ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ : ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ವತಿಯಿಂದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಧೈರ್ಯತುಂಬುವ ದೃಷ್ಟಿಯಿಂದ ರಾಜ್ಯದ ಹತ್ತು ಕೇಂದ್ರಗಳಲ್ಲಿ ನಡೆಯುತ್ತಿರುವ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಕಾನ್ಫಿಡೆನ್ಸ್ ಟೆಸ್ಟ್ ಹಝ್ರತ್ ಇಂಗ್ಲೀಷ್ ಮೀಡಿಯಮ್ ಸ್ಕೂಲ್ ಉಳ್ಳಾಲದಲ್ಲಿ ನಡೆಯಿತು. ಕೊಠಡಿ ಮೇಲ್ವಿಚಾರಕರಾಗಿ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು, ಮುಸ್ತಫಾ ಮಾಸ್ಟರ್ ಉಳ್ಳಾಲ, ಜಿ. ಎ. ಇಬ್ರಾಹಿಂ ಅಜ್ಜಿನಡ್ಕ, ಅನ್ಸಾರ್ ಮಾಸ್ಟರ್ ಫಜೀರು, ಶಿಯಾಬುದ್ಧೀನ್ ತಲಪಾಡಿ ಹಾಗೂ ಹಮೀದ್ ತಲಪಾಡಿ ಉಪಸ್ಥಿತರಿದ್ದರು.