Site icon Ullalavani

ಲಡ್ಡು ವಿವಾದ: ಇಬ್ಬರು ಆಸ್ಪತ್ರೆಗೆ ದಾಖಲು

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಮುಡಿಪು: ವೈಯಕ್ತಿಕ ವಿಚಾರದಲ್ಲಿ ಅರಾಫತ್ ಹನೀಫ್ ಎಂಬಾತನಿಗೆ ಮೂವರ ತಂಡ ಹಲ್ಲೆ ನಡೆಸಿದ ಘಟನೆ ಮುಡಿಪುವಿನಲ್ಲಿ ನಡೆದಿದ್ದು, ತಲೆಗೆ ಗಾಯವಾಗಿರುವ ಹನೀಫ್ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹಲ್ಲೆ ನಡೆಸಿದ ಆರೋಪಿಗಳನ್ನು ನವಾಝ್, ಅಬ್ದುಲ್ ಖಾದರ್, ಮತ್ತು ಆತನ ಪುತ್ರ ಅಝೀನ್ ಎಂಬವರಾಗಿದ್ದು. ಚುನಾವಣೆ ಪಲಿತಾಂಶದ ಹಿನ್ನಲೆಯಲ್ಲಿ ಕಾಂಗ್ರೆಸ್ ಮುಡಿಪುವಿನಲ್ಲಿ ವಿಜಯೋತ್ಸವ ನಡೆಸಿದ್ದು ಈ ಸಂದರ್ಭದಲ್ಲಿ ಸಿಹಿತಿಂಡಿ ಹಂಚಿದ ತಂಡದಲ್ಲಿದ್ದ ಅಬ್ದುಲ್ ಖಾದರ್ ಲಾಡೊಂದನ್ನು ಹನೀಫ್‍ನಿಗೆ ನೀಡಿದ್ದು, ಆತ ನಿರಾಕರಿಸಿದಾಗ ವ್ಯಂಗ್ಯವಾಗಿ ಮಾತನಾಡಿದ ಖಾದರ್ ಮೇಲೆ ಹಲ್ಲೆ ನಡೆಸಲು ಬಂದಿದ್ದ ಎನ್ನಲಾಗಿದೆ.

ಈ ಸಂದರ್ಭದಲ್ಲಿ ಪಕ್ಕದಲ್ಲೇ ಇದ್ದ ಖಾದರ್ ಪುತ್ರ ಅಝೀನ್ ಮತ್ತು ಈ ಹಿಂದೆ ಹಲ್ಲೆ ಪ್ರಕರಣಗಳಲ್ಲಿ ಭಾಗಿಯಾಗಿಇರುವ ನವಾಝ್ ಹನೀಫ್ ಮೇಲೆ ಬಾಟ್ಲಿಯಿಂದ ಹಲ್ಲೆ ನಡೆಸಿದ್ದಾರೆ. ಗಾಯಗೊಂಡಿರುವ ಹನೀಫ ದೇರಳಕಟ್ಟೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರೋಪಿಗಳಿಗಾಗಿ ಕೊಣಾಜೆ ಪೆÇಲೀಸರು ಹುಡುಕಾಟ ನಡೆಸಿದ್ದಾರೆ. ಕೊಣಾಜೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version