ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಇರಾ:ಉಳ್ಳಾಲ ಸಾಹಿತ್ಯ ಪ್ರಕಾರದಲ್ಲಿ ಚುಟುಕು ಆಸಕ್ತಿದಾಯಕ ಅಂಶಗಳನ್ನು ಹೊಂದಿದೆ. ಜೀವನ ಉಲ್ಲಾಸ ದೊರೆಯುವುದಕ್ಕೆ ಸಾಹಿತ್ಯ ಕ್ಷೇತ್ರ ಬಹುದೊಡ್ಡ ಕಾಣಿಕೆ ನೀಡಿದೆ. ಆದರೆ ಪ್ರಸಕ್ತ ಕಾಲಘಟ್ಟದಲ್ಲಿ ಸಾಹಿತ್ಯ ಕ್ಷೇತ್ರದಲ್ಲೂ ರಾಜಕೀಯ ಮತ್ತು ಇಜಂಗಳು ಕಂಡುಬರುತ್ತಿದ್ದು ಅದು ಸಾಹಿತ್ಯದ ಏಳಿಗೆಯ ದೃಷ್ಟಿಯಿಂದ ಶೋಭೆ ತರುವಂತದ್ದಲ್ಲ ಎಂದು ಮಂಗಳೂರಿನ ಕರಾವಳಿ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಸ್. ಗಣೇಶ್ ರಾವ್ ಹೇಳಿದರು.
ಕೇಂದ್ರ ಚುಟುಕು ಸಾಹಿತ್ಯ ಪರಿಷತ್ ಮೈಸೂರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಇರಾ ಶ್ರೀ ಸೋಮನಾಥೇಶ್ವರ ಕಲಾಮಂಟಪದ ಕಲ್ಲಾಡಿ ವಿಠಲ ಶೆಟ್ಟಿ ವೇದಿಕೆಯಲ್ಲಿ ಭಾನುವಾರ ನಡೆದ ರಾಜ್ಯ ಮಟ್ಟದ ಸಾಹಿತಿಗಳ ಚುಟುಕು ಕವಿಗಳ ಸಮ್ಮಿಲನ ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯ ಸಾಹಿತಿ ಏರ್ಯ ಲಕ್ಷಿ ್ಮನಾರಾಯಣ ಆಳ್ವ ಮಾತನಾಡಿ ಸಾಹಿತ್ಯ ಮತ್ತು ಸಂಗೀತದ ಮೂಲಕ ವಿಶ್ವಮಾನವ ಗುಣವನ್ನು ಬೆಳೆಸಿಕೊಳ್ಳಲು ಸಾಧ್ಯ. ಆ ನಿಟ್ಟಿನಲ್ಲಿ ಯುವಕರು ಸಾಹಿತ್ಯಕೃಷಿಯತ್ತ ಗಲನ ಹರಿಸಬೇಕು ಎಂದು ಕಿವಿಮಾತು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಕೇಂದ್ರ ಚುಟುಕು ಸಾಹಿತ್ಯ ಪರಿಷತ್‍ನ ರಾಜ್ಯ ಪ್ರಧಾನ ಸಂಚಾಲಕ ಡಾ. ಎಂ. ಜಿ. ಆರ್. ಅರಸು ಮೈಸೂರು ಮಾತನಾಡಿ ಅಹಿಂಸೆ ಅತೃಪ್ತಿ ಅಸಮಾಧಾನಕ್ಕೆ ದಿವ್ಯ ಔಷಧವೆಂದರೆ ಚುಟುಕು. ಪ್ರಸಕ್ತ ಯಾಂತ್ರಿಕ ಯುಗದಲ್ಲಿ ತಾಂತ್ರಿಕವಾಗುತ್ತಿದ್ದೇವೆ. ಪ್ರೀತಿ ವಿಶ್ವಾಸಕ್ಕೆ ಧಕ್ಕೆಯಾಗುತ್ತಿದ್ದು ಚುಟುಕು ಪರಿಹಾರದ ಮಾರ್ಗ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ, ಯಕ್ಷಗಾನ ಕಲಾವಿದ ಕುಂಬ್ಳೆ ಸುಂದರ್ ರಾವ್ ಹಾಗೂ ಶ್ವೇತಾ ರಾವ್ ಅರೆಹೊಳೆ ಅವರನ್ನು ಸನ್ಮಾನಿಸಲಾಯಿತು. ಕಾಸರಗೋಡು ಅಶೋಕ್ ಕುಮಾರ್ ಮತ್ತು ಮಹೇಂದ್ರನಾಥ ಸಾಲೆತ್ತೂರು ಬರೆದ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಯು.ಟಿ.ಖಾದರ್, ಹಿರಿಯ ಸಾಹಿತಿ ಎನ್. ಜಿ. ಪಟವರ್ದನ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಿ.ಎಂ.ಕುಲಾಲ್, ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಪ್ರಮುಖರಾದ ವೇಣುಗೋಪಾಲ ಭಂಡಾರಿ ಬಾವಬೀಡು, ನ್ಯಾಯವಾದಿ ಟಿ. ನಾರಾಯಣ ಪೂಜಾರಿ, ಇರಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಸಾಹಿತಿಗಳಾದ ರತ್ನಾ ಹಾಲಪ್ಪ ಗೌಡ, ಅತ್ರಾಡಿ ಪೃಥ್ವಿರಾಜ್ ಹೆಗ್ಡೆ, ಆನಂದ ಬಂಜನ್, ಸುರತ್ಕಲ್ ಗೋವಿಂದದಾಸ ಕಾಲೇಜಿನ ಪೆÇ್ರಫೆಸರ್ ಪಿ. ಕೃಷ್ಣಮೂರ್ತಿ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‍ನ ಪ್ರಧಾನ ಕಾರ್ಯದರ್ಶಿ ನಾರಾಯಣಯ್ಯ ಮೂಳೂರು ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‍ನ ಅಧ್ಯಕ್ಷ ಇರಾ ನೇಮು ಪೂಜಾರಿ ಸ್ವಾಗತಿಸಿದರು. ಬಂಟ್ವಾಳ ತಾಲೂಕು ಚುಟುಕು ಸಾಹಿತ್ಯ ಪರಿಷತ್‍ನ ಅಧ್ಯಕ್ಷ ಡಾ. ಪ್ರಶಾಂತ್ ಕುಮಾರ್ ಕಲ್ಲಡ್ಕ ವಂದಿಸಿದರು. ಪತ್ರಕರ್ತ ದಿನೇಶ್ ಇರಾ ಹಾಗೂ ಎನ್. ಸುಬ್ರಾಯ ಭಟ್ ಕಾರ್ಯಕ್ರಮ ನಿರೂಪಿಸಿದರು.