ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕುತ್ತಾರು: ಯುವಜನತೆ ಶಕ್ತಿಯನ್ನು ಧನಾತ್ಮಕ ಚಿಂತನೆಗಳಿಗೆ ಉಪಯೋಗಿಸುವ ಮೂಲಕ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಕುತ್ತಾರು ಬಾಲಸಂರಕ್ಷಣಾ ಕೇಂದ್ರದ ಸಂಚಾಲಕ ಡಾ.ಪಿ.ಅನಂತಕೃಷ್ಣ ಭಟ್ ಅಭಿಪ್ರಾಯಪಟ್ಟರು.
ಹಿಂದು ಸಂಸ್ಕøತಿ ಉಳಿವಿಗಾಗಿ ಯುವಜನತೆ ಧನಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಮುಂದೆ ಸಾಗಬೇಕಿದೆ. ಈ ಮೂಲಕ ಹಿಂದು ಸಮಾಜದ ಆಚಾರ ವಿಚಾರ ಹಾಗೂ ಸೊತ್ತುಗಳನ್ನು ಭದ್ರವಾಗಿಸಿಕೊಳ್ಳಬಹುದು ಎಂದರು.
ವಿಶ್ವ ಹಿಂದು ಪರಿಷತ್ ಪ್ರಾಯೋಜಿತ ಸಂಸ್ಥೆ ಮಂಗಳೂರು ಗೋವನಿತಾಶ್ರಯ ಟ್ರಸ್ಟ್‍ನ ಪಜೀರು ಬೀಜಗುರಿ ಗೋಶಾಲಾ ವಠಾರದಲ್ಲಿ ಮಾ.5,6 ರಂದು 16 ನೇ ನಡೆಯಲಿರುವ ವರ್ಷಾಚರಣೆಯ ಮಾಹಿತಿ ನೀಡಿದರು.
. ನಿವೃತ್ತ ಸೇನಾನಿ ಅಪ್ಪು ಶೆಟ್ಟಿ, ನಿವೃತ್ತ ಸೇನಾನಿ ಪ್ರವೀಣ್ ಶೆಟ್ಟಿ ಪಿಲಾರ್, ವಿಶ್ವ ಹಿಂದುಪರಿಷತ್ ಉಳ್ಳಾಲ ಪ್ರಖಂಡದ ಅಧ್ಯಕ್ಷ ಹರಿದಾಸ್ ಮಾಡೂರು ಮುಖ್ಯ ಅತಿಥಿಗಳಾಗಿದ್ದರು.
ವಿ.ಹಿಂ.ಪ ಪ್ರಖಂಡ ಕಾರ್ಯದರ್ಶಿ ನಾರಾಯಣ ಕುಂಪಲ ಸ್ವಾಗತಿಸಿದರು. ವಿ.ಹಿಂ.ಪ ಜಿಲ್ಲಾ ಕಾರ್ಯದರ್ಶಿ ಗೋಪಾಲ್ ಕುತ್ತಾರ್ ವಂದಿಸಿದರು.