ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ದೇರಳಕಟ್ಟೆ: ಮಕ್ಕಳ ಹೆರಿಗೆ ವಿಚಾರದಲ್ಲಿ ವಿಶೇಷ ಕಾರ್ಯಕ್ರಮವನ್ನು ಕಣಚೂರು ಆಸ್ಪತ್ರೆ ಹಮ್ಮಿಕೊಂಡಿದ್ದು, ಕಣಚೂರು ಶಿಶು ಭವಿಷ್ಯ ನಿಧಿಯನ್ನು ಆಸ್ಪತ್ರೆಯಲ್ಲಿ ಹೆರಿಗೆಯಾದ ತಾಯಂದಿರಿಗೆ ನೀಡಲಾಗುವುದು ಎಂದು ಕಣಚೂರು ಆಸ್ಪತ್ರೆಯ ನಿರ್ದೇಶಕ ಅಬ್ದುಲ್ ರಹಿಮಾನ್ ಅಭಿಪ್ರಾಯಪಟ್ಟರು.
ಕಣಚೂರು ಆಸ್ಪತ್ರೆ ಕಳೆದ ಹಲವು ಸಮಯದಿಂದ ಸ್ಕ್ಯಾನಿಂಗ್ ನಿಂದ ಹಿಡಿದು ಉಚಿತ ಶುಶ್ರೂಷೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಮಾರ್ಚ್ ತಿಂಗಳವರೆಗೆ ಕಾರ್ಯಕ್ರಮ ಇರುವುದರಿಂದ ಎಲ್ಲರೂ ಇದನ್ನು ವಿನಿಯೋಗಿಸಬೇಕು ಎಂದರು.
ಬೆಳ್ಮ ಕೇಂದ್ರ ಮಸೀದಿಯ ಪಿ.ಎ.ಉಸ್ಮಾನ್ ಮದನಿ ದುಆ ನೆರವೇರಿಸಿದರು. ಕಣಚೂರು ಆಸ್ಪತ್ರೆ ಚೇರ್ ಮೆನ್ ಯು.ಕಣಚೂರು ಮೋನು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ,21ನೇ ವಾರ್ಷಿಕ ಕಾರ್ಯಕ್ರಮದ ಸ್ವಾಗತ ಸಮಿತಿಯ ಎಚ್.ಎಚ್.ಕುಂಞÂ ಅಹಮ್ಮದ್, ಆಡಳಿತಾಧಿಕಾರಿ ರೋಹನ್ ಮೊಂತೇರೊ, ಮೆಡಿಕಲ್ ಸುಪರಿಟೆಂಡೆಂಟ್ ಡಾ.ದೇವಿಪ್ರಸಾದ್, ಬೆಳ್ಮ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಬಿ.ಎಸ್.ಇಸ್ಮಾಯಿಲ್, ರೆಂಜಾಡಿ ಶಾಲೆ ಮುಖ್ಯೋಪಾಧ್ಯಾಯ ಯು.ಅಬ್ದುಲ್ ಕುಂಞÂ, ಅಂಬ್ಲಮೊಗರು ಪಂ.ಸದಸ್ಯ ರಾಜೇಶ್ ಕಂಡಿಲ, ಬೆಳ್ಮ ಬರಿಕೆಯ ಪೊಸಭೂತ ಬಂಟ ದೈವಸ್ಥಾನದ ಆಡಳಿತ ಮೊಕ್ತೇಸರ ಅಶೋಕ್ ರೈ, ರೆಂಜಾಡಿಯ ಖತೀಬರಾದ ಅಬ್ದುಲ್ ಖಾದರ್ ಮುಸ್ಲಿಯಾರ್, ಎಸ್ ಎಸ್ ಎಫ್ ದೇರಳಕಟ್ಟೆ ಸೆಕ್ಟರ್ ಅಧ್ಯಕ್ಷ ಸಿದ್ದೀಕ್ ಮದನಿ, ಮುಡಿಪು ಕಾಯರ್ ಕೇರ್ ಆಸ್ಪತ್ರೆಯ ಅಬ್ದುಲ್ ರಹಿಮಾನ್, ಬೆಳ್ಮ ಕಲ್ಪಾದೆ ಮಸೀದಿ ಅಧ್ಯಕ್ಷ ಸತ್ತಾರ್ ಕಲ್ಪಾದೆ, ಎಸ್ ವೈಎಸ್ ರೆಂಜಾಡಿಯ ಅಧ್ಯಕ್ಷ ಬಿ.ಎಸ್.ಬಾವುಂಞÂ, ಬೆಳ್ಮ ಕೇಂದ್ರ ಜುಮಾ ಮಸೀದಿ ಉಪಾಧ್ಯಕ್ಷ ಮೋನು ಬೋರಿಯ, ಎಸ್ ಎಸ್ ಎಫ್ ರೆಂಜಾಡಿ ಅಧ್ಯಕ್ಷ ಸ್ವಾಲಿಹ್.ಬಿ.ಆರ್ ಉಪಸ್ಥಿತರಿದ್ದರು.
ಎಸ್ ಎಸ್ ಎಫ್ ರೆಂಜಾಡಿ ಶಾಖೆಯ ಪ್ರಧಾನ ಕಾರ್ಯದರ್ಶಿ ಯು.ಎ. ಮಹಮ್ಮದ್ ಸಫೀರ್ ಕಾರ್ಯಕ್ರಮ ನಿರ್ವಹಿಸಿದರು. ಅಬ್ದುಲ್ ಲತೀಫ್ ವಂದಿಸಿದರು