ಕೊಣಾಜೆ:ಶ್ರೀ ನಾಗಬ್ರಹ್ಮ ಭಜನಾ ಮಂಡಳಿ ಪಟ್ಟೋರಿ(ರಿ) ಕೊಣಾಜೆ ಇದರ ವಾರ್ಷಿಕ ಮಹಾಸಭೆಯು ಶ್ರೀ ನಾಗಬ್ರಹ್ಮ ಉಳ್ಳಾಲ್ತಿ ದೈವಸ್ಥಾನದಲ್ಲಿ ಇತ್ತೀಚೆಗೆ ನಡೆಯಿತು.
ಸಭೆಯಲ್ಲಿ 2016-17ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಗಂಗಾಧರ ಎಂ. ಪಟ್ಟೋರಿ ಹಾಗೂ ಪ್ರದಾನ ಕಾರ್ಯದರ್ಶಿಯಾಗಿ ಮೋಹನ ಕಾಟುಕೋಡಿ ಅವರು ಆಯ್ಕೆಯಾದರು. ಗೌರವ ಅಧ್ಯಕ್ಷರಾಗಿ ಸತ್ಯನಾರಾಯಣ ಭಟ್ ಕೊಣಾಜೆ, ರಘುರಾಮ ಕಾಜವ ಪಟ್ಟೋರಿ, ಗೌರವ ಸಲಹೆಗಾರರಾಗಿ ಬಂಟು ಕೆ, ಕರುಣಾಕರ ಕಾನ, ಶ್ರೀನಿವಾಸ ಕಾಜವ, ದಿವಾಕರ ಭಂಡಾರಿ, ರಾಮಕೃಷ್ಣ ಪಟ್ಟೋರಿ, ಉಪಾಧ್ಯಕ್ಷರಾಗಿ ಸದಾಶಿವ ಪಟ್ಟೋರಿ, ಹರೀಶ್ ನಡುಪದವು, ಜೊತೆಕಾರ್ಯದರ್ಶಿಗಳಾಗಿ ರಾಕೇಶ್ ಪಟ್ಟೋರಿ, ಯತೀನ್ ಮದಕ, ಕೋಶಾಧಿಕಾರಿಯಾಗಿ ರಾಧಾಕೃಷ್ಣ ಕಲಾಯಿ, ಸಂಘಟನಾ ಕಾರ್ಯದರ್ಶಿಗಳಾಗಿ ಸಂತೋಷ್ ಪಟ್ಟೋರಿ, ನವೀನ್ ಪಟ್ಟೋರಿ, ಲೆಕ್ಕ ಪರಿಶೋಧಕರಾಗಿ ಬಂಟು ಕೆ.ಕಾಟುಕೋಡಿ, ಮಾಧ್ಯಮ ಸಲಹೆಗಾರರಾಗಿ ಸತೀಶ್, ಸಾಂಸ್ಕøತಿಕ ಕಾರ್ಯದರ್ಶಿಯಾಗಿ ಮೋಹನ್ ಶಿರ್ಲಾಲ್ ಆಯ್ಕೆಯಾದರು.