ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಶಿಕ್ಷಿತ ಮಾನವ ಸಂಪನ್ಮೂಲದ ಮಹತ್ವವನ್ನು ಮನಗಾಣುತ್ತಾ, ಮಾನ್ಯ ವಿತ್ತ ಮಂತ್ರಿಗಳು 2016-17ನೇ ವಾರ್ಷಿಕ ಆಯವ್ಯಯ ಪತ್ರದಲ್ಲಿ ಕೆಲವಾರು ಮಹತ್ವದ ಘೋಷಣೆಗಳನ್ನು ಮಾಡಿರುತ್ತಾರೆ. ಖಾಸಗಿ ಮತ್ತು ಸಾರ್ವಜನಿಕ ಕ್ಷೇತ್ರಗಳೆರಡರಲ್ಲೂ ಹತ್ತು ಜಾಗತಿಕ ಮಟ್ಟದ ಶಿಕ್ಷಣ ಸಂಸ್ಥೆಗಳನ್ನು ಅಭಿವೃದ್ಧಿ ಪಡಿಸುವುದು, ದೇಶದಾದ್ಯಂತ 1500 ಬಹು ಕೌಶಲ್ಯ ಕೇಂದ್ರಗಳನ್ನು ಸುಮಾರು 1700 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವುದು, 1000 ಕೋಟಿ ರೂಪಾಯಿಯ ಹೂಡಿಕೆಯೊಂದಿಗೆ ಡಿಜಿಟಲ್ ರೆಪೆÇೀಸಿಟರಿಯನ್ನು ಸ್ಥಾಪಿಸುವುದು ಮುಂತಾದುವು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಬಲ್ಲ ಅಂಶಗಳು. ಇವುಗಳೊಂದಿಗೆ, ಸುಸ್ಥಿರ ಶೈಕ್ಷಣಿಕ ನೀತಿಗಳು ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ನಾಯಕತ್ವದ ಬೆಳವಣಿಗೆಗೆ ಸಹಕಾರಿಯಾಗಬಲ್ಲ ಸಂಸ್ಥೆಗಳ ಪ್ರಾಯೋಜಕತ್ವ ಬಹುಶಃ ಶೈಕ್ಷಣಿಕ ಕ್ಷೇತ್ರಕ್ಕೆ ವಿತ್ತ ಮಂತ್ರಿಗಳು ಕೊಡಮಾಡಬಲ್ಲ ಉತ್ಕೃಷ್ಟ ಕೊಡುಗೆಗಳಾಗಬಹುದಿತ್ತೇನೋ.
ಡಾ|| ಎಂ.ಎಸ್. ಮೂಡಿತ್ತಾಯ
ಕುಲಸಚಿವರು,
ನಿಟ್ಟೆ ವಿಶ್ವವಿದ್ಯಾನಿಲಯ
ಮಂಗಳೂರು