಲ್, ನಝರ್ ಷಾ, ಉಮ್ಮರ್ ಫಜೀರು ಮೊದಲಾದವರು ಉಪಸ್ಥಿತರಿದ್ದರು.
ಇರಾ ಗ್ರಾ.ಪಂ ಅಧ್ಯಕ್ಷ ರಝಾಕ್ ಕುಕ್ಕಾಜೆ ಮತ್ತು ಬಶೀರ್ ಕಾರ್ಯಕ್ರಮ ನಿರ್ವಹಿಸಿದರು. ಮುಡಿಪು ಬ್ಲಾಕ್ ಪ್ರ.ಕಾರ್ಯದರ್ಶಿ ಅಬ್ದುಲ್ ಜಲೀಲ್ ಸ್ವಾಗತಿಸಿದರು. ಮುಡಿಪು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಪ್ರಶಾಂತ್ ಕಾಜವ ವಂದಿಸಿದರು.